ಚಿಕ್ಕಬಳ್ಳಾಪುರ: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನು ಈಗಾಗಲೇ ಮುಚ್ಚಲಾಗಿದೆ.
Advertisement
ಕೊರೊನಾ ಆತಂಕದಿಂದ ಸರ್ಕಾರದ ಸೂಚನೆಯ ಮೇರೆಗೆ ಭಕ್ತರಿಗೆ ದೇವಾಲಯಕ್ಕೆ ಅವಕಾಶ ಇಲ್ಲವಾಗಿದ್ದು, ಅರ್ಚಕರು ಮಾತ್ರ ಪೂಜಾ ಕೈಂಕರ್ಯಗಳನ್ನು ನಡೆಸಲಿದ್ದಾರೆ. ಈ ಮಧ್ಯೆ ಏಪ್ರಿಲ್ 29 ರಂದು ದೇವಾಲಯದಲ್ಲಿ ಸಪ್ತಪದಿ ಸಾಮಾಹಿಕ ವಿವಾಹ ಯೋಜನೆಯಡಿ ನಡೆಯಬೇಕಿದ್ದ ಸಾಮೂಹಿಕ ವಿವಾಹಗಳನ್ನ ಸಹ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮುಂದೂಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದೆ.
Advertisement
Advertisement
ಏಪ್ರಿಲ್ 29ರಂದು ದೇವಾಲಯದಲ್ಲಿ ಸಪ್ತಪದಿ ಸಾಮಾಹಿಕ ವಿವಾಹ ಯೋಜನೆಯಡಿ, ಉಚಿತ ಸಾಮೂಹಿಕ ವಿವಾಹ ನೋಂದಣಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಉಚಿತ ವಿವಾಹಕ್ಕೆ 43 ಅರ್ಜಿಗಳು ಅರ್ಹವಾಗಿದ್ದವು. ಆದರೆ ಕೊರೊನಾ ವೈರಸ್ ಸೋಂಕು ತೀವ್ರವಾಗಿರುವ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶದಂತೆ ಅವಕಾಶ ಕಲ್ಪಿಸಿರುವ ಗರಿಷ್ಠ ಮಿತಿಯನ್ನು ಮೀರಿ ಹೆಚ್ಚಿನ ಜನ ಸೇರುವ ಸಾಧ್ಯತೆಯಿದ್ದು, ಕೊರೊನಾ ನಿಯಾಮಾವಳಿ ಉಲ್ಲಂಘನೆಯಾಗುವುದರಿಂದ ಏ.29ರಂದು ನಿಗಧಿಯಾಗಿದ್ದ ಸಪ್ತಪದಿ ಸಾಮೂಹಿಕ ವಿವಾಹವನ್ನು ಮುಂದೂಡಿ, ಸೋಂಕು ನಿಯಂತ್ರಣಕ್ಕೆ ಬಂದ ನಂತರ ನಡೆಸಲು ಸೂಚನೆ ನೀಡಲಾಗಿದೆ.
Advertisement