ಚಿನ್ನಾಭರಣ ಕದಿಯುತ್ತಿದ್ದವ ಅರೆಸ್ಟ್- 13 ಲಕ್ಷ ಮೌಲ್ಯದ ಆಭರಣ ವಶಕ್ಕೆ

Public TV
0 Min Read
arrest

ಬೆಂಗಳೂರು: ಚಿನ್ನಾಭರಣ ಕದಿಯುತ್ತಿದ್ದ ಐನಾತಿ ಕಳ್ಳನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

ಸೈಯ್ಯದ್ ರಿಯಾಜ್(46) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 13 ಲಕ್ಷ ಬೆಲೆಬಾಳುವ 271 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ಹಿಂದೆಯೂ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ, ಇತ್ತೀಚೆಗೆ ಜೈಲಿನಿಂದ ಹೊರಬಂದು ಮತ್ತೆ ಅದೇ ಕೆಲಸಕ್ಕೆ ಇಳಿದಿದ್ದ.

Police Jeep 1 2 medium

ಕಳೆದ ಮಾರ್ಚ್ 15ರಂದು ಬಿಎಚ್‍ಇಎಲ್ ಲೇಔಟ್ ನಲ್ಲಿ ಮೊಹಮ್ಮದ್ ರಫೀಕ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ. ಈ ವೇಳೆ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ್ದ. ಪ್ರಕರಣ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಹಡೆಮುರಿ ಕಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *