ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕುಂಠಿತಗೊಂಡಿದೆ. ಆದರೆ ಭಾರೀ ಗಾಳಿಯೊಂದಿಗೆ ಮಳೆಗಾಲದಲ್ಲಿ ಮಲೆನಾಡಲ್ಲಿ ಸುರಿಯುವ ಸಾಧಾರಣ ಮಳೆಯಾಗುತ್ತಿದೆ.
ಭಾರೀ ಗಾಳಿ-ಮಳೆಗೆ ಮಲೆನಾಡು ಭಾಗದಲ್ಲಿ ಅಲ್ಲಲ್ಲೇ ಮನೆಗಳು ಕುಸಿದು ಬಿದ್ದಿವೆ. ಚಿಕ್ಕಮಗಳೂರು ತಾಲೂಕಿನ ಕುಮಾರಗಿರಿಯಲ್ಲಿ ಭಾರೀ ಗಾಳಿ-ಮಳೆಗೆ ಮನೆ ಕುಸಿದಿದ್ದು, ಬಡಕುಟುಂಬ ನಿವಾಸಿಗಳು ಪರಿಹಾರಕ್ಕಾಗಿ ಸರ್ಕಾರದ ಹಾದಿ ಎದುರು ನೋಡ್ತಿದ್ದಾರೆ. ಮನೆ ಬಿದ್ದು ನಾಲ್ಕೈದು ದಿನಗಳೇ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಮನೆ ಕಳೆದುಕೊಂಡವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಈ ಮಧ್ಯೆ ಮೂಡಿಗೆರೆ ತಾಲೂಕಿನ ಹಳಿಕೆ ಗ್ರಾಮದಲ್ಲೂ ಮನೆ ಬಿರುಕು ಬಿಟ್ಟಿದೆ. ಫಾತಿಮಾ ಎಂಬುವರ ಮನೆ ಮುಂಭಾಗ ಬಿರುಕು ಬಿಟ್ಟಿದ್ದು ಫಾತಿಮ ಕುಟುಂಬ ಕೂಡ ಆತಂಕದಿಂದ ಬದುಕುತ್ತಿದೆ. ನಿನ್ನೆ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ಸಮೀಪದ ಪರಿಶಿಷ್ಟ ಜಾತಿ ಕಾಲೋನಿಯ ಬೈರಮ್ಮ ಎಂಬುವರ ಮನೆ ಕೂಡ ಕುಸಿದು ಬಿದ್ದಿದ್ದು, ಮನೆಯ ಒಂದು ಬದಿಯ ಗೋಡೆ ಸಂಪೂರ್ಣ ಕಳಚಿ ಬಿದ್ದಿದೆ. ಮಲೆನಾಡಲ್ಲಿ ಬೀಸುತ್ತಿರುವ ಗಾಳಿ ಸುರಿಯುತ್ತಿರೋ ಸಾಧಾರಣ ಮಳೆ ಕೂಡ ಮಲೆನಾಡಿಗರಿಗೆ ಆತಂಕ ತಂದೊಡ್ಡಿದೆ.