ಪ್ಯಾರಿಸ್: ಚಳಿಗಾಲ ಬರುತ್ತಿದ್ದಂತೆ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಭಾರತದಂತೆಯೇ ಯೂರೋಪ್‍ನಲ್ಲೂ ಚಳಿಗಾಲ ಘನಘೋರ ಸ್ಥಿತಿ ನಿರ್ಮಿಸುವ ಸಾಧ್ಯತೆ ಇದೆ.
ಈ ವಿಚಾರ ಮನಗಂಡಿರುವ ಫ್ರಾನ್ಸ್, ಜರ್ಮನಿ ಸೇರಿದಂತೆ ಆದರೆ, ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ 2ನೇ ಅಲೆ ಕಂಪನ ಎಬ್ಬಿಸಿಬಿಟ್ಟಿದೆ. ಹಾಗಾಗಿ 2ನೇ ಹಂತದ ಲಾಕ್‍ಡೌನ್, ಜನತಾ ಕರ್ಫ್ಯೂ ಹೇರಿಕೊಂಡಿವೆ.
Advertisement
Advertisement
ಯಾವ ದೇಶದಲ್ಲಿ ಏನು?
ಫ್ರಾನ್ಸ್:
2ನೇ ಹಂತದ ಲಾಕ್‍ಡೌನ್ ಫ್ರಾನ್ಸ್‌ನಲ್ಲಿ ಘೋಷಣೆಯಾಗಿದೆ. ಅ.6ರಿಂದ 4 ವಾರ ಲಾಕ್‍ಡೌನ್ ಆಗಲಿದೆ. ಫ್ರಾನ್ಸಿನಲ್ಲಿ 12.35 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ. ಒಟ್ಟು 35 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.
Advertisement
ಜರ್ಮನಿ:
2ನೇ ಹಂತದ ಲಾಕ್‍ಡೌನ್ ನವೆಂಬರ್ 2 ರಿಂದ 30ರ ವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಇರಲಿದೆ. 4.81 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲಿ 16ನೇ ಸ್ಥಾನದಲ್ಲಿದೆ. ಒಟ್ಟು 10,359 ಮಂದಿ ಸಾವನ್ನಪ್ಪಿದ್ದಾರೆ.
Advertisement
ಇಸ್ರೇಲ್:
2ನೇ ಹಂತದ ಲಾಕ್‍ಡೌನ್ 3 ವಾರ ಕಾಲ ಇರಲಿದೆ. 3.12 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲಿ 28ನೇ ಸ್ಥಾನದಲ್ಲಿದೆ. 2,494 ಮಂದಿ ಸಾವನ್ನಪ್ಪಿದ್ದಾರೆ,
ಅಮೆರಿಕ:
ಲಾಕ್‍ಡೌನ್ ಘೋಷಣೆಯಾಗಿಲ್ಲ. ತೆರೆಯಲಾಗಿದ್ದ ಶಾಲಾ-ಕಾಲೇಜ್ ಮತ್ತೆ ಬಂದ್ ಮಾಡಲಾಗಿದೆ . 91.21 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. 2.33 ಲಕ್ಷ ಮಂದಿ ಮೃತಪಟ್ಟಿದ್ದಾರೆ.
ಸ್ಪೇನ್
9 ನಗರಗಳಲ್ಲಿ ಜನತಾ ಕರ್ಫ್ಯೂ ಘೋಷಣೆಯಾಗಿದೆ. 11.91 ಲಕ್ಷ ಮಂದಿಗೆ ಸೋಂಕು ಬಂದಿದ್ದು 6ನೇ ಸ್ಥಾನದಲ್ಲಿದೆ. 35,785 ಮಂದಿ ಬಲಿಯಾಗಿದ್ದಾರೆ.
ನೆದರ್‌ಲ್ಯಾಂಡ್:
ಜನತಾ ಕರ್ಫ್ಯೂ ಹೇರಲಾಗಿದ್ದು 3.19 ಲಕ್ಷ ಮಂದಿಗೆ ಸೋಂಕು ಬಂದಿದೆ. ವಿಶ್ವದಲ್ಲೇ 26ನೇ ಸ್ಥಾನದಲ್ಲಿದ್ದು, 7,202 ಮಂದಿ ಬಲಿಯಾಗಿದ್ದಾರೆ.
ಇಟಲಿ:
ನೈಟ್‍ಕ್ಲಬ್‍ಗಳನ್ನು ಮುಚ್ಚಲಾಗಿದ್ದು 5.89 ಲಕ್ಷ ಮಂದಿಗೆ ಸೋಂಕು ಬಂದಿದೆ. 13ನೇ ಸ್ಥಾನದಲ್ಲಿರುವ ಇಟಲಿಯಲ್ಲಿ 37,905 ಮಂದಿ ಮೃತಪಟ್ಟಿದ್ದಾರೆ.