– ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆ
– ರಾಜ್ಯಕ್ಕೆ ಕಂಟಕವಾದ ಮಹಾರಾಷ್ಟ್ರ
ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದ್ದು, ಇಷ್ಟು ದಿನ ಗ್ರೀನ್‍ಝೋನ್‍ನಲ್ಲಿದ್ದ ರಾಮನಗರಕ್ಕೂ ಕೊರೊನಾ ವ್ಯಾಪಿಸಿದೆ. ಇಂದು ರಾಜ್ಯದಲ್ಲಿ 69 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ.
ಗ್ರೀನ್ ಝೋನ್‍ನಲ್ಲಿದ್ದ ರಾಮನಗರಕ್ಕೂ ಕೊರೊನಾ ಮಹಾಮಾರಿ ಎಂಟ್ರಿ ಕೊಟ್ಟಿದೆ. ತಮಿಳುನಾಡಿನಿಂದ ವಾಪಸ್ ಬಂದಿದ್ದ ಮಗುವಿಗೆ ಕೊರೊನಾ ದೃಢವಾಗಿದೆ. 69 ಸೋಂಕಿತರಲ್ಲಿ 55 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದಿರುವವರಿಗೆ ಕೊರೊನಾ ಬಂದಿದೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಯಾದಗಿರಿ 15, ಉಡುಪಿ 16, ಕಲಬುರಗಿ 14, ಬೆಂಗಳೂರು 6, ವಿಜಯಪುರ 1, ಬೀದರ್ 1, ಧಾರವಾಡ 3, ಬಳ್ಳಾರಿ 3, ತುಮಕೂರು 1, ಮಂಡ್ಯ 2, ಕೋಲಾರ 2, ದಕ್ಷಿಣ ಕನ್ನಡ 3, ಬೆಳಗಾವಿ 1 ಮತ್ತು ರಾಮನಗರ 1 ಪ್ರಕರಣಗಳು ಬೆಳಕಿಗೆ ಬಂದಿವೆ.
Advertisement
ದಕ್ಷಿಣ ಕನ್ನಡದಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ 44 ಮಂದಿ ಬಲಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರಿನ 40 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಮೃತ ವ್ಯಕ್ತಿ ವೇಣೂರಿನಲ್ಲಿ ಸಿಮೆಂಟ್ ಅಂಗಡಿಯ ಗೂಡ್ಸ್ ರಿಕ್ಷಾ ಚಾಲಕನಾಗಿದ್ದರು. ಹೃದಯ ಕಾಯಿಲೆ ಸಂಬಂಧಿಸಿದಂತೆ ಚಿಕಿತ್ಸೆಗೆ ಎಂದು ವ್ಯಕ್ತಿ ಭಾನುವಾರ ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದರು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Advertisement
ಮೃತಪಟ್ಟ ಬಳಿಕ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಈ ವೇಳೆ ಕೊರೊನಾ ಪಾಸಿಟಿವ್ ಬಂದಿದೆ. ಮೃತ ವ್ಯಕ್ತಿ ಇಡೀ ವೇಣೂರಿನ ತುಂಬೆಲ್ಲಾ ಓಡಾಡಿದ್ದರು. ಹೀಗಾಗಿ ನೂರಾರು ಮಂದಿಯ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಮೇ 20ರಂದು ಮುಂಬೈನಿಂದ ಆಗಮಿಸಿದ್ದ 58 ವರ್ಷದ ವ್ಯಕ್ತಿಯನ್ನು ಮೂಡಬಿದ್ರೆಯ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕೊರೊನಾ ಭಯ ಮತ್ತು ಭವಿಷ್ಯದ ಚಿಂತೆಯಿಂದಾಗಿ ವ್ಯಕ್ತಿ ಕ್ವಾರಂಟೈನ್ ಕೇಂದ್ರದಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಸೋಂಕಿತರ ವಿವರ:
1. ರೋಗಿ- 2090: ಬೆಂಗಳೂರಿನ 30 ವರ್ಷದ ಯುವತಿ -ಕಂಟೈನ್ಮೆಂಟ್ ಝೋನ್ ಸಂಪರ್ಕ
2. ರೋಗಿ- 2091: ಉಡುಪಿಯ 09 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
3. ರೋಗಿ- 2092: ಉಡುಪಿಯ 34 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
4. ರೋಗಿ- 2093: ಬೆಂಗಳೂರಿನ 20 ವರ್ಷದ ಯುವತಿ- ರೋಗಿ 1930ರ ಸಂಪರ್ಕ
5. ರೋಗಿ- 2094: ಬೆಂಗಳೂರಿನ 27 ವರ್ಷದ ಯುವಕ- ರೋಗಿ 1930ರ ಸಂಪರ್ಕ
6. ರೋಗಿ- 2095: ಬೆಂಗಳೂರಿನ 54 ವರ್ಷದ ಮಹಿಳೆ- ರೋಗಿ 1930ರ ಸಂಪರ್ಕ
7. ರೋಗಿ- 2096: ಉಡುಪಿಯ 3 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
8. ರೋಗಿ- 2097: ಉಡುಪಿಯ 30 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
9. ರೋಗಿ- 2098: ಉಡುಪಿಯ 5 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
10. ರೋಗಿ- 2099: ಉಡುಪಿಯ 4 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
11. ರೋಗಿ- 2100: ಮಂಡ್ಯದ 65 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
12. ರೋಗಿ- 2101: ಬೆಳಗಾವಿಯ 10 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
13. ರೋಗಿ- 2102; ಉಡುಪಿಯ 43 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
14. ರೋಗಿ- 2103: ಉಡುಪಿಯ 6 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
15. ರೋಗಿ- 2104: ಉಡುಪಿಯ 72 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್
16. ರೋಗಿ- 2105: ಉಡುಪಿಯ 9 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
17. ರೋಗಿ- 2106: ಉಡುಪಿಯ 33 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
18. ರೋಗಿ- 2107: ಉಡುಪಿಯ 11 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
19. ರೋಗಿ- 2108: ಉಡುಪಿಯ 6 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
20. ರೋಗಿ- 2109: ಉಡುಪಿಯ 67 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್
21. ರೋಗಿ- 2110: ದಕ್ಷಿಣ ಕನ್ನಡದ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
22. ರೋಗಿ- 2111: ದಕ್ಷಿಣ ಕನ್ನಡದ 25 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
23. ರೋಗಿ- 2112: ದಕ್ಷಿಣ ಕನ್ನಡದ 55 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
24. ರೋಗಿ- 2113: ಯಾದಗಿರಿಯ 3 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
25. ರೋಗಿ- 2114: ಯಾದಗಿರಿಯ 33 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
26. ರೋಗಿ- 2115: ಯಾದಗಿರಿಯ 25 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
27. ರೋಗಿ- 2116: ಯಾದಗಿರಿಯ 17 ವರ್ಷದ ಹುಡುಗಿ- ಮಹಾರಾಷ್ಟ್ರದಿಂದ ವಾಪಸ್
28. ರೋಗಿ- 2117: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
29. ರೋಗಿ- 2118: ಯಾದಗಿರಿಯ 5 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
30. ರೋಗಿ- 2119: ಬೀದರ್ ನ 40 ವರ್ಷದ ವ್ಯಕ್ತಿ- ಮಸ್ಕತ್ ಗೆ ಪ್ರಯಾಣ
31. ರೋಗಿ- 2120: ಯಾದಗಿರಿಯ 20 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
32. ರೋಗಿ- 2121; ಯಾದಗಿರಿಯ 3 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
33. ರೋಗಿ- 2122: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
34. ರೋಗಿ- 2123: ಯಾದಗಿರಿಯ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
35. ರೋಗಿ- 2124: ಯಾದಗಿರಿಯ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
36. ರೋಗಿ- 2125: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
37. ರೋಗಿ- 2126: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
38. ರೋಗಿ- 2127: ಯಾದಗಿರಿಯ 20 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
39. ರೋಗಿ- 2128: ಯಾದಗಿರಿಯ 22 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
40. ರೋಗಿ- 2129: ಕೋಲಾರದ 48 ವರ್ಷದ ವ್ಯಕ್ತಿ- ತಮಿಳುನಾಡಿಗೆ ಭೇಟಿ
ಬೆಳಗಿನ ಪತ್ರಿಕಾ ಪ್ರಕಟಣೆ 25/05/2020.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept pic.twitter.com/i23cF05bAO
— K'taka Health Dept (@DHFWKA) May 25, 2020
41. ರೋಗಿ-2130. ಬೆಂಗಳೂರಿನ 53 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
42. ರೋಗಿ-2131. ಬೆಂಗಳೂರಿನ 25 ವರ್ಷದ ಯುವಕ. ಅಂತರಾಷ್ಟ್ರಿಯ ಪ್ರಯಾಣದ ಹಿನ್ನೆಲೆ
43. ರೋಗಿ-2132. ಉಡುಪಿಯ 47 ವರ್ಷದ ಮಹಿಳೆ. ಅಂತರಾಷ್ಟ್ರಿಯ ಪ್ರಯಾಣದ ಹಿನ್ನೆಲೆ
44. ರೋಗಿ-2133. ಉಡುಪಿಯ 21 ವರ್ಷದ ಯುವತಿ. ಅಂತರಾಷ್ಟ್ರಿಯ ಪ್ರಯಾಣದ ಹಿನ್ನೆಲೆ
45. ರೋಗಿ-2134. ರಾಮನಗರದ 02 ವರ್ಷದ ಗಂಡು ಮಗು. ತಮಿಳನಾಡು ಪ್ರಯಾಣದ ಹಿನ್ನೆಲೆ
46. ರೋಗಿ-2135. ತುಮಕೂರಿನ 34 ವರ್ಷದ ಯುವಕ. ಸಂಪರ್ಕ ಪತ್ತೆಹಚ್ಚಲಾಗುತ್ತಿದೆ
47. ರೋಗಿ-2136. ವಿಜಯಪುರದ 28 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
48. ರೋಗಿ-2137. ಕೋಲಾರದ 60 ವರ್ಷದ ವೃದ್ಧ. ರೋಗಿ-1963ರ ಸಂಪರ್ಕ
49. ರೋಗಿ-2138. ಮಂಡ್ಯದ 14 ವರ್ಷದ ಬಾಲಕ. ರೋಗಿ-869ರ ಸಂಪರ್ಕ
50. ರೋಗಿ-2139. ಕಲಬುರಗಿಯ 42 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
51. ರೋಗಿ-2140. ಕಲಬುರಗಿಯ 18 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
52. ರೋಗಿ-2141. ಕಲಬುರಗಿಯ 30 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
53. ರೋಗಿ-2142. ಕಲಬುರಗಿಯ 10 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
54. ರೋಗಿ-2143. ಕಲಬುಗಿಯ 55 ವರ್ಷದ ವೃದ್ಧೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
55. ರೋಗಿ-2144. ಕಲಬುರಿಗಿಯ 45 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
56. ರೋಗಿ-2145. ಕಲಬುರಗಿಯ 18 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
57. ರೋಗಿ-2146. ಕಲಬುರಗಿಯ 40 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
58. ರೋಗಿ-2147. ಕಲಬುರಗಿಯ 15 ವರ್ಷದ ಬಾಲಕಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
59. ರೋಗಿ-2148. ಕಲಬುರಗಿಯ 26 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
60. ರೋಗಿ-2149. ಕಲಬುರಗಿಯ 29 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
61. ರೋಗಿ-2150. ಕಲಬುರಗಿಯ 68 ವರ್ಷದ ವದ್ಧ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
62. ರೋಗಿ-2151. ಕಲಬುರಗಿಯ 35 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
63. ರೋಗಿ-2152. ಕಲಬುರಗಿಯ 29 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
64. ರೋಗಿ-2153. ಕಲಬುರಗಿಯ 40 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
65. ರೋಗಿ-2154. ಕಲಬುರಗಿಯ 48 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
66. ರೋಗಿ-2155. ಕಲಬುರಗಿಯ 23 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
67 ರೋಗಿ-2156. ಧಾರವಾಡದ 33 ವರ್ಷದ ಮಹಿಳೆ. ರೋಗಿ-1942, 1943, 1944 ಮತ್ತು 1945ರ ಸಂಪರ್ಕ
68 ರೋಗಿ-2157. ಧಾರವಾಡದ 17 ವರ್ಷದ ಬಾಲಕ. ರೋಗಿ-1942, 1943, 1944 ಮತ್ತು 1945ರ ಸಂಪರ್ಕ
69 ರೋಗಿ-2158. ಧಾರವಾಡದ 2 ವರ್ಷದ ಗಂಡು ಮಗು. ರೋಗಿ-1942, 1943, 1944 ಮತ್ತು 1945ರ ಸಂಪರ್ಕ