ಮುಂಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಧೋನಿ ಹೆಚ್ಚು ಅನುಭವ ಹೊಂದಿರುವ ಆಟಗಾರನಾಗಿದ್ದು, 39ನೇ ವಯಸ್ಸಿನಲ್ಲೂ ಭರ್ಜರಿಯಾಗಿ ರನ್ ಓಡುವ ಮೂಲಕ ತಮ್ಮ ಫಿಟ್ನೆಸ್ ಸಾಬೀತು ಪಡಿಸುತ್ತಿದ್ದಾರೆ. ಇದರ ನಡುವೆಯೇ ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ಮಾಡಿರುವ ಒಂದು ಟ್ವೀಟ್ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.
Advertisement
ಕಳೆದ ಪಂದ್ಯದಲ್ಲಿ ಧೋನಿ 36 ಎಸೆತಗಳಲ್ಲಿ 4 ಬೌಂಡರಿ, ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದ್ದರು. ಧೋನಿ ಕ್ರಿಸ್‍ನಲ್ಲಿದ್ದರೂ ಚೆನ್ನೈ ತಂಡ 7 ರನ್ ಅಂತರದಲ್ಲಿ ಸೋಲುಂಡಿತ್ತು. ಇದಾದ ಬಳಿಕ ಧೋನಿ ವಯಸ್ಸಿನ ಕುರಿತು ಚರ್ಚೆ ಜೋರಾಗಿತ್ತು. ಈ ನಡುವೆ ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್, ಕೆಲವರಿಗೆ ವಯಸ್ಸು ಕೇವಲ ನಂಬರ್ ಅಷ್ಟೇ. ಆದರೆ ಮತ್ತೊಬ್ಬರಿಗೆ ತಂಡದಿಂದ ತೆಗೆದು ಹಾಕಲು ಕಾರಣವಾಗುತ್ತದೆ ಎಂದು ಧೋನಿ ಹೆಸರನ್ನು ಪ್ರಸ್ತಾಪ ಮಾಡದೇ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದಾರೆ.
Advertisement
Age is just a number for some and for others a reason to be dropped…
— Irfan Pathan (@IrfanPathan) October 3, 2020
Advertisement
ಸದ್ಯ ಇರ್ಫಾನ್ ಮಾಡಿರುವ ಕಾಮೆಂಟ್ ಟಾಕ್ ಆಫ್ ದಿ ಟೌನ್ ಆಗಿ ಮಾರ್ಪಾಡಾಗಿದ್ದು, ಹಲವರು ಪರ-ವಿರೋಧ ಪ್ರತಿಕ್ರಿಯೆಗಳನ್ನು ನೀಡಿ ರೀ ಟ್ವೀಟ್ ಮಾಡುತ್ತಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಯೂಸಫ್ ಪಠಾಣ್, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಆಟಗಾರನನ್ನು ವಯಸ್ಸಿನ ಕಾರಣದಿಂದಲೇ ಕೈಬಿಡಲಾಗಿತ್ತು. ಹಲವು ಆಟಗಾರರಿಗೆ ವಿದಾಯ ಪಂದ್ಯ ಆಡಲು ಸಹ ಅವಕಾಶ ನೀಡದೆ ಕ್ರಿಕೆಟ್‍ನಿಂದ ದೂರ ಮಾಡಲಾಗಿತ್ತು ಎಂದು ಹಲವು ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಐಪಿಎಲ್ 2020ರ ಆವೃತ್ತಿಯಲ್ಲಿ ಹೈದರಾಬಾದ್ ವಿರುದ್ಧ ಸೋಲುಂಡ ಚೆನ್ನ ತಂಡ 6 ವರ್ಷಗಳ ಬಳಿಕ ಸಸತವಾಗಿ ಮೂರು ಪಂದ್ಯಗಳನ್ನು ಸೋಲುಂಡ ಕೆಟ್ಟ ದಾಖಲೆ ಬರೆದಿದೆ. ಟೂರ್ನಿಯ ಅಂಕಪಟ್ಟಿಯಲ್ಲಿ 2 ಅಂಕಗಳೊಂದಿಗೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಚೆನ್ನೈ ವಿರುದ್ಧ ಗೆಲುವು ಪಡೆದ ಹೈದರಾಬಾದ್ ತಂಡ 4 ಅಂಕಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.