ಬಿಗ್ ಬಾಸ್ ಮನೆಯಲ್ಲಿ ಈಗ ಬೇಗುದಿ ಆರಂಭವಾಗುತ್ತಿದ್ದು, ಒಬ್ಬರನ್ನೊಬ್ಬರು ದೂಷಿಸುವ ಸಂದರ್ಭ ಶುರುವಾಗಿದೆ. ಬ್ಲೇಡ್ ರಾಜ ಎಂದು ಮನೆ ಮಂದಿ ಹೇಳಿದ್ದಕ್ಕೆ ಚಕ್ರವರ್ತಿ ಚಂದ್ರಚೂಡ್ ಸಿಕ್ಕಾಪಟ್ಟೆ ಬೇಜಾರಾಗಿದ್ದಾರೆ. ಯಾಕೆ ನನ್ನನ್ನು ಎಲ್ಲರೂ ಬ್ಲೇಡ್ ರಾಜ ಎಂದರು? ಇದ್ದಿದ್ದನ್ನ ಇದ್ದಂಗೆ ಹೇಳಿದ್ಕಾ? ಏನು, ಎತ್ತ ಎಂದು ವೈಷ್ಣವಿ ಅವರನ್ನು ಪ್ರಶ್ನಿಸಿದ್ದಾರೆ.
Advertisement
ಕಣ್ಮಣಿ ಬ್ಲೇಡ್ ರಾಜ ಅವಾರ್ಡ್ ಯಾರಿಗೆ ನೀಡಬೇಕು ಎಂದು ಕೇಳಿದಾಗ ಮನೆಯ ಸದಸ್ಯರು ಚಕ್ರವರ್ತಿ ಚಂದ್ರಚೂಡ್ ಹೆಸರು ಹೇಳಿದ್ದಾರೆ. ಅಲ್ಲದೆ ಕಣ್ಮಣಿ ಸಹ ಬ್ಲೇಡ್ ರಾಜ ಅವಾರ್ಡ್‍ನ್ನು ಚಕ್ರವರ್ತಿ ಚಂದ್ರಚೂಡ್ ಅವರಿಗೆ ನೀಡಿದ್ದಾರೆ. ಹೇಳಿದ್ದನ್ನೇ ಹೇಳ್ತಾರೆ, ಜಾಸ್ತಿ ಹೊತ್ತು ತಲೆ ತಿಂತಾರೆ ಎನ್ನುವ ಉದ್ದೇಶದಿಂದ ಮನೆ ಮಂದಿ ಚಕ್ರವರ್ತಿ ಹೆಸರನ್ನೇ ಪ್ರಸ್ತಾಪಿಸಿದ್ದಾರೆ. ಇದೀಗ ಈ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದ್ದು, ಯಾಕೆ ನನಗೆ ಎಲ್ಲರೂ ಬ್ಲೇಡ್ ರಾಜ ಎಂದರು ಎಂದು ಚಕ್ರವರ್ತಿ ವೈಷ್ಣವಿ ಬಳಿ ಕೇಳಿದ್ದಾರೆ. ಆಗ ವೈಷ್ಣವಿ ಸಮಾಧಾನಪಡಿಸಲು ಯತ್ನಿಸಿದ್ದಾರೆ.
Advertisement
Advertisement
ಆರಂಭದಲ್ಲಿ ಈ ಬಗ್ಗೆ ಮಂಜು ಹಾಗೂ ದಿವ್ಯಾ ಸುರೇಶ್ ಮಾತನಾಡಿಕೊಂಡಿದ್ದು, ಚಕ್ರವರ್ತಿ ನನ್ನ ಮೇಲೆ ತುಂಬಾ ಬೇಜಾರಾಗಿದ್ದಾರೆ, ಹೆಚ್ಚು ಮಾತನಾಡಿದ್ದು ನೀನಲ್ಲವೇ ಎಂದು ನನ್ನನ್ನು ಪ್ರಶ್ನಿಸಿದರು. ತುಂಬಾ ಮಾತನಾಡಿದ್ದು ನಾನೇ ಆದರೆ ಕಣ್ಮಣಿ ಬ್ಲೇಡ್ ರಾಜ ಎಂದು ಕೇಳಿರುವುದು ಎಂದು ಹೇಳಿದೆ ಎಂದು ಮಂಜು ದಿವ್ಯಾಗೆ ಹೇಳಿದ್ದಾರೆ. ಮನಸ್ಸಲ್ಲಿ ಇನ್ನೊಬ್ಬರಿಗೆ ಕೆಟ್ಟದ್ದು ಬಯಸಿ, ಮುಂದೆ ಚೆನ್ನಾಗಿರುವುದು ಅಸಾಧ್ಯ, ಚಕ್ರವರ್ತಿ ತುಂಬಾ ಬೇಸರವಾದರು, ಆದರೆ ಅವರು ಬ್ಲೇಡ್ ರಾಜ ಎನ್ನುವುದರಲ್ಲಿ ಸತ್ಯ ಇದೆ. ಬೇರೆಯವರ ಜೊತೆ ಮಾತನಾಡುತ್ತಿದ್ದಾಗ ನಾನು ಹೋದ ತಕ್ಷಣ ಹೊಗಳಲು ಆರಂಭಿಸುತ್ತಾರೆ ಎಂದು ಚಕ್ರವರ್ತಿ ಬಗ್ಗೆ ಮಂಜು ಬಳಿ ದಿವ್ಯಾ ಸುರೇಶ್ ಹೇಳಿದ್ದಾರೆ.
Advertisement
ಅಲ್ಲದೆ ಇಂದು ಸಹ ಒಬ್ಬೊಬ್ಬ ಸ್ಪರ್ಧಿ ಬಗ್ಗೆ ಹೇಳಲು ಕಣ್ಮಣಿ ಕೇಳಿದಾಗ, ಅದೇ ವಿಚಾರವನ್ನು ಮಂಜು ಪ್ರಸ್ತಾಪಿಸುತ್ತಾರೆ. ನನ್ನ ಜೊತೆಗೇ ಸಿಗರೇಟ್ ಸೇದಲು ಬಂದು, ನನಗೇ ಬ್ಲೇಡ್ ರಾಜ ಅಂತಾರಲ್ಲ ಎಂದು ಚಕ್ರವರ್ತಿ ಯೋಚಿಸುತ್ತಿದ್ದಾರೆ ಎಂದು ಮಂಜು ನೇರವಾಗಿ ಹೇಳಿದ್ದಾರೆ.
ಬ್ಲೇಡ್ ರಾಜ ಎಂದು ಅವಾರ್ಡ್ ಕೊಟ್ಟಿದ್ದಕ್ಕೆ ಬೇಜಾರಾಗಿಲ್ಲ, ಈ ಮೈಂಡ್ ಸೆಟ್‍ಗಳು ಇನ್ನೂ ಇಂಡಿಪೆಂಡೆಂಟ್ ಆಗಿಲ್ಲವಲ್ಲ. ಕೆಟ್ಟದ್ದು ಬಂದಾಗ ಒಬ್ಬರ ತಲೆ ಮೇಲೆ ಹಾಕಲು ತಯಾರಿರುತ್ತಾರೆ, ಯಾರಿಗೂ ಮಾತನಾಡಲು ಸ್ವಾತಂತ್ರ್ಯವೇ ಇಲ್ಲ. ಏನೋ ಹೇಳಿದರೆ, ಇನ್ನೇನೋ ಅರ್ಥ ಮಾಡಿಕೊಳ್ಳುವುದು. ಒಟ್ಟಿನಲ್ಲಿ ನೆಗೆಟಿವ್‍ನ್ನು ಒಬ್ಬನ ಮೇಲೆ ಹಾಕಿ ಸುಮ್ಮನಾಗಿಬಿಡುತ್ತಾರೆ. ಅವನ ಮಾತನ್ನು ಕೇಳಿಸಿಕೊಂಡರೆ ಸ್ಟೋರೇಜ್‍ಗೆ ಜಾಗ ಇರಲ್ಲ, ಅಂತಹವನು ನನಗೆ ಬ್ಲೇಡ್ ರಾಜ ಎನ್ನುತ್ತಾನೆ ಎಂದು ಚಕ್ರವರ್ತಿ ಅವರು ಮಂಜು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನೀವು ಪ್ರತಿ ವಿಚಾರವನ್ನು ವಿವರವಾಗಿ ಹೇಳುವುದರಿಂದ ಅವರಿಗೆ ಆ ರೀತಿ ಅನ್ನಿಸಿರುತ್ತದೆ. ಹೆಚ್ಚು ಮಾತನಾಡುತ್ತಾರೆ ಅನ್ನಿಸುತ್ತದೆ. ಬ್ಲೇಡ್ ರಾಜ ಎನ್ನುವುದು ಕೆಟ್ಟ ಶಬ್ದ ಏನಲ್ಲ ಎಂದು ವೈಷ್ಣವಿ ಸಮಾಧಾನ ಪಡಿಸಲು ಮುಂದಾಗುತ್ತಾರೆ. ಆಗ ಅರ್ಥವಿಲ್ಲದೆ ಮಾತನಾಡುವವರಿಗೆ ಬ್ಲೇಡ್ ರಾಜ ಎನ್ನುತ್ತಾರೆ. ಹೀಗಾಗಿ ನಾನು ಇನ್ಮೆಲೆ ಹೆಚ್ಚು ಮಾತಾಡಲ್ಲ ಎಂದು ಚಕ್ರವರ್ತಿ ಹೇಳಿದ್ದಾರೆ. ಈ ಮೂಲಕ ಮನೆ ಮಂದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.