ನೆಲಮಂಗಲ: ಅರಣ್ಯ ಪ್ರದೇಶದಲ್ಲಿ ಆಹಾರ ಸಿಗದೆ ಕಾಡು ಪ್ರಾಣಿಗಳು ಗ್ರಾಮಗಳತ್ತ ಮುಖ ಮಾಡಿವೆ. ಮನೆಗಳಿಗೆ ದಾಳಿ ಮಾಡುತ್ತಿದ್ದ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನೆಲಮಂಗಲದ ಗ್ರಾಮಗಲ್ಲಿ ಬೋನ್‍ಗಳನ್ನು ಅಳವಡಿಸಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀನಿವಾಸಪುರ ಹಾಗೂ ಬ್ಯಾಡರಹಳ್ಳಿ ಗ್ರಾಮದ ಬಳಿ ಚಿರತೆಯ ಹೆಜ್ಜೆ ಹಾಗೂ ಅದರ ಓಡಾಟವನ್ನ ಗಮನಿಸಿ ಎರಡು ಕಡೆ ಬೋನ್ ಇಡಲಾಗಿದ್ದು, ನೆಲಮಂಗಲ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಜನರಿಗೆ ಹಾಗೂ ಜಾನುವಾರಗಳಿಗೆ ಸಮಸ್ಯೆಯಾಗದಂತೆ ಕಣ್ಗಾವಲಿಟ್ಟಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವಕ್ಕೆ ನಾಟಕ ಅಭ್ಯಾಸ ಮಾಡುತ್ತಾ ಪ್ರಾಣ ಕಳೆದುಕೊಂಡ ಬಾಲಕ
Advertisement
Advertisement
ಚಿರತೆಯ ಹೆಜ್ಜೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಭಾಗ, ಸೋಂಪುರದ ಕೆಲವು ಗ್ರಾಮ ಹಾಗೂ ತೊರೆಕೆಂಪಹಳ್ಳಿ, ಶ್ರೀನಿವಾಸಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಚಿರತೆಗಳು ಓಡಾಟ ಮಾಡಿದ್ದು, ಹೆಜ್ಜೆಗಳ ಗುರುತಿನ ಆಧಾರದಲ್ಲಿ ಬೋನ್ ಅಳವಡಿಸಲಾಗಿದೆ. ನಗರಕ್ಕೆ ಕೇವಲ 4 ಕಿಮೀ ಸಮೀಪವೇ ಚಿರತೆ ಹೆಜ್ಜೆ ಗುರುತು ಕಂಡುಬಂದಿದ್ದು ನಗರದ ಜನರಲ್ಲಿ ಆತಂಕ ಎದುರಾಗಿದೆ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಮಾಡಿ ನೋಡಿ ಪೋರ್ಕ್ ಬಿರಿಯಾನಿ
Advertisement
Advertisement
ಅಧಿಕಾರಿಗಳ ಸಲಹೆ ಪಾಲಿಸಿ ಅರಣ್ಯ ಒತ್ತುವರಿ, ಅರಣ್ಯ ನಾಶ, ಕಲ್ಲು ಗಣಿಗಾರಿಕೆ ಸೇರಿದಂತೆ ಅನೇಕ ಮಾನವ ನಿರ್ಮಿತ ಸಮಸ್ಯೆಗಳಿಂದ ಕಾಡು ಪ್ರಾಣಿಗಳು ಹಾಗೂ ಚಿರತೆಗಳು ನಗರ ಸಮೀಪದ ಗ್ರಾಮಗಳಿಗೆ ನುಗ್ಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಜನರು ಕತ್ತಲೆಯಾದ ನಂತರ ಓಡಾಡುವುದು ನಿಲ್ಲಿಸಬೇಕು. ಜಾನುವಾರುಗಳನ್ನು ಹೊರಭಾಗದಲ್ಲಿ ಕಟ್ಟದಿರುವುದು, ಕೊಟ್ಟಿಗೆ ಮನೆಯನ್ನು ಸಂಪೂರ್ಣ ಮುಚ್ಚುವುದು ಸೇರಿದಂತೆ ವಿವಿಧ ಮುಂಜಾಗ್ರತೆ ಕ್ರಮಗಳನ್ನು ಜನರು ವಹಿಸಬೇಕಾಗಿದೆ. ಅರಣ್ಯ ಇಲಾಖೆ ಈಗಾಗಲೇ ಚಿರತೆ ಸೆರೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದು ಶೀಘ್ರದಲ್ಲಿ ಚಿರತೆ ಸೆರೆ ಹಿಡಿದು, ಜನರ ಆತಂಕ ದೂರ ಮಾಡಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಲಷ್ಕರ್ ತಿಳಿಸಿದ್ದಾರೆ.