ಲಕ್ನೋ: ಚಲಿಸುತ್ತಿದ್ದ ವಾಹನದ ಮೇಲೆ ಸ್ಟಂಟ್ ಮಾಡಿದ ಯುವಕನಿಗೆ ತಕ್ಕ ಪಾಠವನ್ನು ಕಲಿಸಿದ ಪೊಲೀಸರು ಒಂದು ವೀಡಿಯೋವನ್ನು ಹಂಚಿಕೊಂಡಿದ್ದು ಸಖತ್ ಸುದ್ದಿಯಾಗಿದೆ.
ಉತ್ತರಪ್ರದೇಶದ ಯುವಕನೊಬ್ಬ ಚಲಿಸುತ್ತಿರುವ ವಾಹನದ ಮೇಲೆ ಪುಶ್-ಅಪ್ ಮಾಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಪಡೆಯಲು ಯುವಕ ಈ ವಿಚಿತ್ರ ಮಾರ್ಗವನ್ನು ಅನುಸರಿಸಿದ್ದಾನೆ.
ಈ ವೀಡಿಯೋ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಪೊಲೀಸರು, ಯುವಕನ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದಾರೆ.
Some Pushups will only bring you down in the eyes of Law !
Stay Strong, Stay Safe !#UPPCares #UPPolice pic.twitter.com/dvGSjtL2Az
— UP POLICE (@Uppolice) March 13, 2021
ಕೆಲವು ಪುಶ್ ಅಪ್‍ಗಳು ನಿಮ್ಮನ್ನು ಕಾನೂನಿನ ಕಣ್ಣಿಗೆ ಕಾಣುವಂತೆ ಮಾಡುತ್ತದೆ ಎಂದು ಬರೆದುಕೊಂಡು ಯುವಕ ಪುಶ್ ಅಪ್ ಮಾಡುತ್ತಿರುವ ವೀಡಿಯೋ ಜೊತೆಗೆ ದಂಡವನ್ನು ಕಟ್ಟಿರುವ ರಸೀದಿ ಹಾಗೂ ಯುವಕ ಪೊಲೀಸರಲ್ಲಿ ಕ್ಷಮೆ ಕೇಳಿದ ವೀಡಿಯೋವನ್ನು ಒಟ್ಟಿಗೆ ಉತ್ತರಪ್ರದೇಶ ಪೊಲೀಸರು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೊಲೀಸರು ಹಂಚಿಕೊಂಡ ವೀಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ.