ಚಾಮರಾಜನಗರ: ಹಸಿರು ವಲಯಕ್ಕೆ ಕೊರೊನಾ ಹೊತ್ತು ತಂದಿದ್ದ ಮುಂಬೈನ ವೈದ್ಯಕೀಯ ವಿದ್ಯಾರ್ಥಿ ರೋಗಿ 5,919 ಗುಣಮುಖನಾಗಿ ಇಂದು ಡಿಸ್ಚಾರ್ಜ್ ಆಗುತ್ತಿದ್ದಾನೆ.
ಕಳೆದ ಜೂನ್ 9 ರಂದು ತನ್ನ ತಾಯಿಯನ್ನು ಹನೂರು ತಾಲೂಕಿನ ಸೋದರ ಮಾವನ ಮನೆಗೆ ಬಿಡಲು ಬಂದಿದ್ದನು. ಈ ವೇಳೆ ಈತನಿಗೆ ಕೊರೊನಾ ಪತ್ತೆಯಾಗುವ ಮೂಲಕ ಹಸಿರು ವಲಯದಲ್ಲಿ ತಲ್ಲಣ ಮೂಡಿತ್ತು. ಈಗ ಆತ ಗುಣಮುಖನಾಗುವ ಮೂಲಕ ಚಾಮರಾಜನಗರ ಮತ್ತೆ ಕೊರೊನಾ ಮುಕ್ತ ಜಿಲ್ಲೆಯಾಗಿದೆ.
ಸೋಂಕಿತನ ಸಂಪರ್ಕ ಹೊಂದಿದ್ದ 24 ಮಂದಿಯ ವರದಿಯೂ ನೆಗೆಟಿವ್ ಬಂದಿದೆ. ಸೋಂಕಿತನೊಂದಿಗೆ ಬಂದಿದ್ದ ಆತನ ತಾಯಿ ಹಾಗೂ ಸಹೋದರನ ವರದಿಯೂ ನೆಗೆಟಿವ್ ಬಂದು ಅವರೆಲ್ಲರೂ ಈಗಾಗಲೇ ಕ್ವಾರೆಂಟೈನ್‍ನಿಂದ ಬಿಡುಗಡೆಯಾಗಿದ್ದಾರೆ.
ಇದೀಗ ಕೊರೊನಾ ಬಂದಿದ್ದ ವಿದ್ಯಾರ್ಥಿ ಕೇವಲ 10 ದಿನದಲ್ಲಿ ಗುಣಮುಖವಾಗಿದ್ದು, ಜಿಲ್ಲಾಡಳಿತ ಕೂಡ ಕೊರೊನಾ ಬಂದಿದ್ದ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.