ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಚನ್ನಪಟ್ಟಣದವರಲ್ವ, ಅವರನ್ನೇ ಕೇಳಿ: ಡಿಕೆ ಸುರೇಶ್

Public TV
1 Min Read
DK SURESH 2

ರಾಮನಗರ: ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಜೊತೆಯಲ್ಲಿದ್ದವರು. ಜೊತೆಯಲ್ಲಿದ್ದವರೇ ಅದನ್ನ ನೋಡಲು ಸಾಧ್ಯ, ಬೇರೆಯವರಿಂದ ಹೇಗೆ ಸಾಧ್ಯ. ಅವರ ಜೊತೆಯಲ್ಲಿದ್ದವರು ಚನ್ನಪಟ್ಟಣದವರು ಅಲ್ವ, ಅವರನ್ನೇ ಕೇಳಿ ಎಂದು ಸಂಸದ ಡಿ.ಕೆ ಸುರೇಶ್ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಸಚಿವರ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಸಿಡಿ ಪ್ರಕರಣದಲ್ಲಿ ಚನ್ನಪಟ್ಟಣದವರದ್ದು ಪಾತ್ರ ಇದೆ. ಚನ್ನಪಟ್ಟಣದವರಿಗೆ ಅಧಿಕಾರದ ಮೇಲೆ ಆಸೆಯಿತ್ತಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಅವರದ್ದು ಭಾಗಿ ಇದೆ ಎಂದು ಆರೋಪಿಸಿದರು.

DK SURESH

ಕನಕಪುರದವರದ್ದು ಆಸೆಯಿದ್ದ ಮೇಲೆ, ಚನ್ನಪಟ್ಟಣದವರದ್ದು ಇಲ್ವಾ. ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಲು ಜೊತೆಯಲ್ಲಿದ್ದವರಿಂದ ಮಾತ್ರ ಸಾಧ್ಯ, ಬೇರೆಯವರಿಂದ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅಲ್ಲದೆ ಅವರ ಜೊತೆಯಲ್ಲಿದ್ದವರು ಚನ್ನಪಟ್ಟಣದವರು ಅಲ್ವ, ಅವರನ್ನೇ ಕೇಳಿ ಎಂದರು.

ಈ ಹಿಂದೆ ಮಾತನಾಡಿದ್ದ ಸಿ.ಪಿ ಯೋಗೇಶ್ವರ್ ಅವರು, ಸಿಡಿ ಪ್ರಕರಣದಲ್ಲಿ ಕನಕಪುರ, ಬೆಳಗಾವಿಯವರ ಪಾತ್ರ ಇದೇ ಎಂದಿದ್ದರು. ಇದೀಗ ಸಂಸದರು ಇದೇ ಹೇಳಿಕೆಯನ್ನಿಟ್ಟುಕೊಂಡು ಟಾಂಗ್ ನೀಡಿದ್ದಾರೆ.

DK SURESH 1

ಒಟ್ಟಿನಲ್ಲಿ ಮಾಜಿ ಸಚಿವರ ಸಿಡಿ ಪ್ರಕರಣವನ್ನು ಕೈಗೆತ್ತಿಕೊಂಡ ಮೊದಲ ದಿನವಾದ ಇಂದು ಎಸ್‍ಐಟಿ ಭರ್ಜರಿ ಬೇಟೆಯಾಡಿದ್ದು, ಓರ್ವ ಯುವತಿ ಹಾಗೂ ನಾಲ್ವರು ಯುವಕರನ್ನು ವಶಕ್ಕೆ ಪಡೆದಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್‍ಐಟಿ, ಇಂದು ಒಟ್ಟು 5 ಜನರನ್ನು ಬೇಟೆಯಾಡಿದೆ. ಇದರಲ್ಲಿ ಓರ್ವ ಯುವತಿ, ನಾಲ್ವರು ಯವಕರು ಸೇರಿದ್ದಾರೆ. ಆರಂಭದಲ್ಲಿ ಯಶವಂತಪುರದಲ್ಲಿ ಓರ್ವನನ್ನು ವಶಕ್ಕೆ ಪಡದು ವಿಚಾರಣೆ ನಡೆಸಲಾಗಿತ್ತು. ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದ್ದು ಬಳಿಕ ನಾಲ್ವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *