ಶಾರ್ಜಾ: ಶನಿವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ 18 ರನ್‌ಗಳಿದ್ದ ರೋಚಕವಾಗಿ ಗೆದ್ದರೂ ಸ್ಪಿನ್ನರ ಆರ್ ಅಶ್ವಿನ್ ಅವರ ಮಿಸ್ ಫೀಲ್ಡ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
ಇಯಾನ್ ಮಾರ್ಗನ್ ಮತ್ತ ರಾಹುಲ್ ತ್ರಿಪಾಠಿ ಸಿಕ್ಸ್, ಬೌಂಡರಿಗಳನ್ನು ಸಿಡಿಸುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು. ತಂಡದ ಮೊತ್ತ 200 ಆಗಿದ್ದಾಗ 19ನೇ ಓವರಿನ ಮೂರನೇ ಎಸೆತವನ್ನು ಸಿಕ್ಸ್ ಹೊಡೆಯಲು ಹೋಗಿ ಬೌಂಡರಿ ಬಳಿ ಹೆಟ್ಮೆಯರ್‌ಗೆ ಕ್ಯಾಚ್ ನೀಡಿ ಮಾರ್ಗನ್ ಔಟಾದರು.
Advertisement
Advertisement
ಮಾರ್ಗನ್ ಸ್ಥಾನವನ್ನು ತುಂಬಲು ಬೌಲರ್ ನಾಗರ್‌ಕೋಟಿ ಕ್ರೀಸಿಗೆ ಆಗಮಿಸಿದರು. ಅನ್ರಿಕ್ ನಾರ್ಟ್ಜೆ ಎಸೆದ 4ನೇ ಎಸೆತದಲ್ಲಿ ತ್ರಿಪಾಠಿ ಒಂದು ರನ್ ಓಡಿದರು. 5ನೇ ಎಸೆತವನ್ನು ನಾಗರ್‌ಕೋಟಿ ಬಲಗಡೆಗೆ ಹೊಡೆದಾಗ ಪಾಯಿಂಟ್‌ನಲ್ಲಿದ್ದ ಅಶ್ವಿನ್ ಮಿಸ್‌ಫೀಲ್ಡ್ ಮಾಡಿದರು.
Advertisement
ಅಶ್ವಿನ್ ಮಿಸ್ ಫೀಲ್ಡ್ ಮಾಡಿದ ಚೆಂಡು ಅಷ್ಟೇನು ವೇಗದಲ್ಲಿ ಇರಲಿಲ್ಲ ಮತ್ತು ಸುಲಭವಾಗಿ ಹಿಡಿಯಬಹುದಿತ್ತು. ಮಿಸ್ ಫೀಲ್ಡ್ ಆದ ಕಾರಣ ಎರಡು ರನ್ ಓಡಿ ಮತ್ತೆ ಸ್ಟ್ರೈಕ್‌ಗೆ ನಾಗರಕೋಟಿ ಬಂದರು. ಇದನ್ನೂ ಓದಿ: ವಿವಾದಕ್ಕೆ ಕಾರಣವಾಯ್ತು ಚಹಲ್ ಹಿಡಿದ ಕ್ಯಾಚ್- ಚೆಂಡು ನೆಲಕ್ಕೆ ತಾಗಿತ್ತಾ?
Advertisement
ಒಂದು ವೇಳೆ ಮಿಸ್ ಫೀಲ್ಡ್ ಆಗದೇ ಇದ್ದರೆ ಸ್ಟ್ರೈಕ್‌ಗೆ ತ್ರಿಪಾಠಿ ಬರುತ್ತಿದ್ದರು. ಅವರಿಗೆ ಎರಡು ಎಸೆತ ಸಿಗುತ್ತಿತ್ತು. ಐಪಿಎಲ್‌ನಲ್ಲಿ 2 ಎಸೆತದಲ್ಲಿ ಏನು ಬೇಕಾದರೂ ಆಗುತ್ತದೆ ಎಂಬುದು ಹಲವು ಪಂದ್ಯಗಳಲ್ಲಿ ಈಗಾಗಲೇ ಸಾಬೀತಾಗಿದೆ. ಹೀಗಾಗಿ ಉದ್ದೇಶಪೂರ್ವಕವಾಗಿ ಅಶ್ವಿನ್ ಮಿಸ್‌ಫೀಲ್ಡ್ ಮಾಡಿದ್ದಾರೆ ಎಂಬುದರ ಬಗ್ಗೆ ಈ ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ಕನ್ನಡ ಕಮೆಂಟ್ರಿಯಲ್ಲೂ ಮಿಸ್‌ಫೀಲ್ಡ್ ವಿಚಾರ ಪ್ರಸ್ತಾಪವಾಗಿತ್ತು.
Intentional misfield from Ashwin to let that 2 to Nagarkoti ????
— viv (@nomadic_23) October 3, 2020
ಈ ಹಿಂದೆ 2019ರ ಐಪಿಎಲ್‍ನಲ್ಲಿ ಅಶ್ವಿನ್ ಜೋಸ್ ಬಟ್ಲರ್ ಅವರನ್ನು ಮಂಕಡ್ ರನೌಟ್ ಮಾಡಿ ಬಹಳ ಟ್ರೋಲ್ ಆಗಿದ್ದರು. ಬೌಲರ್ ಬೌಲ್ ಮಾಡುವ ಮೊದಲೇ ನಾನ್ ಸ್ಟ್ರೈಕ್‍ನಲ್ಲಿ ನಿಂತಿರುವ ಬ್ಯಾಟ್ಸ್ ಮ್ಯಾನ್ ಕ್ರೀಸ್‍ನಿಂದ ಮುಂದೆ ಹೋದಾಗ ಬಾಲ್ ಎಸೆಯದೇ ಔಟ್ ಮಾಡುವುದಕ್ಕೆ ಮಂಕಡ್ ರನೌಟ್ ಎನ್ನುತ್ತಾರೆ. ಇದು ಐಸಿಸಿ ನಿಯಮದಲ್ಲಿ ಇದ್ದರೂ ಜನಾಭಿಪ್ರಾಯದಲ್ಲಿ ಇದಕ್ಕೆ ಭಾರೀ ವಿರೋಧವಿದೆ. ಇದನ್ನೂ ಓದಿ: ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್
ಕ್ರಿಕೆಟ್ ಆಡುವ ಸಂರ್ಭದಲ್ಲಿ ಅಶ್ವಿನ್ ಬಹಳ ಸ್ಮಾರ್ಟ್ ಆಗಿ ಆಡುತ್ತಿರುತ್ತಾರೆ. ಬೇರೆಯವರು ತಪ್ಪು ಮಾಡಿದರೆ ಚರ್ಚೆ ಆಗುತ್ತಿರಲಿಲ್ಲ. ಆದರೆ ಅಶ್ವಿನ್ ಮಿಸ್ ಫೀಲ್ಡ್ ಮಾಡಿದ್ದರಿಂದ ಚರ್ಚೆ ಆಗುತ್ತಿದೆ.
ಇಯಾನ್ ಮಾರ್ಗನ್ ಮತ್ತು ರಾಹುಲ್ ತ್ರಿಪಾಠಿ 7ನೇ ವಿಕೆಟಿಗೆ 31 ಎಸೆತದಲ್ಲಿ 78 ರನ್ ಹೊಡೆದಿದ್ದರು. ಸ್ಟೋನಿಸ್ ಎಸೆದ 17ನೇ ಓವರಿನಲ್ಲಿ 24 ರನ್ ಬಂದಿತ್ತು. ಈ ಓವರಿನಲ್ಲಿ ತ್ರಿಪಾಠಿ 3 ಸಿಕ್ಸ್ 1 ಬೌಂಡರಿ ಹೊಡೆದಿದ್ದರು. ರಬಾಡ ಎಸೆದ 18ನೇ ಓವರಿನಲ್ಲಿ 23 ರನ್ ಬಂದಿತ್ತು. ಮಾರ್ಗನ್ 3 ಸಿಕ್ಸ್ ಹೊಡೆದಿದ್ದರೆ ತ್ರಿಪಾಠಿ 1 ಬೌಂಡರಿ ಹೊಡೆದಿದ್ದರು.
https://twitter.com/ImArvind_18/status/1312452990867972096