– 21 ಬಾಲಿಗೆ 40 ರನ್, ಕೊನೆಯಲ್ಲಿ ಆರ್ಚರ್, ತೇವಟಿಯಾ ಅಬ್ಬರ
ಅಬುಧಾಬಿ: ಆರ್‌ಸಿಬಿ ಸ್ಪಿನ್ ಮಾಂತ್ರಿಕ ಯುಜ್ವೇಂದ್ರ ಚಹಲ್ ಮತ್ತು ವೇಗಿ ಇಸುರು ಉದಾನಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 155 ರನ್‍ಗಳ ಟಾರ್ಗೆಟ್ ನೀಡಿದೆ.
ಇಂದು ವಿಕೇಂಡ್ ಧಮಾಕದ ಮೊದಲನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಅಬುಧಾಬಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಬಂದ ರಾಜಸ್ಥಾನ್ ತಂಡ ಆರಂಭಿಕ ಕುಸಿತದ ನಂತರ ಕೊಂಚ ಚೇತರಿಕೊಂಡು ಬೆಂಗಳೂರು ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.
Advertisement
Advertisement
ಚಹಲ್ ಸ್ಪಿನ್ ಮೋಡಿ
ಆರ್‌ಸಿಬಿ ಪರವಾಗಿ ಮ್ಯಾಜಿಕಲ್ ಸ್ಪಿನ್ ಮಾಡಿದ ಯುಜ್ವೇಂದ್ರ ಚಹಲ್ ಅವರು ತಮ್ಮ ಕೋಟದ ನಾಲ್ಕು ಓವರ್ ಬೌಲ್ ಮಾಡಿ ಮೂರು ಪ್ರಮುಖ ವಿಕೆಟ್ ಕಿತ್ತು ಕೇವಲ 24 ರನ್ ಕೊಟ್ಟು ಮಿಂಚಿದರು. ಇದೇ ವೇಳೆ ಇವರಿಗೆ ಉತ್ತಮ ಸಾಥ್ ಕೊಟ್ಟ ಇಸುರು ಉದಾನಾ ಅವರು, ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 41 ರನ್ ಬಿಟ್ಟುಕೊಟ್ಟು ದುಬಾರಿಯಾದರು. ನವದೀಪ್ ಸೈನಿಯವರ ಕೂಡ ಒಂದು ವಿಕೆಟ್ ಪಡೆದು ಮಿಂಚಿದರು.
Advertisement
Another wicket for Chahal. Robin Uthappa departs after scoring 17 runs.#RR 70/4 after 10.1 overs#Dream11IPL #RCBvRR pic.twitter.com/bM5Cg6teHx
— IndianPremierLeague (@IPL) October 3, 2020
Advertisement
ರಾಜಸ್ಥಾನ್ ರಾಯಲ್ಸ್ ಕಡೆಯಿಂದ ಆರಂಭಿಕ ಜೋಸ್ ಬಟ್ಲರ್ ಅವರು ಆರಂಭದ ಓವರಿನಲ್ಲೇ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ಪಂದ್ಯದ 2ನೇ ಓವರಿನ ನಾಲ್ಕನೇ ಬಾಲಿನಲ್ಲಿ ನಾಯಕ ಸ್ಟೀವ್ ಸ್ಮಿತ್ ಅವರು ಕೇವಲ 5 ರನ್ ಗಳಿಸಿ ಇಸುರು ಉದಾನಾ ಅವರಿಗೆ ಬೌಲ್ಡ್ ಆದರು. ನಂತರ ಬಂದ ನವದೀಪ್ ಸೈನಿ ಅವರು 12 ಬಾಲಿಗೆ 22 ರನ್ ಸಿಡಿಸಿ ಅಬ್ಬರಿಸುವ ಮನ್ಸೂಚನೆ ನೀಡಿದ್ದ ಬಟ್ಲರ್ ಅವರನ್ನು ಪೆವಿಲಿಯನ್‍ಗೆ ಅಟ್ಟಿದರು.
Samson c & b Chahal.
Smashed straight back at @yuzi_chahal and he shows good reflexes to catch it. Samson departs.
????????https://t.co/UoJHR4yYpl #Dream11IPL pic.twitter.com/YsGtsZLM48
— IndianPremierLeague (@IPL) October 3, 2020
ನಾಲ್ಕನೇ ಓವರ್ ಬೌಲಿಂಗ್‍ಗೆ ಬಂದು ತಂಡಕ್ಕೆ ಟ್ವಿಸ್ಟ್ ಕೊಟ್ಟ ಯುಜ್ವೇಂದ್ರ ಚಾಹಲ್ ಅವರು, ಉತ್ತಮ ಲಯದಲ್ಲಿದ್ದ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದರು. ಈ ಮೂಲಕ ಆರಂಭದಲ್ಲೇ ಟಾಪ್ ಆರ್ಡರ್ ಬ್ಯಾಟ್ಸ್ ಮ್ಯಾನ್ ಕಳೆದುಕೊಂಡು ಕುಸಿದ ರಾಜಸ್ಥಾನ್ ರಾಯಲ್ಸ್ ತಂಡ ಪವರ್ ಪ್ಲೇ ಮುಕ್ತಾಯದ ವೇಳೆಗೆ 38 ರನ್ ಸೇರಿಸಿತ್ತು. ನಂತರ ಜೊತೆಯಾದ ರಾಬಿನ್ ಉತ್ತಪ್ಪ ಮತ್ತು ಮಹಿಪಾಲ್ ಲೊಮರ್ ಉತ್ತಮವಾಗಿ ಬ್ಯಾಟ್ ಬೀಸಿದರು. ಹೀಗಾಗಿ 10 ಓವರ್ ಮುಕ್ತಾಯಕ್ಕೆ ರಾಜಸ್ಥಾನ್ 70 ಪೇರಿಸಿತು.
Sharp in the slip – Padikkal
Good bowling, good reflexes and sharp catching at the slip from @devdpd07. Buttler walks back.
Watch the video here ????????https://t.co/E3yuU5yQc0 #Dream11IPL pic.twitter.com/Cd3u1QdmYl
— IndianPremierLeague (@IPL) October 3, 2020
ನಂತರ ಚಹಲ್ ಓವರಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ರಾಬಿನ್ ಉತ್ತಪ್ಪ 17 ರನ್ ಸಿಡಿಸಿ ಹೊರನಡೆದರು. ನಂತರ ಒಂದಾದ ಯುವ ಆಟಗಾರಾದ ರಿಯಾನ್ ಪರಾಗ್ ಮತ್ತು ಮಹಿಪಾಲ್ ಲೊಮರ್ ಅವರು ತಾಳ್ಮೆಯಿಂದ ಬ್ಯಾಟ್ ಬೀಸಿ ರನ್ ಕಲೆ ಹಾಕಿದರು. ಪರಿಣಾಮ 15ನೇ ಓವರಿನ ಮೊದಲನೇ ಬಾಲಿನಲ್ಲೇ ರಾಜಸ್ಥಾನ್ 100ರ ಗಡಿದಾಟಿತು. ನಂತರ ರಿಯಾನ್ ಪರಾಗ್ ಅವರು ಉದಾನ ಅವರ ಬೌಲಿಂಗ್‍ನಲ್ಲಿ ಫಿಂಚ್ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.
There is not stopping #RCB today. Another big blow for #RR as the in-form Samson departs.
Chahal with his first wicket of the game. RR three down.#Dream11IPL #RCBvRR pic.twitter.com/6kSYvM5GeB
— IndianPremierLeague (@IPL) October 3, 2020
ನಂತರ ಉತ್ತಮವಾಗಿ ಆಡಿಕೊಂಡು ಬಂದಿದ್ದ ಯುವ ಆಟಗಾರ ಮಹಿಪಾಲ್ ಲೊಮರ್ ಅವರು 39 ಬಾಲಿಗೆ 47 ರನ್ ಹೊಡೆದ ಚಹಲ್ ಅವರ ಸ್ಪನ್ ಬಲೆಗೆ ಬಿದ್ದರು. ಆದರೆ ಕೊನೆಯಲ್ಲಿ ಹೊಂದಾಗಿ ಸ್ಫೋಟಕ ಬ್ಯಾಟಿಂಗ್ ಆಡಿದ ರಾಹುಲ್ ತೇವಟಿಯಾ ಮತ್ತು ಜೋಫ್ರಾ ಆರ್ಚರ್ ಅವರು, 6ನೇ ವಿಕೆಟ್‍ಗೆ ಉತ್ತಮ ಜೊತೆಯಾಟವಾಡಿದರು. ಕೊನೆಯ 21 ಬಾಲಿಗೆ ಈ ಜೋಡಿ ಬರೋಬ್ಬರಿ 40 ರನ್ ಚಚ್ಚಿದರು.