– ದೌರ್ಜನ್ಯದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
– ಮೂವರನ್ನು ವಶಕ್ಕೆ ಪಡೆದ ಪೊಲೀಸರು
ನವದೆಹಲಿ: ತಾಯಿ ಮತ್ತು ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಮೂವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Advertisement
ದೆಹಲಿಯಲ್ಲಿ ಇತ್ತೀಚೆಗೆ ತಾಯಿ ಮತ್ತು ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಕೇಳಿ ಬಂದಿತ್ತು. ಕಿರುಕುಳದ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಈ ಕುರಿತಾಗಿ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಬಂಧಿತ ಆರೋಪಿಗಳನ್ನು ಸೋನು (22), ಅಮಿತ್ (24) ಮತ್ತು ಹೃತಿಕ್ (18) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಿರುಕುಳಕ್ಕೊಳಗಾದ ತಾಯಿ-ಮಗಳು ಚಿಂದಿ ಆಯ್ದು ಜೀವನ ನಡೆಸುತ್ತಿದ್ದರು.
Advertisement
ವಾಜೀರ್ಪುರದ ಜೆಜೆ ಕಾಲೋನಿ ಪ್ರದೇಶದ ಸೋಷಿಯಲ್ ಮೀಡಿಯಾದಲ್ಲಿ ಲೈಂಗಿಕ ಕಿರುಕುಳದ ವೀಡಿಯೋ ಹರಿದಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸಂತ್ರಸ್ತರು ಮತ್ತು ಆರೋಪಿಗಳನ್ನು ಪತ್ತೆಹಚ್ಚಲು ಹಲವಾರು ತಂಡಗಳನ್ನು ರಚಿಸಿದ್ದೆವು. ಪೊಲೀಸ್ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡುವುದರ ಜೊತೆಗೆ ಸ್ಥಳೀಯ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಮತ್ತು ಕೆಲವು ಕಡೆಗಳಲ್ಲಿ ವಿಚಾರಣೆ ನಡೆಸುತ್ತಿತ್ತು. ಸ್ಥಳೀಯ ಗುಪ್ತಚರ ಮಾಹಿತಿ ಪಡೆದು ಆರೋಪಿಗಳನ್ನು ಪತ್ತೆ ಹಚ್ಚಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ತಾಯಿ-ಮಗಳು ಇಬ್ಬರೂ ಪತ್ತೆಯಾಗಿದ್ದಾರೆ. ಇವರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. 2020ರ ಡಿಸೆಂಬರ್ 29 ಮತ್ತು 30 ರಂದು ಮಧ್ಯರಾತ್ರಿ ಅಪರಿಚಿತ ಪುರುಷರು ನಮ್ಮ ಮೆಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಈ ಕುರಿತಾಗಿ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.