ಕೊರೊನಾ ಲಾಕ್‍ಡೌನ್ ಇರುವುದರಿಂದ ಹೋಟೆಲ್‍ಗಳಿಗೆ ಹೋಗಿ ತಿನ್ನಲು ಸಾಧ್ಯವಿಲ್ಲ, ಪಾರ್ಸೆಲ್ ತರಿಸಬಹುದು ಆದರೆ ಹಣ ತುಂಬಾ ವ್ಯಹಿಸಬೇಕಾಗುತ್ತದೆ. ಹೀಗಾಗಿ ನೀವು ಮನೆಯಲ್ಲಿಯೇ ಮಂಗಳೂರು ಶೈಲಿಯ ಚಿಕನ್ ಸುಕ್ಕಾವನ್ನು ಮಾಡಿ ಸವಿಯ ಬಹುದಾಗಿದೆ.
Advertisement
ಬೇಕಾಗುವ ಸಾಮಾಗ್ರಿಗಳು:
* ಚಿಕನ್- 1 ಕೆ,ಜಿ
* ಈರುಳ್ಳಿ- 2
* ಏಲಕ್ಕಿ- 2 ಟೀ ಸ್ಪೂನ್
* ಅಡುಗೆ ಎಣ್ಣೆ -1 ಕಪ್
* ತೆಂಗಿನ ಕಾಯಿ ತುರಿ- 1/2 ಕಪ್
* ಕೊತ್ತಂಬರಿಕಾಳು – 1 ಟೀ ಸ್ಪೂನ್
* ಸಾಸಿವೆ -1/4 ಟೀ ಸ್ಪೂನ್
* ಕಾಳು ಮೆಣಸು- 1/4 ಟೀ ಸ್ಪೂನ್
* ಲವಂಗ-4
* ಜೀರಿಗೆ- 1 ಟೀ ಸ್ಪೂನ್
* ಒಣಮೆಣಸಿನಕಾಯಿ- 1/4
* ಅರಿಶಿಣ – 1ಟೀ ಸ್ಪೂನ್
* ಬೆಳ್ಳುಳ್ಳಿ – 1
* ಶುಂಠಿ- ಚಿಕ್ಕ ತುಂಡು
* ಉಪ್ಪು- ರುಚಿಗೆತಕ್ಕಷ್ಟು
* ಹುಣಸೆಹಣ್ಣು – ಸ್ವಲ್ಪ
Advertisement
Advertisement
ಮಾಡುವ ವಿಧಾನ:
Advertisement
* ಮೊದಲಿಗೆ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಸು ಎಣ್ಣೆ ಹಾಕಿ ಕೊತ್ತಂಬರಿಕಾಳು, ಜೀರಿಗೆ , ಸಾಸಿವೆ, ಕಾಳುಮೆಣಸು, ಲವಂಗ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಹಾಕಿ ಪರಿಮಳ ಬರುವವರೆಗೆ ಹುರಿದುಕೊಳ್ಳಬೇಕು. ಇದನ್ನೂ ಓದಿ: ಘಮ ಘಮಿಸುವ ಮಸಾಲ ಚಿಕನ್ ಫ್ರೈ
* ಹುರಿದು ಮಸಾಲೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಚಿಟಿಕೆ ಅರಿಶಿಣ, ಹುಣಸೆಹಣ್ಣು, ತೆಂಗಿನತುರಿ ಹಾಗೂ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.
* ಅಗಲವಾದ ಪಾತ್ರೆ ಇಟ್ಟುಕೊಂಡು ಅದಕ್ಕೆ ಎಣ್ಣೆ ಹಾಕಿ ನಂತರ ಸಾಸಿವೆ, ಇರುಳ್ಳಿ, ಏಲಕ್ಕಿ ಹಾಕಿ ಚೆನ್ನಾಗಿ ಪ್ರೈ ಮಾಡಬೇಕು.
* ಚಿಕನ್ ಸೇರಿಸಿ ನಂತರ ಉಪ್ಪು ಸೇರಿಸಿ ಬೇಯಲು ಬಿಡಬೇಕು. ಚಿಕನ್ ನೀರು ಬಿಟ್ಟುಕೊಳ್ಳುತ್ತಿದ್ದಂತೆ ರುಬ್ಬಿಕೊಂಡ ಮಸಾಲೆ ಸೇರಿಸಿ ರುಚುಗೆ ತಕ್ಕಷ್ಟು ಉಪ್ಪು ಸೇರಿಸಿದರೆ ರುಚಿಕರವಾದ ಚಿಕನ್ ಸುಕ್ಕಾ ಸವಿಯಲು ಸಿದ್ಧವಾಗುತ್ತದೆ.