– ಬದುಕಿದ್ದರೆ ನನ್ನ ಸಾಯಿಸುತ್ತಾಳೆ ಅನ್ನೋ ಭಯದಿಂದ ಚಾಕು ಇರಿತ
ಮೈಸೂರು: ಕಳೆದ ವಾರ ಮೈಸೂರಿನಲ್ಲಿ ನಡೆದಿದ್ದ ಯುವತಿಗೆ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್ ಸಿಕಿದ್ದು, ಯುವತಿಯೇ ಯುವಕನಿಗೆ ಕೊಲೆ ಬೆದರಿಕೆ ಹಾಕಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ಕಳೆದ ನವೆಂಬರ್ 15ರಂದು ಪ್ರೇಮ ವೈಫಲ್ಯದ ವಿಚಾರವಾಗಿ ಯವಕ ಗಗನ್ ಅಶ್ವಿನಿಗೆ ಚಾಕು ಇರಿದಿದ್ದ. ಗಗನ್ ಹಾಗೂ ಅಶ್ವಿನ ಸುಮಾರು 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅಶ್ವಿನಿ ಗಗನ್‍ನನ್ನು ಮದುವೆಯಾಗಲು ನಿರಾಕರಿಸಿದ್ದಳು. ಇದೇ ವಿಚಾರಕ್ಕೆ ಮನೆ ಮುಂದೆ ನಿಂತಿದ್ದ ಅಶ್ವಿನಿಗೆ ಗಗನ್ ಚಾಕು ಹಾಕಿ ಎಸ್ಕೇಪ್ ಆಗಿದ್ದ. ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ.
ಈಗ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು. ಲವ್ ಮಾಡುತ್ತಿದ್ದಾಗ ಗಗನ್ ಅಶ್ವಿನಿಗೆ ಫೋನ್ ಕೊಡಿಸಿರುತ್ತಾನೆ. ಲವ್ ಮುರಿದು ಬಿದ್ದ ನಂತರ ಗಗನ್ ನನ್ನ ಫೋನ್ ನನಗೆ ವಾಪಸ್ ನೀಡುವಂತೆ ಫೋನ್ ಮಾಡುತ್ತಾನೆ. ಆಗ ಅಶ್ವಿನ ಫೋನ್ ಕೊಡಲ್ಲ ದುಡ್ಡು ಕೊಡುತ್ತೇನೆ ಎಂದು ಅವಾಜ್ ಹಾಕುತ್ತಾಳೆ. ಆದರೆ ಗಗನ್ ನನಗೆ ದುಡ್ಡು ಬೇಡ ನನ್ ಫೋನ್ ಬೇಕು ಎಂದು ಹೇಳುತ್ತಾನೆ ಎಂದು ಹೇಳಿದ್ದಾರೆ.
ಇದರಿಂದ ಕೋಪಗೊಂಡ ಅಶ್ವಿನಿ, ಗಗನ್‍ನನ್ನು ಅವಾಚ್ಯ ಪದಗಳಿಂದ ನಿಂದಿಸಿ ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ. ಇದರಿಂದ ಭಯಗೊಂಡ ಗಗನ್ ಇವಳು ಬದುಕಿದ್ದರೆ, ನನ್ನ ಕೊಲೆ ಮಾಡಿಸುತ್ತಾಳೆ ಎಂದು ಹೆದರಿ ಆಕೆಗೆ ಚಾಕು ಹಾಕಿರುತ್ತಾನೆ ಎಂದು ಮೈಸೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಗನ್ ಜೈಲುಪಾಲು ಆಗಿದ್ದಾನೆ. ಲಕ್ಷ್ಮೀಪುರಂ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.