ಮಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದು ಆಭರಣ ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಜ್ಯುವೆಲ್ಲರಿ ಮಾಲೀಕ ಹಾಗೂ ಸಾರ್ವಜನಿಕರು ಹಿಡಿದಿರುವ ಘಟನೆ ನಡೆದಿದೆ.
ನಗರದ ಕಾರ್ ಸ್ಟ್ರೀಟ್ ನಲ್ಲಿ ಘಟನೆ ನಡೆದಿದ್ದು, ಕಾರ್ ಸ್ಟ್ರೀಟ್ ನ ಅರುಣ್ ಜ್ಯುವೆಲರಿಗೆ ಆಭರಣ ಖರೀದಿಸಲು ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳ, ಚಿನ್ನದ ಉಂಗುರ ಕದ್ದು ಪರಾರಿಯಾಗುತ್ತಿದ್ದ. ಆಭರಣಗಳನ್ನು ನೋಡುತ್ತಲೇ ಕೈ ಬೆರಳಿಗೆ ಉಂಗುರ ಹಾಕಿಕೊಂಡು ಮಾತನಾಡುತ್ತಿದ್ದ. ಬಳಿಕ ಚಿನ್ನದ ಉಂಗುರದೊಂದಿಗೆ ಅಂಗಡಿಯಿಂದ ಹೊರಗೆ ಓಡಿದ್ದಾನೆ.
ತಕ್ಷಣ ಕಾರ್ಯಪವೃತ್ತರಾದ ಅಂಗಡಿ ಮಾಲೀಕ ಅರುಣ್ ಶೇಠ್ ಕಳ್ಳನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದಿದ್ದಾರೆ. ಈ ವೇಳೆ ಸಾರ್ವಜನಿಕರೂ ಸಹಾಯ ಮಾಡಿದ್ದು, ಕಳ್ಳನನ್ನು ಹಿಡಿದು ಬಂದರು ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಜ್ಯುವೆಲರಿ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.