ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ- ಪವಾಡ ಸದೃಶ ರೀತಿ ಪಾರಾದ ತಾ.ಪಂ.ಅಧ್ಯಕ್ಷ

Public TV
1 Min Read
gdg car accident

ಗದಗ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಮುಂಭಾಗ ಸಂಪೂರ್ಣ ಸುಟ್ಟಿದೆ. ಆದರೆ ಪವಾಡವೆಂಬಂತೆ ತಾಲೂಕು ಪಂಚಾಯತ್ ಅಧ್ಯಕ್ಷ ಪರಸಪ್ಪ ಇಮ್ಮಡಿ ಪಾರಾಗಿದ್ದಾರೆ.

WhatsApp Image 2020 09 08 at 5.36.12 PM

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಬಟ್ಟೂರು ಬಳಿ ಘಟನೆ ನಡೆದಿದೆ. ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ಅಧ್ಯಕ್ಷರ ಪರಸಪ್ಪ ಇಮ್ಮಡಿ ಅವರ ಡಸ್ಟರ್ ಕಾರಿನ ಮುಂಭಾಗ ಹಾಗೂ ಒಳಗಡೆಯ ಸೀಟ್‍ಗಳು ಸುಟ್ಟು ಕರಕಲಾಗಿವೆ. ಬಟ್ಟೂರಿನಿಂದ ಲಕ್ಷ್ಮೇಶ್ವರಕ್ಕೆ ಹೋಗುವ ವೇಳೆ ಆಡರಗಟ್ಟಿ ಬಳಿ ದಾರಿ ಮಧ್ಯೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಡಸ್ಟರ್ ಕಾರು ಹೊತ್ತಿ ಉರಿದಿದೆ. ಆದರೆ ತಾಲೂಕು ಪಂಚಾಯಿತಿ ಅಧ್ಯಕ್ಷ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.

WhatsApp Image 2020 09 08 at 5.36.13 PM e1599574998897

ಸ್ವತಃ ಅಧ್ಯಕ್ಷ ಪರಸಪ್ಪ ಅವರೇ ವಾಹನ ಚಲಿಸುತ್ತಿದ್ದರು. ಬಟ್ಟೂರಿನಿಂದ ಲಕ್ಷ್ಮೇಶ್ವರಕ್ಕೆ ಹೋಗುವ ವೇಳೆ ಆಡರಗಟ್ಟಿ ಬಳಿ ದಾರಿ ಮಧ್ಯೆ ಏಕಾಏಕಿ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಅಧ್ಯಕ್ಷ ಪರಸಪ್ಪ ಕ್ಷಣಾರ್ಧದಲ್ಲಿ ಪಾರಾಗಿದ್ದು, ಸ್ಥಳಿಯರು ಆಗಮಿಸಿ ಬೆಂಕಿ ನಂದಿಸಿದರು. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *