ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿ, ಅಂಗರೇಖನಹಳ್ಳಿ, ದಿಬ್ಬೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.
Advertisement
ಪಬ್ಲಿಕ್ ಟಿವಿ ಜ್ಞಾನದೀವಿಗೆ ಕಾರ್ಯ ಮುಂದುವರೆದಿದ್ದು, ಇಂದು ಚಿಕ್ಕಬಳ್ಳಾಪುರದ ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು. ಗಿಡ್ನಹಳ್ಳಿಯ 44 ವಿದ್ಯಾರ್ಥಿಗಳಿಗೆ 22 ಟ್ಯಾಬ್ ಹಾಗೂ ಅಂಗರೇಖನಹಳ್ಳಿಯಲ್ಲಿ 38 ವಿದ್ಯಾರ್ಥಿಗಳು 19 ಟ್ಯಾಬ್ ಸೇರಿದಂತೆ ದಿಬ್ಬೂರು ಶಾಲೆಯ 88 ಮಂದಿ ವಿದ್ಯಾರ್ಥಿಗಳಿಗೆ 44 ಟ್ಯಾಬ್‍ಗಳನ್ನ ವಿತರಿಸಲಾಯಿತು. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿ, ಕಾಲೇಜು ತೆರೆಯಿರಿ – ತಜ್ಞರ ವರದಿಯಲ್ಲಿ ಏನಿದೆ?
Advertisement
Advertisement
ಟ್ಯಾಬ್‍ಗಳಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್ ರವರು ಧನಸಹಾಯ ಮಾಡಿದ್ದಾರೆ. ಟ್ಯಾಬ್ ಪಡೆದ ವಿದ್ಯಾರ್ಥಿಗಳು ಮಾನ್ಯ ಸಚಿವರಿಗೆ ಹಾಗೂ ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಇದನ್ನೂ ಓದಿ: ಸಿಎಂ ಖುರ್ಚಿಗಾಗಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಈಗಲೇ ಕುಸ್ತಿ ಶುರುವಾಗಿದೆ: ಕಾರಜೋಳ
Advertisement
ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾರವರು ಟ್ಯಾಬ್ ವಿತರಣೆ ಮಾಡಿದರು. ನಿನ್ನೆ ಸ್ವತಃ ಸಚಿವರಾದ ಸುಧಾಕರ್‌ರವರು ತಮ್ಮ ಸ್ವಗ್ರಾಮದ ಪೇರೇಸಂದ್ರ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದ್ದಾರೆ. ಇದಲ್ಲದೆ ನಿನ್ನೆ ಸಹ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ, ಪೇರೇಸಂದ್ರ, ಆವಲಗುರ್ಕಿ, ನಂದಿ ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ 137 ಟ್ಯಾಬ್‍ಗಳನ್ನ ವಿತರಿಸಲಾಗಿದೆ.