ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂದು ಮತ್ತೆ ಓರ್ವ ಮೃತಪಟ್ಟಿದ್ದು, 21 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 154ಕ್ಕೆ ಏರಿಕೆಯಾಗಿದೆ.
ಚಿತ್ರದುರ್ಗದ 59, 62, 50, 45, 36 ವರ್ಷದ ಪುರುಷರು, 19 ವರ್ಷದ ಯುವತಿ, 28 ಹಾಗೂ 33 ವರ್ಷದ ಮಹಿಳೆಯರು, ಚಳ್ಳಕೆರೆಯ 36, 53 ವರ್ಷದ ಪುರುಷರು, 40 ವರ್ಷದ ಮಹಿಳೆ, ಮೊಳಕಾಲ್ಮೂರಿನ 43 ವರ್ಷದ ಪುರುಷ, ಹೊಸದುರ್ಗದ 21, 58, 40, 27 ವರ್ಷದ ಪುರುಷ, 35, 55 ವರ್ಷದ ಮಹಿಳೆಯರು, ಚಿಕ್ಕಜಾಜೂರಿನ 34 ವರ್ಷದ ಪುರುಷ, ಹೊಳಲ್ಕೆರೆಯ 23 ವರ್ಷದ ಪುರುಷ, ಹಿರಿಯೂರಿನ 53 ವರ್ಷದ ಪುರುಷ ಸೇರಿ ಒಟ್ಟು 21 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
Advertisement
Advertisement
ಇಂದು ಒಟ್ಟು 355 ಜನರ ಗಂಟಲು, ಮೂಗು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 21 ಜನರಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 154ಕ್ಕೆ ಏರಿಕೆಯಾಗಿದ್ದು, ಇದುವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೇ 96 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ಸದ್ಯ 55 ಸಕ್ರಿಯ ಪ್ರಕರಣಗಳು ಇವೆ.
Advertisement
ಒಟ್ಟು 55 ಸಕ್ರಿಯ ಪ್ರಕರಣಗಳ ಪೈಕಿ ಚಿತ್ರದುರ್ಗದ ಕೋವಿಡ್-19 ಆಸ್ಪತ್ರೆಯಲ್ಲಿ 20, ಹಿರಿಯೂರು ತಾಲೂಕು ಧರ್ಮಪುರ 5, ಚಳ್ಳಕೆರೆ ತಾಲೂಕು ಪರಶುರಾಂಪುರ 2, ಹೊಸದುರ್ಗ ತಾಲೂಕು ಬೆಲಗೂರು 4, ಮೊಳಕಾಲ್ಮೂರು ತಾಲೂಕು ರಾಂಪುರ 1, ಚಳ್ಳಕೆರೆ ತಾಲೂಕು ನಾಯಕನಹಟ್ಟಿ 2, ಹೊಳಲ್ಕೆರೆ ತಾಲೂಕು ಬಿ.ದುರ್ಗ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ 5 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಸೋಂಕಿತರ ಸಂಪರ್ಕದಲ್ಲಿದ್ದ 445 ಜನ ಹೋಮ್ ಕ್ವಾರಂಟೈನ್‍ನಲ್ಲಿ ಹಾಗೂ ಇಬ್ಬರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇದ್ದಾರೆ. ಈ ವರೆಗೆ 10052 ಜನರ ಮಾದರಿ ಸಂಗ್ರಹಿಸಲಾಗಿದ್ದು, 6567 ಜನರ ವರದಿ ನೆಗೆಟಿವ್ ಬಂದಿದೆ, ಉಳಿದ 192 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯ ಮಾಹಿತಿ ನೀಡಿದ್ದಾರೆ.