ಚಿತ್ರದುರ್ಗದಲ್ಲಿ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

Public TV
2 Min Read
Chitradurga Road Safety Awareness2

ಚಿತ್ರದುರ್ಗ: ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತಾ ಜಾಗೃತಿಯ ಅರಿವು ಮೂಡಿಸುವ ಸಲುವಾಗಿ ರಸ್ತೆ ಸುರಕ್ಷತೆ ಬಗ್ಗೆ ಜನ ಜಾಗೃತಿ ಕಾರ್ಯಕ್ರಮದಲ್ಲಿ ಕೆಲವು ವಿಚಾರಗಳ ಕುರಿತಾಗಿ ಅರಿವು ಮೂಡಿಸಲಾಯಿತ್ತು.

“ರಸ್ತೆ ಸುರಕ್ಷತೆ ಬಗ್ಗೆ ಜನ ಜಾಗೃತಿ” ಕಾರ್ಯಕ್ರಮವನ್ನು ನಗರದ ಮೆದೇಹಳ್ಳಿ ಗ್ರಾಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಆಯೋಜಿಸಲಾಗಿತ್ತು. ನಮ್ಮಲ್ಲಿ ರಸ್ತೆ ನಿಯಮಗಳ ಉಲ್ಲಂಘನೆ ಮಾಡುತ್ತಾ ಅಜಾಗರೂಕತೆಯಿಂದ ವಾಹನ ಚಲಾಯಿಸುವುದರಿಂದ ಅಪಘಾತ ಸಂಭವಿಸುತ್ತಿವೆ ಹೀಗಾಗಿ ಸಾವಿನ ಸಂಖ್ಯೆಯೂ ಸಹ ಹೆಚ್ಚಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.

Chitradurga Road Safety Awareness6

ಬಹಳಷ್ಟು ಕಡೆ, ರಸ್ತೆಯ ಸಂಕೇತಗಳ ಮಾಹಿತಿ ಕೊರತೆಂದ ಅಪಘಾತಗಳು ಹೆಚ್ಚಾಗುತ್ತಿವೆ. ಮಕ್ಕಳಿಗೆ ಜೀಬ್ರಾ ಕ್ರಾಸ್ ಮೇಲೆ, ರಸ್ತೆ ದಾಟುವಾಗ ಮುನ್ನೆಚ್ಚರಿಕೆಗಳನ್ನ, ಪ್ರಾತ್ಯಕ್ಷಿಕೆ ಮಾಡಿ ತೋರಿಸಿದಾಗ ಮಾತ್ರ, ಮಕ್ಕಳು ಸುರಕ್ಷತೆಂದ ರಸ್ತೆ ದಾಟುತ್ತಾರೆ. ರಸ್ತೆ ನಿಯಮಗಳು ಶಿಕ್ಷಣದಲ್ಲಿ, ಪಾಠದಲ್ಲಿ ಮಕ್ಕಳಿಗೆ ಬೋಧಿಸಿದಾಗ ರಸ್ತೆ ನಿಯಮಗಳ ಪಾಲನೆಯಾಗುತ್ತವೆ. ಸಂಕೇತಗಳ ಬಗ್ಗೆ ಮಾಹಿತಿ ನೀಡಿ. ರಸ್ತೆ ದಾಟುವ ಮಾರ್ಗೋಪಾಯಗಳಲ್ಲಿ ಮಕ್ಕಳನ್ನ ಪ್ರಬುದ್ಧಗೊಳಿಸಿದಾಗ ಮಾತ್ರ ನಾವು ಅಪಘಾತಗಳನ್ನ ತಡೆಯಬಹುದು. ಸ್ಲಂ ಏರಿಯಾದಲ್ಲಿರುವ ಮಕ್ಕಳು ರಸ್ತೆಯ ಎರಡು ಬದಿಯಲ್ಲಿ ಮನೆ ಕಟ್ಟಿರುವುದರಿಂದ ಮಕ್ಕಳು ವೇಗವಾಗಿ ರಸ್ತೆ ದಾಟುವುದರಿಂದ, ಹೆಚ್ಚು ಅಪಘಾತಗಳಾಗಿ ಮಕ್ಕಳಿಗೆ ಅಂಗವಿಕಲತೆ ಉಂಟಾಗಿದೆ ಎಂದರು.

Chitradurga Road Safety Awareness

ತಂದೆ, ತಾಯಿ ಮಕ್ಕಳಿಗೆ ರಸ್ತೆ ದಾಟುವುದರ ಬಗ್ಗೆ, ರಸ್ತೆ ನಿಯಮಗಳ ಬಗ್ಗೆ ತಿಳಿಹೇಳಬೇಕು. ರಸ್ತೆ ಅಪಘಾತಗಳನ್ನು ತಡೆಯುವುದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುವುದು. ಅಪಘಾತಗಳು ಹೆಚ್ಚಾದಾಗ ಅಂಗವಿಕಲರ ಸಂಖ್ಯೆ ಹೆಚ್ಚಾಗಿ ಸಮಾಜದ ಅಭಿವೃದ್ಧಿಗೆ ತೊಂದರೆಯಾಗುವುದು. ಮಕ್ಕಳ ವಯಸ್ಸಲ್ಲೇ ಜಾಗೃತಿ ಮೂಡಿಸಿದರೆ ಮುಂದಿನ ಜನಾಂಗವನ್ನ ಅಪಘಾತದಿಂದ ರಕ್ಷಿಸಬಹುದು. ರಾತ್ರಿ ಸಮಯದಲ್ಲಿ, ಮಳೆಗಾಲದಲ್ಲಿ ಹೆಚ್ಚು ಅಪಘಾತಗಳಾಗುತ್ತವೆ. ಹೆಚ್ಚು ಜನದಟ್ಟಣೆ ಇರುವ ಸ್ಥಳದಲ್ಲಿ ಅಪಘಾತಗಳಾಗುತ್ತವೆ. ಜನರಿಗೆ ಮಾಹಿತಿ ನೀಡಿ ಅಪಘಾತಗಳಾಗುವ ಸ್ಥಳವನ್ನು ಗುರುತಿಸಿ ಅಲ್ಲಿ ಸಂಕೇತದ ಬೋರ್ಡ್‍ಗಳನ್ನ ಹಾಕಿ. ಅಪಘಾತಗಳನ್ನ ತಡೆಯುವುದರ ಬಗ್ಗೆ ಪ್ರಯತ್ನಿಸಬೇಕು ಎಂದರು. ಇದನ್ನೂ ಓದಿ: ದ್ವಿತ್ವ ಸಿನಿಮಾಗೆ ಪುನೀತ್ ರಾಜ್‍ಕುಮಾರ್ ಜೋಡಿಯಾದ ತ್ರಿಷಾ ಕೃಷ್ಣ

ಕಾರ್ಯಕ್ರಮದಲ್ಲಿ ಹೆಚ್.ಎಸ್.ರಚನ ದ್ವಿಚಕ್ರ ವಾಹನ ಚಾಲಕರೇ ಎಚ್ಚರ ಎಂಬ ಗಾಯನದ ಮೂಲಕ ಜಾಗೃತಿ ಮೂಡಿಸಿದರು. ರಸ್ತೆ ಸಂಕೇತದ ಬಿತ್ತಿ ಪತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೊಳಗೇರಿ ನಿವಾಸಿ ವಿದ್ಯಾರ್ಥಿಗಳಾದ ಅಕ್ಷತಾ, ರಾಮು, ಸುರಕ್ಷ, ರಂಗಸ್ವಾಮಿ, ವಿನುತ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *