ಹಾವೇರಿ: ಹಾವೇರಿಯಲ್ಲಿ ಚಿಕಿತ್ಸೆ ಸಿಗದೆ ರಾತ್ರಿಯಿಡಿ ರೋಗಿಯ ಪರದಾಟ ನಡೆಸಿದ ಘಟನೆ ಜಿಲ್ಲಾಸ್ಪತ್ರೆ ಬಳಿ ಇರೋ ಕೋವಿಡ್ 19 ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಶಿವಬಸವ ನಗರದ ನಿವಾಸಿ 38 ವರ್ಷದ ವ್ಯಕ್ತಿ ಜ್ವರ, ಕೆಮ್ಮು ಮತ್ತು ನೆಗಡಿಯಿಂದ ಬಳಲ್ತಿದ್ದ ವ್ಯಕ್ತಿಗೆ ಚಿಕಿತ್ಸೆ ಪರದಾಡಿದ್ದಾನೆ. ಸೋಮವಾರ ಖಾಸಗಿ ಆಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಜಿಲ್ಲಾಸ್ಪತ್ರೆಗೆ ಹೆಸ್ಕಾಂ ಸಮುದಾಯ ಭವನದಲ್ಲಿನ ಕೋವಿಡ್ 19 ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಕಳಿಸಿದ್ದರು.
Advertisement
Advertisement
ರಾತ್ರಿ ಹತ್ತು ಗಂಟೆಯಿಂದ ತಪಾಸಣೆಗೆ ಕಾದು ಕಾದು ಬೆಳಗ್ಗಿನ ಜಾವ ರೋಗಿ ಮನೆಗೆ ತೆರಳಿದ್ದಾನೆ. ತಪಾಸಣೆಯೂ ಆಗದೆ, ಚಿಕಿತ್ಸೆಯೂ ಸಿಗದೆ ಕಂಗಾಲ ಆಗಿ ಮನೆಗೆ ತೆರಳಿದ್ದಾನೆ. ಸದ್ಯ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ರೋಗಿ ವಿಶ್ರಾಂತಿ ಪಡೆಯುತ್ತಿದ್ದಾನೆ. ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸ್ತಿರೋ ಆರೋಗ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ರೋಗಿ ಹಾಗೂ ರೋಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement