ಅಥೆನ್ಸ್: ಗ್ರೀಸ್‍ನಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಬುಧವಾರ ತಿಳಿಸಿದೆ.
ಸುಮಾರು 6.9 ಮತ್ತು 5.9ರಷ್ಟು ಭೂಕಂಪದ ತೀವ್ರತೆ ವರದಿಯಾಗಿದೆ. ಕೇಂದ್ರ ಗ್ರೀಸ್ ಎಲಾಸೊನಾ ಪಟ್ಟಣದಿಂದ ದಕ್ಷಿಣಕ್ಕೆ 20 ಕಿ.ಮೀ ದೂರದಲ್ಲಿ, 10 ಕಿ.ಮೀ ಆಳದಲ್ಲಿ ಇದರ ಕೇಂದ್ರ ಬಿಂದು ಪತ್ತೆಯಾಗಿದೆ.
ನನ್ನ ಸಹೋದ್ಯೋಗಿಗಳಿಗೆ ಭೂಕಂಪದ ಅನುಭವ ಮತ್ತು ಅದರ ತೀವ್ರತೆಯ ಅನುಭವವಾಗಿದೆ ಎಂದು ಅಥೆನ್ಸ್‍ನ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗ್ರೀಸ್‍ನ ಹಲವು ಭಾಗದಲ್ಲಿ ಭೂಮಿ ಕಂಪಿಸಿದೆ ಗ್ರೀಕ್ ಭೂಕಂಪ ಶಾಸ್ತ್ರಜ್ಞ ವಾಸಿಲಿಸ್ ಕರಥಾನಸಿಸ್ ತಿಳಿಸಿದ್ದಾರೆ.