ಬೆಂಗಳೂರು: ಇಡೀ ಮಾನವ ಕುಲವೇ ತಲೆ ತಗ್ಗಿಸುವಂತೆ ಮಾಡಿದ್ದ ಬಾಂಗ್ಲಾ ಯುವತಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಟಿಕ್‍ಟಾಕ್ ಸ್ಟಾರ್ ಆಗಿದ್ದ ಬಗ್ಗೆ ತನಿಖೆಯಲ್ಲಿ ಬಯಲಾಗಿದೆ.
ಆರೋಪಿ ರಿದಾಯ್ ಬಾಬು ಬಾಂಗ್ಲಾದಲ್ಲಿ ಟಿಕ್‍ಟಾಕ್ ಸ್ಟಾರ್ ಆಗಿದ್ದ. ವೀಡಿಯೋ ನೋಡುವ ಹೆಣ್ಮಕ್ಕಳೇ ಇವನ ಟಾರ್ಗೆಟ್ ಆಗಿದ್ರು. ಈತ ಕೆಲಸ ಕೊಡಿಸುವುದಾಗಿ ಯುವತಿಯರನ್ನ ಕರೆ ತರುತ್ತಿದ್ದ. ಬಡ ಮಧ್ಯಮವರ್ಗದ ಸುಂದರ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಳ್ತಿದ್ದ. ಅಲ್ಲದೆ ಈತನ ವೀಡಿಯೋ ಮೆಚ್ಚಿ ಕಾಮೆಂಟ್ ಮಾಡಿದವರನ್ನೆ ಕ್ಯಾಚ್ ಹಾಕ್ತಿದ್ದ. ಯುವತಿಯ ಜೊತೆ ಚಾಟ್ ಮಾಡಿ ಸಲಿಗೆ ಬೆಳೆಸ್ತಿದ್ದನು. ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಬೆನ್ನು ಬಿದ್ದ ಪೊಲೀಸರು
ಯುವತಿಯರ ಆರ್ಥಿಕ ಪರಿಸ್ಥಿತಿ ಹಾಗೂ ಕುಟುಂಬದ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕ್ತಿದ್ದ. ನಂತರ ಬ್ಯೂಟಿಪಾರ್ಲರ್ ಗಳಲ್ಲಿ ಕೆಲಸ ಕೊಡಿಸ್ತೀನಿ ಅಂತ ಪುಂಗಿಬಿಡ್ತಿದ್ದ. ಮಧ್ಯವರ್ತಿಗಳ ಮೂಲಕ ಯುವತಿಯರನ್ನ ಭಾರತಕ್ಕೆ ಅಕ್ರಮವಾಗಿ ಕಳಿಸ್ತಿದ್ದ ರಿದಾಯ್, ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಿಗೆ ಯುವತಿಯರನ್ನ ಕರೆತಂದಿರುವ ಬಗ್ಗೆ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿದೆ.
ಯುವತಿಯರನ್ನ ಕರೆತಂದು ಮೊದಲಿಗೆ ಬ್ಯೂಟಿಪಾರ್ಲರ್ ನಲ್ಲಿ ಕೆಲಸ ಕೊಡಿಸ್ತಿದ್ದ. ಆ ಬಳಿಕ ಮಾಂಸದಂಧೆ ನಡೆಯುವ ಮಸಾಜ್ ಪಾರ್ಲರ್ ಗಳಿಗೆ ಯುವತಿಯರ ರವಾನೆ ಮಾಡ್ತಿದ್ದ. ಹಲವು ಸುಂದರ ಯುವತಿಯರ ಜೊತೆ ಪ್ರೀತಿ ಹೆಸರಲ್ಲಿ ಡೇಟಿಂಗ್ ಮಾಡಿ ದಂಧೆಗೆ ದೂಡಿರೋ ಬಗ್ಗೆ ಸಹ ಸಾಕ್ಷ್ಯ ಸಿಕ್ಕಿದೆ. ಇದನ್ನೂ ಓದಿ: ಗ್ಯಾಂಗ್ ರೇಪ್ ಪ್ರಕರಣ- ಮೂವರು ಆರೋಪಿಗಳು ಹದಿನಾಲ್ಕು ದಿನ ಪೊಲೀಸ್ ಕಸ್ಟಡಿಗೆ
ಯುವತಿಯ ಮೇಲೆ ದೌರ್ಜನ್ಯ ಗ್ಯಾಂಗ್ ರೇಪ್ ನಂತ್ರ ಆರೋಪಿಯನ್ನ ಅರೆಸ್ಟ್ ಮಾಡಿದ್ದ ರಾಮಮೂರ್ತಿನಗರ ಪೊಲೀಸ್ರು ಕಾಲಿಗೆ ಗುಂಡು ಹೊಡೆದಿದ್ರು. ಸದ್ಯ ಇಲ್ಲಿಯವರೆಗೆ ಪ್ರಕರಣದಲ್ಲಿ 10 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಅತ್ಯಾಚಾರ ಪ್ರಕರಣ- ಕಾಮುಕರ ಕಾಲಿಗೆ ಗುಂಡು ಹೊಡೆದ ಪೊಲೀಸರು