ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ಕುಟುಬದವರು ಹಾಗೂ ಅಭಿಮಾನಿಗಳನ್ನು ಅಗಲಿ ಒಂದು ವರ್ಷವಾಗುತ್ತಿದೆ. ಈ ನೆನಪನ್ನು ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕವಾಗಿ ನೆನಪು ಮಾಡಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ನಿಧನರಾದಾಗಿನಿಂದಲೂ ಮೇಘನಾ ರಾಜ್ ಮತ್ತು ಅವರ ಕುಟುಂಬ ಜ್ಯೂನಿಯರ್ ಸರ್ಜಾ ಅವರನ್ನು ನೋಡುತ್ತಾ ಸ್ಟ್ರಾಂಗ್ ಆಗಿ ನಗುಮಖದಿಂದಲೇ ಇತ್ತು. ತಮ್ಮ ಪುಟ್ಟ ಮಗನ ಸಂತೋಷದ ಫೋಟೋಗಳನ್ನು ಮತ್ತು ಚಿರಂಜೀವಿ ಅವರ ನೆನಪುಗಳನ್ನು ಮೇಘನಾ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಚಿರಂಜೀವಿ ಸರ್ಜಾ ಅವರು ನಮ್ಮನ್ನು ಅಗಲಿ ಒಂದು ವರ್ಷ ಆಗಿರುವ ನೆನಪಿಗೆ ಇಬ್ಬರು ಒಟ್ಟಿಗೆ ಇರುವ ಸುಂದರವಾದ ಕ್ಯಾಂಡಿಡ್ ಫೋಟೋವನ್ನು ಹಂಚಿಕೊಂಡಿದ್ದು, “ಯುಎಸ್ ಮೈನ್” ಎಂದು ಶೀರ್ಷಿಕೆ ನೀಡಿದ್ದಾರೆ.ಇದನ್ನೂ ಓದಿ: ಶುರುವಾಯ್ತೊಂದು ಹೊಸ ಹಾದಿ – ಪಪ್ಪಿ ತೋರಿಸಿದ ರಕ್ಷಿತ್ ಶೆಟ್ಟಿ
View this post on Instagram
ಕನ್ನಡ ಚಲನಚಿತ್ರೋದ್ಯಮದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾದ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ 2020ರ ಜೂನ್ 7ರಂದು ನಿಧನರಾದರು. ಚಿರಂಜೀವಿ ಸರ್ಜಾ ನಿಧನಕ್ಕೆ ಅವರ ಕುಟುಂಬ ಮಾತ್ರವಲ್ಲದೇ ಅವರ ಅಭಿಮಾನಿ ಬಳಗವೇ ಕಣ್ಣೀರು ಹಾಕಿತ್ತು. ಚಿರು ಅಣ್ಣ ಪ್ರೀತಿಯಲ್ಲಿ ಗುಣವಂತ ನಗುವಿನಲ್ಲಿ ಶ್ರೀಮಂತ ಅಭಿಮಾನಿಗಳ ಮನಸ್ಸಲ್ಲಿ ಎಂದಿಗೂ ಜೀವಂತ ಮಿಸ್ ಯು ಚಿರು ಅಣ್ಣ ಎಂದೆಲ್ಲಾ ಅಭಿಮಾನಿಗಳು ಮೇಘನಾ ಶೇರ್ ಮಾಡಿರುವ ಫೋಟೋಗಳಿಗೆ ಕಮೆಂಟ್ ಮಾಡುತ್ತಿದ್ದಾರೆ.