– 12 ಯುವಕರು ಕ್ಯಾಂಟಿನ್‍ಗೆ ನುಗ್ಗಿ ಗಲಾಟೆ
ಮಡಿಕೇರಿ: ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆಂದು, ಯುವಕರ ಗುಂಪೊಂದು ಕ್ಯಾಂಟೀನ್‍ಗೆ ನುಗ್ಗಿ ದಾಂಧಲೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲಿ ನಡೆದಿದೆ.
ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದರೂ ವೈಷಮ್ಯ ಮುಂದುವರಿದಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ 12 ಯುವಕರು ಸೇರಿ ಕ್ಯಾಂಟೀನ್‍ಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಕ್ಯಾಂಟೀನ್ ಮಾಲೀಕ ಅಸ್ಕರ್ ಅಲಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಜನವರಿ 3 ರಂದು ಕೊಡಗು ಜಿಲ್ಲೆ ಕುಶಾಲನಗರ ಸಮೀಪದ, ಬೈಲುಕುಪ್ಪೆಯ ಕ್ಯಾಂಟೀನ್‍ಗೆ ಏಕಾಏಕಿ ಬಂದು ನುಗ್ಗಿದ 12 ಜನ ಯುವಕರ ಗುಂಪು, ಗಲಾಟೆ ಮಾಡಿದೆ. ಈ ವೇಳೆ ಕ್ಯಾಂಟೀನ್ ಮಾಲೀಕ ಅಸ್ಕರ್ ಅಲಿ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ.
ಈ ಗಲಾಟೆಯಲ್ಲಿ ಕ್ಯಾಂಟೀನ್‍ನಲ್ಲಿ ಟೀ ಕಡಿಯುತ್ತಿದ್ದ ಗ್ರಾಹಕನ ತಲೆಗೂ ಗಂಭೀರ ಗಾಯಗಳಾಗಿವೆ. ಬಳಿಕ ಕಿಡಿಗೇಡಿಗಳು ರಸ್ತೆಗೆ ಬಡಿಗೆಗಳಿಂದ ಹೊಡೆದು ಕ್ರೌರ್ಯ ಮೆರೆದಿದ್ದಾರೆ. ಈ ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಲಾಟೆಗೆ ಸಹಕರಿಸಿದ ಇಬ್ಬರ ಬಂಧಿಸಲಾಗಿದೆ.