ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಇದೀಗ ಚಳಿಗಾಲದಲ್ಲಿ ಕೊರೊನಾ ಪ್ರಕರಣಗಳು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿಗೆ ಎಂಬ ಆತಂಕಕಾರಿ ವಿಚಾರವೊಂದು ಬಯಲಾಗಿದೆ.
ಬೇಸಿಗೆಯಲ್ಲಿ ಅಟ್ಟಹಾಸ ಮೆರೆದಿರೋ ಮಹಾಮಾರಿ ಕೊರೊನಾ ಚಳಿಗಾಲದಲ್ಲಿಯೂ ಬ್ಯಾಟಿಂಗ್ ಮಾಡೋಕೆ ಸಜ್ಜಾಗಿದೆ. ಹೀಗಾಗಿ ಚಳಿಗಾಲದಲ್ಲಿ ಸ್ವಲ್ಪ ಯಾಮಾರಿದರೂ ಮನೆ ಬಾಗಿಲಿಗೆ ಕೊರೊನಾ ಹೆಮ್ಮಾರಿ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಳಿಗಾಲದಲ್ಲಿ ಶೀತ, ಕೆಮ್ಮು ಹಲವು ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ವಯಸ್ಸಾದವರು ಮನೆಯಿಂದ ಹೊರ ಬಂದ್ರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಅಕ್ಟೋಬರ್ ಅಂತ್ಯದ ವೇಳೆಗೆ 9 ಲಕ್ಷ ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗೋ ಸಾಧ್ಯತೆ ಇದ್ದು, ಚಳಿಗಾಲದ ಬಗ್ಗೆ ತಜ್ಞರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಈ ಸಂಬಂಧ ಐಸಿಯು ತಜ್ಞ ಡಾ.ಜಗದೀಶ್ ಹಿರೇಮಠ ಮಾತನಾಡಿ, ಚಳಿಗಾಲದಲ್ಲಿ ಕೊರೊನಾ ವೈರಸ್ ಮಲ್ಟಿಪಲ್ ಆಗೋ ಸಾಧ್ಯತೆ ಇದೆ. ಜೊತೆಗೆ ಜನರು ಒಬ್ಬರ ಹತ್ತಿರ ಮತ್ತೊಬ್ಬರು ಇರ್ತಾರೆ. ಈ ವೇಳೆ ಸಾಮಾಜಿಕ ಅಂತರ ಕಡಿಮೆ ಆಗುತ್ತದೆ. ಹೀಗಾಗಿ ಸಾಂಕ್ರಾಮಿಕ ರೋಗಗಳು ಬಹುಬೇಗ ಹರಡುತ್ತವೆ. ಪರಿಣಾಮ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಆಗುತ್ತದೆ ಎಂದು ಹೇಳಿದ್ದಾರೆ.
10,704 ಪಾಸಿಟಿವ್, ಆಸ್ಪತ್ರೆಯಿಂದ 9,613 ಡಿಸ್ಚಾರ್ಜ್ – 101 ಬಲಿ https://t.co/JODJ8UydyN#Corona #Covid19 #KannadaNews #CoronaVirus #Hospital
— PublicTV (@publictvnews) October 8, 2020