ಹುಬ್ಬಳ್ಳಿ: ಮಹಿಳೆಯೊಬ್ಬರಿಗೆ ಚಾಕು ತೋರಿಸಿ ದರೋಡೆಕೋರರು ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿರುವ ಶ್ರೀರಾಮ ಫೈನಾನ್ಸ್ ಬಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ಹಾವೇರಿಗೆ ತಮ್ಮ ಕುಟುಂಬ ಸಮೇತ ಹೋಗುತ್ತಿದ್ದ ಅಬ್ದುಲ್ ಖಾದರ್ ನದಾಪ ಎಂಬುವರು ಹಾವೇರಿ ಸಮೀಪದ ಶ್ರೀರಾಮ ಫೈನಾನ್ಸ್ ಬಳಿಯಲ್ಲಿ ಕಾರು ನಿಲ್ಲಿಸಿ ಕಾರಿನ ಹಿಂದಿನ ಚಕ್ರದಲ್ಲಿ ಉಂಟಾದ ದೋಷವನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಡಿಯೋ ವಾಹನದಲ್ಲಿ ಬಂದ ಇಬ್ಬರು ಯುವಕರು ಚಾಕು ತೋರಿಸಿ ಕಾರಿನಲ್ಲಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬೀಗ ಹಾಕಿ ಮದುವೆಗೆ ಹೋದವರ ಮನೆಯಲ್ಲಿ ಕಳ್ಳರ ಕೈಚಳಕ
ಕೂಡಲೇ ಅಬ್ದುಲ್ ಖಾದರ್ ನದಾಪ ಅವರು ಬೆಂಡಿಗೇರಿ ಪೊಲೀಸ್ ಠಾಣೆಗೆ ವಿಷವನ್ನು ತಿಳಿಸಿದ್ದಾರೆ. ಆದರೆ ಘಟನೆ ನಡೆದಿರುವುದು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿನ್ನೆಲೆಯಲ್ಲಿ ದೂರನ್ನು ದಾಖಲಿಸಿಕೊಂಡ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.