ಬೆಂಗಳೂರು: ಆಕ್ಸಿಜನ್ ಇರಲಿ, ರೋಗಿಗಳಿಗೆ ಒಂದು ಬೆಡ್ ಕೊಡುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಚಾಮರಾಜನಗರದ ದುರಂತಕ್ಕೆ ಕಾರಣ ಯಾರು ಎಂದು ಬಿಡಿಸಿ ಹೇಳಬೇಕಿಲ್ಲ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪರೋಕ್ಷವಾಗಿ ಚಾಟಿ ಬಿಸಿದ್ದಾರೆ.
1
ಆಕ್ಸಿಜನ್ ಪೂರೈಕೆಯಾಗದೇ ಚಾಮರಾಜನಗರದಲ್ಲಿ ಒಂದೇ ದಿನ 24 ಜನ ಸಾವಿಗೀಡಾಗಿರುವುದು ಅತ್ಯಂತ ದೊಡ್ಡ ದುರಂತ.
ಆಕ್ಸಿಜನ್ ಪೂರೈಸದ ರಾಜ್ಯ ಸರ್ಕಾರ ಈ ಸಾವಿನ ನೇರ ಹೊಣೆ ಹೊರಬೇಕು.
ಜನ ಬೀದಿ ಬೀದಿಯಲ್ಲಿ ಸಾಯುತ್ತಿದ್ದರೂ ಈ ಸರ್ಕಾರ ಕರುಣೆ ಇಲ್ಲದಂತೆ ವರ್ತಿಸುತ್ತಿದೆ.
ಇಂತಹ ಹೃದಯಹೀನ ಸರ್ಕಾರ ರಾಜ್ಯಕ್ಕೆ ಬೇಕೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 3, 2021
Advertisement
ಆಕ್ಸಿಜನ್ ಪೂರೈಕೆಯಾಗದೇ ಚಾಮರಾಜನಗರದಲ್ಲಿ ಒಂದೇ ದಿನ 24 ಜನ ಸಾವಿಗೀಡಾಗಿರುವುದು ಅತ್ಯಂತ ದೊಡ್ಡ ದುರಂತ. ಆಕ್ಸಿಜನ್ ಪೂರೈಸದ ರಾಜ್ಯ ಸರ್ಕಾರ ಈ ಸಾವಿನ ನೇರ ಹೊಣೆ ಹೊರಬೇಕು. ಜನ ಬೀದಿ ಬೀದಿಯಲ್ಲಿ ಸಾಯುತ್ತಿದ್ದರೂ ಈ ಸರ್ಕಾರ ಕರುಣೆ ಇಲ್ಲದಂತೆ ವರ್ತಿಸುತ್ತಿದೆ. ಇಂತಹ ಹೃದಯಹೀನ ಸರ್ಕಾರ ರಾಜ್ಯಕ್ಕೆ ಬೇಕೆ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
Advertisement
2
ಪ್ರತಿ ಜಿಲ್ಲಾಸ್ಪತ್ರೆಗೂ ಆಕ್ಸಿಜನ್ ಪೂರೈಸುವ ಜವಾಬ್ಧಾರಿ ಸರ್ಕಾರದ ಮೇಲಿದೆ.
ಆದರೆ ಆಕ್ಸಿಜನ್ ಇರಲಿ,ರೋಗಿಗಳಿಗೆ ಒಂದು ಬೆಡ್ ಕೊಡುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ.
ಆಕ್ಸಿಜನ್ಗಾಗಿ ಮನವಿ ಸಲ್ಲಿಸಿದ್ದರೂ ಸರ್ಕಾರ ಚಾಮರಾಜನಗರಕ್ಕೆ ಆಕ್ಸಿಜನ್ ನೀಡದೆ ಜನರ ಸಾಮೂಹಿಕ ಹತ್ಯೆ ನಡೆಸಿದೆ.
ಈ ದುಷ್ಟ ಸರ್ಕಾರ ಇನ್ನೆಷ್ಟು ಜನರ ಬಲಿಗೆ ಕಾಯುತ್ತಿದೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 3, 2021
Advertisement
ಪ್ರತಿ ಜಿಲ್ಲಾಸ್ಪತ್ರೆಗೂ ಆಕ್ಸಿಜನ್ ಪೂರೈಸುವ ಜವಾಬ್ಧಾರಿ ಸರ್ಕಾರದ ಮೇಲಿದೆ. ಆದರೆ ಆಕ್ಸಿಜನ್ ಇರಲಿ,ರೋಗಿಗಳಿಗೆ ಒಂದು ಬೆಡ್ ಕೊಡುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಆಕ್ಸಿಜನ್ಗಾಗಿ ಮನವಿ ಸಲ್ಲಿಸಿದ್ದರೂ ಸರ್ಕಾರ ಚಾಮರಾಜನಗರಕ್ಕೆ ಆಕ್ಸಿಜನ್ ನೀಡದೆ ಜನರ ಸಾಮೂಹಿಕ ಹತ್ಯೆ ನಡೆಸಿದೆ. ಈ ದುಷ್ಟ ಸರ್ಕಾರ ಇನ್ನೆಷ್ಟು ಜನರ ಬಲಿಗೆ ಕಾಯುತ್ತಿದೆ? ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.
Advertisement
3
ಚಾಮರಾಜನಗರದ ದುರಂತಕ್ಕೆ ಕಾರಣ ಯಾರು ಎಂದು ಬಿಡಿಸಿ ಹೇಳಬೇಕಿಲ್ಲ.
ಇದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ.
@BSYBJP, ಆರೋಗ್ಯ ಸಚಿವ @mla_sudhakar ವೈಫಲ್ಯಕ್ಕೆ 24 ಜನರು ಅನ್ಯಾಯವಾಗಿ ಸಾವಿಗೀಡಾಗಿದ್ದಾರೆ.
ರಾಜ್ಯದ ಜನ ಕೊಲೆ ಪಾತಕ ಸರ್ಕಾರದ ದುಷ್ಟ ಆಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗ್ತಿದ್ದಾರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 3, 2021
ಚಾಮರಾಜನಗರದ ದುರಂತಕ್ಕೆ ಕಾರಣ ಯಾರು ಎಂದು ಬಿಡಿಸಿ ಹೇಳಬೇಕಿಲ್ಲ. ಇದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವರಾದ ಸುಧಾಕರ್ ವೈಫಲ್ಯಕ್ಕೆ 24 ಜನರು ಅನ್ಯಾಯವಾಗಿ ಸಾವಿಗೀಡಾಗಿದ್ದಾರೆ. ರಾಜ್ಯದ ಜನ ಕೊಲೆ ಪಾತಕ ಸರ್ಕಾರದ ದುಷ್ಟ ಆಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗ್ತಿದ್ದಾರೆ ಎಂದು ಸಾಲು ಸಾಲು ಟ್ವೀಟ್ ಮಾಡುವ ಮೂಲಕವಾಗಿ ಚಾಮರಾಜನಗರ ದುರಂತ ವಿರುದ್ಧವಾಗಿ ಆಕ್ರೋಶವ್ಯಕ್ತಪಡಿಸಿದ್ದಾರೆ.