– ಹಳ್ಳಿ ಮಟ್ಟದಲ್ಲೂ ಆಪರೇಷನ್ ಕಮಲ?
ಬೆಂಗಳೂರು: ಹಳ್ಳಿ ಫೈಟ್‍ನಲ್ಲಿ ನಿರೀಕ್ಷೆಯಂತೆಯೇ ಆಡಳಿತಾರೂಢ ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಸದ್ಯದ ಟ್ರೆಂಡ್ ಗಮನಿಸಿದರೆ ಅರ್ಧಕ್ಕಿಂತ ಹೆಚ್ಚು ಗ್ರಾಮಪಂಚಾಯ್ತಿಗಳಲ್ಲಿ ಅಧಿಕಾರಕ್ಕೆ ಏರುವುದು ಖಚಿತವಾಗಿದೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕೂಡ ಹಲವೆಡೆ ಗೆದ್ದು ಬೀಗಿದ್ದಾರೆ. ಬ್ಯಾಲೆಟ್ ಪೇಪರ್ ಕಾರಣ ಮತ ಎಣಿಕೆ ಕಾರ್ಯದಲ್ಲಿ ವಿಳಂಬ ಆಗಿದ್ದು, ಇನ್ನೂ ಬಹುತೇಕ ಕಡೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
Advertisement
Of 82616 wards in GP elections on Karnataka , @BJP4Karnataka is ahead with victory in 5344 wards ( 48% ) as of now . Great going …. Congratulations @BSYBJP @nalinkateel
— B L Santhosh (@blsanthosh) December 30, 2020
Advertisement
ಪಕ್ಷದ ಸಾಧನೆ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಸಂತಸ ವ್ಯಕ್ತಪಡಿಸಿದ್ದಾರೆ. ಸಚಿವ ಅಶೋಕ್ ಎಲ್ಲಾ ಕಡೆ ಬಿಜೆಪಿ ಶಕ್ತಿ ಎದ್ದು ಕಾಣ್ತಿದೆ ಎಂದಿದ್ದಾರೆ. ಸಿದ್ದರಾಮಯ್ಯ ಮಾತ್ರ ಮತದಾರರ ವಿಶ್ವಾಸ ಗೆಲ್ಲಲಾಗದ ಬಿಜೆಪಿ ಹಲವೆಡೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.
Advertisement
ಈ ಹೊತ್ತಿನಲ್ಲಿ ನಮ್ಮ ಮುಂದಿರುವ ಗ್ರಾಮ ಪಂಚಾಯತ್ ಫಲಿತಾಂಶವನ್ನು ನೋಡುವಾಗ ಮತದಾರ ಬಂಧುಗಳು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿರುವುದು ಸ್ಪಷ್ಟ. ಗ್ರಾಮದ ವಿಕಾಸಕ್ಕೆ @BJP4Karnataka ಬೆಂಬಲಿತ ಅಭ್ಯರ್ಥಿಗಳೇ ಸೂಕ್ತ ಎಂದು ಜನರು ನಿರ್ಧರಿಸಿದ್ದಾರೆ.
— Nalinkumar Kateel (@nalinkateel) December 30, 2020
Advertisement
ಮತ ಎಣಿಕೆ ಕೇಂದ್ರಗಳ ಬಳಿ ಕೋವಿಡ್ ನಿಯಮಗಳ ಉಲ್ಲಂಘನೆ ರಾಜಾರೋಷವಾಗಿ ನಡೆಯಿತು. ನಂಜನಗೂಡು ಮತ ಎಣಿಕೆ ಕೇಂದ್ರದಲ್ಲಿ ಜನರನ್ನು ನಿಯಂತ್ರಿಸಲಾಗದೇ ಪೊಲೀಸರು ಪರದಾಡಿದರು. ಬಳ್ಳಾರಿಯ ಹೊಸಪೇಟೆಯಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಬ್ಯಾರಿಕೇಡ್ ದಾಟಿ ಬಂದಿದ್ದ ವ್ಯಕ್ತಿಗೆ ಹೊಸಪೇಟೆಯ ಡಿವೈಎಸ್‍ಪಿ ರಘುಕುಮಾರ್ ಕಪಾಳಮೋಕ್ಷ ಮಾಡಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮುನ್ನಡೆ. #PanchayatToParliamentBJP pic.twitter.com/Hfe4JkkbUM
— BJP Karnataka (@BJP4Karnataka) December 30, 2020
ಮಂಡ್ಯದ ಜಕ್ಕನಹಳ್ಳಿಯಲ್ಲಿ ಚುನಾಣೋತ್ತರ ಘರ್ಷಣೆ ಸಂಭವಿಸಿದೆ. ಮಾಜಿ ಸಚಿವ ಪುಟ್ಟರಾಜು ಬೆಂಬಲಿಗರು ಮತ್ತು ರೈತ ಸಂಘದ ಕಾರ್ಯಕರ್ತರು ದೊಣ್ಣೆ ಹಿಡಿದು ಬಡಿದಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಎರಡೂ ಕಡೆಯವರಗೂ ಗಾಯಗಳಾಗಿವೆ.
ನಮ್ಮ@KPCCKarnatakaಕ್ಕೆ ಇದು ಸತ್ವ ಪರೀಕ್ಷೆಯ ಕಾಲ.
ಮತದಾರರ ವಿಶ್ವಾಸವನ್ನು ಗೆಲ್ಲಲಾಗದ @BJP4Karnataka ಹಲವಾರು ಕಡೆಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ ಮತ್ತು ಬೆದರಿಕೆ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ದೂರುಗಳಿವೆ.
ಇಂತಹ ಕೃತ್ಯಗಳು ಖಂಡನೀಯ.#GramPanchayat
3/3
— Siddaramaiah (@siddaramaiah) December 30, 2020
ಗ್ರಾಮ ಸಮರ ಫಲಿತಾಂಶ
* ಒಟ್ಟು ಗ್ರಾಮ ಪಂಚಾಯತ್ – 5,728
* ಒಟ್ಟು ಗ್ರಾ.ಪಂ ಸ್ಥಾನಗಳು – 82,616
* ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು – 13,107 ಗೆಲುವು
* ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು – 9,998 ಗೆಲುವು
* ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು – 4,458 ಗೆಲುವು
* ಇತರರು – 3,836
ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದ ದಿನದಿಂದ ಗ್ರಾಮೀಣ ಪ್ರದೇಶದ ಮತದಾರರು ಎಂದೂ @INCIndia ಕೈಬಿಟ್ಟಿಲ್ಲ.
ರೈತಪರ,ಬಡವರ ಪರ ಮತ್ತು ಗ್ರಾಮಭಾರತದ ಪರವಾಗಿರುವ ಕಾಂಗ್ರೆಸ್ ನೀತಿ ಮತ್ತು ಕಾರ್ಯಕ್ರಮಗಳು
ಇದಕ್ಕೆ ಕಾರಣ.
ಗೆಲುವಿನ ಪರಂಪರೆ ಈ ಬಾರಿಯೂ ಮುಂದುವರಿಯಲಿದೆ.#GramPanchayat
2/3
— Siddaramaiah (@siddaramaiah) December 30, 2020