ಡೆಹ್ರಾಡೂನ್: ಚಿಪ್ಕೋ ಚಳುವಳಿಯ ನಾಯಕ ಸುಂದರ್ ಲಾಲ್ ಬಹುಗುಣ ಅವರು ಇಂದು ಉತ್ತರಾಖಂಡದ ರಿಷಿಕೇಶ್ ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
Advertisement
ಸುಂದರ್ ಲಾಲ್ ಬಹುಗುಣ ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಅವರನ್ನು ರಿಷಿಕೇಶ್‍ನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
Advertisement
Chipko movement leader Sundarlal Bahuguna died of COVID19 at AIIMS, Rishikesh today, says AIIMS Rishikesh Administration
(File photo) pic.twitter.com/6QQGf0vYm5
— ANI (@ANI) May 21, 2021
Advertisement
ತನ್ನ ಜೀವಮಾನವಿಡಿ ಪರಿಸರವಾದಿಯಾಗಿ ಗುರಿತಿಸಿಕೊಂಡಿದ್ದ ಸುಂದರ್‍ಲಾಲ್ ಬಹುಗುಣ ಅವರು ಚಿಪ್ಕೋ ಚಳುವಳಿ ಮೂಲಕ ಮರಗಳನ್ನು ಕಡಿಯದಂತೆ ಆಂದೋಲನವನ್ನು ಪ್ರಾರಂಭಿಸಿದ್ದರು. ಬಳಿಕ 1990ರಲ್ಲಿ ತೇರಿ ಡ್ಯಾಮ್ ಆಂದೋಲನ ಪ್ರಾರಂಭಿಸಿದ್ದರು ಇದರ ಭಾಗವಾಗಿ 1995ರಲ್ಲಿ ಜೈಲುವಾಸ ಕೂಡ ಅನುಭವಿಸಿದ್ದರು. ಇವರ ಪರಿಸರ ಆಂದೋಲನವನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.