ಬೆಂಗಳೂರು: ಕೋವಿಡ್ ಕಾಲದಲ್ಲಿ ಹತ್ತು ಹಲವು ಕಾರಣಗಳಿಂದ ಗ್ರಾಮೀಣ ಭಾಗದ ಎಸ್‍ಎಸ್‍ಎಲ್‍ಸಿ ಮಕ್ಕಳು ಆನ್‍ಲೈನ್ ಪಾಠಗಳಿಂದ ವಂಚಿತರಾಗುತ್ತಿದ್ದಾರೆ. ಈ ವಿಚಾರವನ್ನು ಗಮನಿಸಿದ ನಿಮ್ಮ ಪಬ್ಲಿಕ್ ಟಿವಿ, ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ಮಹಾಯಜ್ಞವನ್ನು ಆರಂಭಿಸಿದೆ. ಎಸ್‍ಎಸ್‍ಎಲ್‍ಸಿ ಓದುತ್ತಿರುವ ಬಡ ಮಕ್ಕಳ ಪಾಲಿಗೆ ಜ್ಞಾನದೀವಿಗೆಯಾಗಲು ಮುಂದಾಗಿದೆ.
ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಲ್ಲಿರುವ ಪಬ್ಲಿಕ್ ಟಿವಿ ಮುಖ್ಯ ಕಚೇರಿಯಲ್ಲಿ `ಜ್ಞಾನ ದೀವಿಗೆ’ ಹೆಸರಿನ ಈ ಮಹಾ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಜ್ಞಾನದೀವಿಗೆಗೆ ಕೈಜೋಡಿಸಿದ ದಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement
1. ದಾನಿಗಳ ನೆರವಿನಿಂದ ಪ್ರತಿ ಇಬ್ಬರು ವಿದ್ಯಾರ್ಥಿಗಳಿಗೆ ಒಂದರಂತೆ ಎಸ್‍ಎಸ್‍ಎಲ್‍ಸಿ ಪಠ್ಯವುಳ್ಳ ಟ್ಯಾಬ್ ವಿತರಿಸುವ ಗುರಿ ಹೊಂದಿದೆ.
2. ರಾಜ್ಯದ ಎಲ್ಲಾ 30 ಜಿಲ್ಲೆಗಳ ಬಹುತೇಕ ಸರ್ಕಾರಿ ಪ್ರೌಢಶಾಲೆಗಳು ಈ ಅಭಿಯಾನದ ವ್ಯಾಪ್ತಿಗೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ.
Advertisement
Advertisement
3. ಪ್ರತಿ ಟ್ಯಾಬ್..,ಪರಿಣತ ಬೋಧಕರು ಸಿದ್ಧಪಡಿಸಿರುವ 10ನೇ ತರಗತಿಯ ರೆಡಿಮೇಡ್ ಡಿಜಿಟಲ್ ಪಾಠ ಒಳಗೊಂಡಿರುತ್ತದೆ. ಟ್ಯಾಬ್ ನಲ್ಲಿ ಸಮಾಜ, ವಿಜ್ಞಾನ, ಗಣಿತ ಹಾಗೂ ಇಂಗ್ಲೀಷ್ ವಿಷಯಗಳ ಸಿದ್ಧಪಾಠ ಇರುತ್ತದೆ. ಎಲ್ಲವೂ ಪ್ರೀ ಲೋಡೆಡ್ ಆಗಿರುತ್ತದೆ.
4. ಈ ಟ್ಯಾಬ್ ನಲ್ಲಿ ಸಿಮ್ ಇರುವುದಿಲ್ಲ ಹಾಗೂ ಆಪ್ ಲಾಕ್ ತಂತ್ರಜ್ಞಾನ ಹೊಂದಿದೆ. ಇದರಿಂದ ದುರುಪಯೋಗದ ಮಾತೇ ಉದ್ಭವಿಸುವುದಿಲ್ಲ. 10ನೇ ತರಗತಿಯ ಡಿಜಿಟಲ್ ಪಾಠ ಹೊರತುಪಡಿಸಿದರೆ ಇನ್ಯಾವುದೇ ಕಾರ್ಯಕ್ಕೂ ಇದು ಬಳಕೆಯಾಗುವುದಿಲ್ಲ.
Advertisement
ರೋಟರಿ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ನಡೆಸಿರುವ ಈ ಮ್ಯಾರಥಾನ್ ಅಭಿಯಾನದಲ್ಲಿ ನೀವು ಕೂಡ ಕೈಜೋಡಿಸಬಹುದು. ಮಕ್ಕಳ ಭವಿಷ್ಯ ಬೆಳಗಿಸುವ ಸಂಕಲ್ಪದೊಂದಿಗೆ ನಿಮ್ಮ ಕೈಲಾದಷ್ಟು ದೇಣಿಗೆ ನೀಡಬಬಹುದು. ಒಂದು ಟ್ಯಾಬ್ ದರ 3,495 ರೂಪಾಯಿ. ಬನ್ನಿ ಸಹಾಯ ಮಾಡೋಣ, ನೀವು ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ.
ದೇಣಿಗೆ ನೀಡ ಬಯಸುವ ಮಹಾದಾನಿಗಳಿಗಾಗಿ ಬ್ಯಾಂಕ್ ವಿವರ:
PUBLIC TV EDUCATIONAL & CHARITABLE TRUST
NAME OF THE BANK : AXIS BANK
ACCOUNT NO : 916010043440024
BRANCH : R T NAGAR BRANCH
IFSC CODE : UTIB0000363