ಮಡಿಕೇರಿ: ರಸ್ತೆ ಕಾಮಗಾರಿಗೆ ಹೋಗುತ್ತಿದ್ದ ರೋಡ್ ರೋಲರ್ ಚಕ್ರ ಬಿಚ್ಚಿದ್ದಕ್ಕೆ ಕಳಚಿಬಿದ್ದಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ಹಾಗೂ ಮೂರ್ನಾಡು ಮಧ್ಯೆ ನಡೆದಿದೆ.
Advertisement
ರಸ್ತೆ ಕೆಲಸಕ್ಕೆಂದು ಹೋಗುತ್ತಿದ್ದಾಗ ರೋಲರ್ ನ ಎಡಭಾಗದ ಚಕ್ರ ಕಳಚಿ ರಸ್ತೆ ಪಕ್ಕದ ಬಾಳೆ ತೋಟಕ್ಕೆ ಹೋಗಿ ಬಿದ್ದಿದೆ. ಸ್ವಲ್ಪ ದೂರದಲ್ಲೇ ಆರ್‍ಟಿಓ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತಿದ್ದರಿಂದ ರೋಡ್ ರೋಲರ್ ಎದುರಿಗೆ ಯಾವುದೇ ವಾಹನಗಳು ಬಂದಿಲ್ಲ. ಇದರಿಂದಾಗಿ ಸಂಭವಿಸಬಹುದಾಗಿದ್ದ ಬಾರಿ ಅನಾಹುತ ತಪ್ಪಿದೆ.
Advertisement
Advertisement
ಚಕ್ರ ಕಳಚಿ ಹೋಗಿದ್ದರಿಂದ ರೋಲರ್ ಮಿಷನ್ ರಸ್ತೆ ಮಧ್ಯದಲ್ಲೇ ಬಿದ್ದಿದೆ. ಬಳಿಕ ಜೆಸಿಬಿಯ ಸಹಾಯದಿಂದ ರೋಲರ್ ಮಿಷನ್ ಅನ್ನು ರಸ್ತೆಯಿಂದ ತೆರವುಗೊಳಿಸಿದ ವಿರಾಜಪೇಟೆಯ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.