ಚಿತ್ರರಂಗದ ಕಾರ್ಮಿಕರಿಗೆ ಉಚಿತ ಲಸಿಕೆ ಕೊಡುವಂತೆ ಅಭಿಯಾನ ಪ್ರಾರಂಭಿಸಿದ ಚಿರಂಜೀವಿ

Public TV
1 Min Read
chiranjeevi

ಹೈದರಾಬಾದ್: ಕಳೆದ ವರ್ಷ ಕೋವಿಡ್ ಪಿಡುಗಿನ ಸಮಯದಲ್ಲಿ ಸಂಷಕ್ಟದಲ್ಲಿದ್ದ ಚಿತ್ರರಂಗದ ಸಾವಿರಾರು ಕಾರ್ಮಿಕರಿಗೆ ನೆರವಿನ ಹಸ್ತ ಚಾಚಿದ್ದ ಮೆಗಾ ಸ್ಟಾರ್ ಚಿರಂಜೀವಿ, ಇದೀಗ ಕಾರ್ಮಿಕರಿಗೆ ಉಚಿತ ಲಸಿಕೆ ಕೊಡುವಂತೆ ಅಭಿಯಾನ ಪ್ರಾರಂಭಿಸಿದ್ದಾರೆ.

coronavirus

ಟಾಲಿವುಡ್‍ನ ಸೂಪರ್ ಸ್ಟಾರ್ ಚಿರಂಜೀವಿ ಚಿತ್ರರಂಗದ ಕಾರ್ಮಿಕರಿಗೆ ಉಚಿತ ಲಸಿಕೆ ನೀಡಬೇಕು ಎಂದು ಅಭಿಯಾನವನ್ನು ಪ್ರಾಂಭಿಸಿದ್ದಾರೆ. ಕೊರೊನಾ ಕ್ರೈಸಿಸ್ ಚಾರಿಟಿ ಸಂಸ್ಥೆಯ ಅಪೋಲೋ ಆಸ್ಪತ್ರೆಯ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

corona virus test

45 ವಷ ವಯಸ್ಸು ದಾಟಿದ ಚಿತ್ರರಂಗದ ಕಾರ್ಮಿಕರು, ಸಿನಿಮಾ ಪತ್ರಕರ್ತರು ತಪ್ಪದೆ ಲಸಿಕೆ ಪಡೆದುಕೊಳ್ಳಿ ಎಂದು ಟ್ವೀಟ್‍ನಲ್ಲಿ ಮನವಿ ಮಾಡಿದ್ದಾರೆ.

ಕಳೆದ ವರ್ಷ ಕೊರೊನಾ ಸೋಂಕು ಸಮಯದಲ್ಲಿ ಕೊರೊನಾ ಕ್ರೈಸಿಸ್ ಚಾರಿಟಿ ಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದ ಸಾವಿರಾರು ಚಿತ್ರರಂಗದ ಕಾರ್ಮಿಕರಿಗೆ ಈ ಚಾರಿಟಿ ಮೂಲಕವಾಗಿ ಸಹಾಯ ಮಾಡಿದ್ದರು. ಪ್ರತಿ ತಿಂಗಳು ಅಗತ್ಯ ವಸ್ತುಗಳನ್ನು ಮನೆ-ಮನೆಗೆ ತಲುಪಿಸಿದ್ದರು. ಕೆಲವು ಚಿತ್ರರಂಗದ ನಟ, ನಟಿಯರು ಈ ಚಾರಿಟಿಗೆ ಸಹಾಯ ಮಾಡಿದ್ದರು. ಈ ವರ್ಷವೂ ಕೋವಿಡ್ 2ನೇ ಅಲೆ ಶುರುವಾಗಿದ್ದು, ಸಂಕಷ್ಟದಲ್ಲಿದ್ದವರ ನೆರವಿಗೆ ಕೊರೊನಾ ಕ್ರೈಸಿಸ್ ಚಾರಿಟಿ ಮುಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *