ಚಿತ್ರದ ಹಿನ್ನೆಲೆ ಸಂಗೀತ ಕೆಲಸದಲ್ಲಿ ನಿರತವಾದ ‘ಮಾರಿಗೋಲ್ಡ್’ ಚಿತ್ರತಂಡ

Public TV
1 Min Read
Marigold

ಟ ದೂದ್ ಪೇಡಾ ದಿಗಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಮಾರಿಗೋಲ್ಡ್’ ಲಾಕ್‍ಡೌನ್ ನಿಂದ ನಿಂತಿದ್ದ ಚಿತ್ರೀಕರಣ ಅನ್‍ಲಾಕ್ ಬಳಿಕ ಆರಂಭವಾಗಿ ಈಗ ಚಿತ್ರೀಕರಣಕ್ಕೆ ಶುಭಂ ಹೇಳಿದೆ ಚಿತ್ರತಂಡ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಸಂಗೀತ ನಿರ್ದೇಶಕ ವೀರ್ ಸಮರ್ಥ್ ನಿರ್ದೇಶನದಲ್ಲಿ ಚಿತ್ರದ ಹಿನ್ನೆಲೆ ಸಂಗೀತದ ಕೆಲಸಗಳು ಭರದಿಂದ ನಡೆಯುತ್ತಿದೆ.

Marigold2
ಚಿತ್ರೀಕರಣ, ಡಬ್ಬಿಂಗ್ ಕಾರ್ಯವನ್ನು ಮುಗಿಸಿರುವ ಚಿತ್ರತಂಡ ಹಿನ್ನೆಲೆ ಸಂಗೀತದ ಕೊನೆ ಹಂತದ ಕೆಲಸದಲ್ಲಿದೆ.  ಚಿತ್ರದ ಕೆಲಸಗಳು ಸರಾಗವಾಗಿ ನಡೆಯುತ್ತಿದ್ದು ಸದ್ಯದಲ್ಲೇ ಸೆನ್ಸಾರ್ ಅಂಗಳಕ್ಕೂ ಕಾಲಿಡಲಿದೆ. ಟೈಟಲ್ ನಿಂದಲೇ ಕ್ಯೂರಿಯಾಸಿಟಿ ಹುಟ್ಟು ಹಾಕಿರುವ ಚಿತ್ರ ಮಾರಿಗೋಲ್ಡ್ ಫಸ್ಟ್ ಲುಕ್ ಪೋಸ್ಟರ್ ಕೂಡ ಕುತೂಹಲ ಹುಟ್ಟು ಹಾಕುವುದರ ಜೊತೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ.

 

Marigold7

ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ದಿಗಂತ್ ಹೊಸ ಪಾತ್ರದಲ್ಲಿ ಮಿಂಚಿದ್ದಾರೆ. ದಿಗಂತ್ ಈವರೆಗಿನ ಸಿನಿಮಾಗಳಿಗಿಂತಲೂ ಈ ಚಿತ್ರ ವಿಭಿನ್ನವಾಗಿದ್ದು, ಡಿಫ್ರೆಂಟ್ ಲುಕ್ ಹಾಗೂ ಡಿಫ್ರೆಂಟ್ ಸ್ಟೈಲ್ ನಲ್ಲಿ ದೂದ್ ಪೇಡಾ ಇಲ್ಲಿ ಕಾಣಸಿಗಲಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಂಗೀತ ಶೃಂಗೇರಿ ದಿಗಂತ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ಮಾರಿಗೋಲ್ಡ್ ಚಿತ್ರ ನಿರ್ದೇಶನ ಮಾಡಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾ ಕೂಡ ಹೌದು. ಆರ್.ವಿ.ಕ್ರಿಯೇಷನ್ಸ್ ಮೂಲಕ ಸಿನಿಮಾ ನಿರ್ಮಾಣವಾಗಿದ್ದು, ತಿಮ್ಮರಾಯ, ಬದ್ರಿ, ಗುಣವಂತ, ಮಿಸ್ಟರ್ ಎಲ್.ಎಲ್.ಬಿ. ಚಿತ್ರಗಳನ್ನು ನಿರ್ದೇಶಿಸಿದ್ದ ರಘುವರ್ಧನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

Marigold3

ಕೆ.ಎಸ್. ಚಂದ್ರಶೇಖರ್ ಕ್ಯಾಮೆರಾ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಯೋಗರಾಜ್ ಭಟ್, ಕವಿರಾಜ್ ಮತ್ತು ವಿಜಯ್ ಭರಮಸಾಗರ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ತಾರಾಬಳಗದಲ್ಲಿ  ಸಂಪತ್‍ಕುಮಾರ್, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ, ಬಾಲ ರಾಜ್ವಾಡಿ, ಗಣೇಶ್‍ರಾವ್, ಭಾಸ್ಕರ್ ಪಾಂಡವಪುರ, ಮನಮೋಹನ್ ರೈ, ಮಹಾಂತೇಶ್ ಹೀರೆಮಠ, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Marigold8

Share This Article
Leave a Comment

Leave a Reply

Your email address will not be published. Required fields are marked *