ಯಾದಗಿರಿ: ನೀವೆಲ್ಲರೂ ಕೋವಿಡ್ ಲಸಿಕೆ ಪಡೆದು ಬಳಿಕ ಅದರ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಬೇಕು. ಈ ಕೆಲಸ ಮಾಡಿದರೆ ನಾನು ನಿಮಗೆ ಕ್ರಿಕೆಟ್ ಕಿಟ್ ನೀಡುತ್ತೆನೆಂದು ಯುವಕರಿಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದ್ದಾರೆ.
ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದು, ಜನರ ಮನವೊಲಿಸಲು ಶಾಸಕರು ವಿಶೇಷ ರೌಂಡ್ಸ್ ನಡೆಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಜಾಗೃತಿಗಾಗಿ ತೆರಳಿದ್ದರು.
ಈ ವೇಳೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರನ್ನು ಕಂಡು ಅವರ ಬಳಿಗೆ ತೆರಳಿದ ಶಾಸಕರು, ಈ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಇರಬೇಕು ಮೊದಲು ಆರೋಗ್ಯ ಮುಖ್ಯ ಅಂತ ಬುದ್ಧಿಮಾತು ಹೇಳಿದ್ದಾರೆ. ಇದನ್ನೂ ಓದಿ: ಮುಂಗಾರುಮಳೆ-2 ಚಿತ್ರದ ನಟಿಯ ತಂದೆ ಅರೆಸ್ಟ್..!
ಅದೇ ರೀತಿ ಮಾಸ್ಕ್ ಹಾಕದೇ ಕ್ರಿಕೆಟ್ ಆಡುತ್ತಿದ್ದವರಿಗೆ ಯುವಕರಿಗೆ ಮಾಸ್ಕ್ ನೀಡಿ, ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು. ನೀವು ನಿಮ್ಮ ಗ್ರಾಮಸ್ಥರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ರೆ ನಾನೇ ನಿಮಗೆ ಕ್ರಿಕೆಟ್ ಕಿಟ್ ನೀಡುತ್ತೆನೆಂದು ಯುವಕರಿಗೆ ಉತ್ಸಾಹ ತುಂಬಿದರು.