ಬೆಂಗಳೂರು: ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹಿರಿಯ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಕೊಡಿಸಿ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಕಿರುತೆರೆಯ ಒಳಾಂಗಣ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ 60 ವರ್ಷ ಮೇಲ್ಪಟ್ಟ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳದಂತೆ ಷರತ್ತು ವಿಧಿಸಿದೆ. ಹೀಗಾಗಿ ಸೀರಿಯಲ್ ತಂಡ ಹಿರಿಯ ಕಲಾವಿದರನ್ನು ಬಿಟ್ಟು ಶೂಟಿಂಗ್ ಮಾಡುವುದರಲ್ಲಿ ನಿರತರಾಗಿದ್ದಾರೆ.
Advertisement
Advertisement
ಹಿರಿಯ ಕಲಾವಿದರು ಶೂಟಿಂಗ್ ಇಲ್ಲದೇ, ಸಂಪಾದನೆಗೆ ಬೇರೆ ದಾರಿಯಿಲ್ಲದೇ ಜೀವನಮಾರ್ಗ ಕಂಡುಕೊಳ್ಳುವುದು ಕಷ್ಟವಾಗಿರುವುದರಿಂದ ಚಿತ್ರೀಕರಣದಲ್ಲಿ ತಾವುಗಳು ಪಾಲ್ಗೊಳ್ಳುವುದಕ್ಕೆ ಅನುಮತಿ ಕೊಡಿಸಬೇಕು. ಜೊತೆಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಹಿರಿಯ ಕಲಾವಿದರಿಗೆ ಪ್ರತಿ ತಿಂಗಳು ಮಾಸಾಶನ ದೊರೆಯುತ್ತಿದೆ. ಕರ್ನಾಟಕದಲ್ಲೂ ಹಿರಿಯ ಕಲಾವಿದರಿಗೆ ಹಾಗೂ ತಂತ್ರಜ್ಞಾನರಿಗೆ ಮಾಸಾಶನ ದೊರೆಯುವಂತಾಗಬೇಕು ಎಂದು ಕೇಳಿಕೊಂಡರು.
Advertisement
Advertisement
ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳಿ ಸರ್ಕಾರದ ಗಮನಕ್ಕೆ ತಂದು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಹಿರಿಯ ಕಲಾವಿದರುಗಳಾದ ಲಕ್ಷ್ಮಿ ದೇವಮ್ಮ, ಡಿಂಗ್ರಿ ನಾಗಾರಾಜ್, ಬಿಎಲ್ ಮಂಜುಳಾ, ಗಣೇಶ್ ರಾವ್ ಸೇರಿದಂತೆ ಹಲವರು ಡಿಸಿಎಂ ಅಶ್ವತ್ಥ್ ನಾರಾಯಣ್‍ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.