ನವದೆಹಲಿ: ಸೋಮವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡಬೇಕಿತ್ತು ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಸೋಮವಾರ ನಡೆದ ಐಪಿಎಲ್-2020ಯ 28ನೇ ಮ್ಯಾಚಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 87 ರನ್ಗಳಿಂದ ಗೆದ್ದು ಬೀಗಿದೆ. ಎಬಿಡಿ ವಿಲಿಯರ್ಸ್ ಅವರು ಬ್ಯಾಟಿಂಗ್ನಲ್ಲಿ ಅಬ್ಬರಿಸಿದರೆ, ಬೆಂಗಳೂರು ತಂಡದ ಬೌಲರ್ ಗಳು ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿ ತಂಡ ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
Advertisement
Advertisement
ಸೋಮವಾರದ ಆರ್ಸಿಬಿ ಮತ್ತು ಕೆಕೆಆರ್ ಮ್ಯಾಚ್ ಮುಗಿದ ನಂತರ ಟ್ವೀಟ್ ಮಾಡಿರುವ ಬೆನ್ ಸ್ಟೋಕ್ಸ್, ಬ್ಯಾಟ್ಸ್ ಮ್ಯಾನ್ಗಳ ಗೇಮಿನಲ್ಲಿ ಇಂದು ಯಜೇಂದ್ರ ಚಹಲ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕಿತ್ತು. ಏಕೆಂದರೆ ಶಾರ್ಜಾದಂತ ಮೈದಾನದಲ್ಲಿ ಆತ ಉತ್ತಮವಾಗಿ ಬೌಲ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ನಿನ್ನೆಯ ಪಂದ್ಯದಲ್ಲಿ 33 ಬಾಲಿಗೆ 73 ರನ್ ಹೊಡೆದ ಎಬಿಡಿ ವಿಲಿಯರ್ಸ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಲಾಗಿದೆ.
Advertisement
In a batters game @yuzi_chahal should get MOM here,incredible figures especially as it’s in Sharjah ????
— Ben Stokes (@benstokes38) October 12, 2020
Advertisement
ಐಪಿಎಲ್ನಲ್ಲಿ ಕಳೆದ ಕೆಲ ಆವೃತ್ತಿಗಳಿಂದ ಆರ್ಸಿಬಿ ತಂಡದಲ್ಲಿ ಬೌಲಿಂಗ್ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಈ ಆವೃತ್ತಿಯಲ್ಲಿ ಬೆಂಗಳೂರು ಬೌಲರ್ಸ್ ಗಳು ಮ್ಯಾಚಿಕ್ ಮೇಲೆ ಮ್ಯಾಜಿಕ್ ಮಾಡುತ್ತಿದ್ದಾರೆ. ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಯುಜ್ವೇಂದ್ರ ಚಹಲ್, ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 12 ರನ್ ನೀಡಿ ಒಂದು ವಿಕೆಟ್ ಕಿತ್ತು ಮಿಂಚಿದ್ದಾರೆ.
ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಎಬಿಡಿಯವರ ಸ್ಫೋಟಕ ಆಟದಿಂದ ಆರ್ಸಿಬಿ ತಂಡ ಕೆಕೆಆರ್ ತಂಡಕ್ಕೆ 195 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡಕ್ಕೆ ಬೆಂಗಳೂರು ಬೌಲರ್ ಗಳು ಆರಂಭಿಕ ಆಘಾತ ನೀಡಿದರು. ಚಹಲ್ ಮತ್ತು ಸುಂದರ್ ಅವರ ಸ್ಪಿನ್ ದಾಳಿಗೆ ಕೆಕೆಆರ್ ಬ್ಯಾಟ್ಸ್ ಮ್ಯಾನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಜೊತೆಗೆ ನಿಗದಿ 20 ಓವರಿನಲ್ಲಿ ಕೇವಲ 112 ರನ್ ಸಿಡಿಸಿ 87 ರನ್ಗಳಿಂದ ಕೋಲ್ಕತ್ತಾ ಸೋತಿತು.