– ಇಂದು ನ್ಯಾಯಾಧೀಶರ ಎದುರು ಹಾಜರು ಸಾಧ್ಯತೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್‍ರೇಪ್ ನಡೆದೋಗಿದೆ. ಕೀಚಕರು ಯುವತಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಿದ್ದಾರೆ. ಈ ಕೃತ್ಯದ ಹಿಂದೆ ಹಣ, ದ್ವೇಷದ ವಾಸನೆ ಹೆಚ್ಚಾಗಿದೆ. ಗ್ಯಾಂಗ್‍ರೇಪ್ ದುರುಳರಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಬೆಂಗಳೂರಿನಲ್ಲಿ ಗ್ಯಾಂಗ್‍ರೇಪ್ ನಡೆದೋಗಿದೆ. ರಾಮಮೂರ್ತಿನಗರದ ಎನ್‍ಆರ್‍ಐ ಲೇಔಟ್‍ನಲ್ಲಿ ಹಣಕಾಸಿನ ವಿಚಾರ ಕೊನೆಗೆ ದ್ವೇಷಕ್ಕೆ ತಿರುಗಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ನಾಲ್ವರು ಯುವಕರು ಮತ್ತು ಇಬ್ಬರು ಯುವತಿಯರು ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿದ್ದಾರೆ. ನಂತರ ಅತ್ಯಾಚಾರ ಎಸಗಿದ್ದು, ಇದೆಲ್ಲವನ್ನು ವೀಡಿಯೋ ಮಾಡಿ ವೈರಲ್ ಮಾಡಿದ್ರು. ಇದೀಗ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ : ಬೆಂಗಳೂರು ಅತ್ಯಾಚಾರ ಪ್ರಕರಣ- ಕಾಮುಕರ ಕಾಲಿಗೆ ಗುಂಡು ಹೊಡೆದ ಪೊಲೀಸರು
ಬೆಂಗಳೂರಿನ ಮಾನ ಹರಾಜು ಹಾಕಿದ್ದ ಗ್ಯಾಂಗ್ ರೆಪಿಸ್ಟ್ ಗಳ ಕಾಲಿಗೆ ಪೊಲೀಸ್ರು ಗುಂಡು ಹೊಡೆದಿದ್ದಾರೆ. ಯುವತಿಯ ಮೇಲೆ ರಾಕ್ಷಸರಂತೆ ಎರಗಿದ್ದ ಕೀಚಕರನ್ನು ಕೃತ್ಯ ನಡೆದ ಬಿ.ಚನ್ನಸಂದ್ರ ಕನಕ ನಗರದ ಮನೆಗೆ ಕರೆದುಕೊಂಡು ಹೋಗಲಾಗ್ತಿತ್ತು. ಸ್ಥಳದ ಪಂಚನಾಮೆ ಮಾಡುತ್ತಿದ್ದಾಗ ಪ್ರಕರಣದ ಎ1 ಆರೋಪಿ ರಕಿಬುಲ್ಲಾ ಇಸ್ಲಾಂ ಸಾಗರ್ ಹಾಗೂ ಹೃದಯ್ ಬೊಬು ಎಸಿಪಿ ಸಕ್ರಿ ಹಾಗೂ ಪೇದೆ ರವಿ ಕುಮಾರ್ ಮೇಲೆ ಕಲ್ಲಿನಿಂದ ದಾಳಿ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಇದನ್ನೂ ಓದಿ: ವಿಕೃತಿ ಮೆರೆದ ಮರುದಿನವೇ ಪೊಲೀಸ್ ಠಾಣೆಗೆ ಹೋಗಿತ್ತು ಗ್ಯಾಂಗ್ ರೇಪ್ ಗ್ಯಾಂಗ್
ಎ3 ಆರೋಪಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಉಳಿದವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಗೃಹಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಇದೊಂದು ಅಮಾನುಷ ಕೃತ್ಯ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸ್ತೇವೆ ಅಂದಿದ್ದಾರೆ.
ಘಟನೆ ಬಳಿಕ ಸಂತ್ರಸ್ತೆ ಕೇರಳದ ಕ್ಯಾಲಿಕಟ್‍ಗೆ ಹೋಗಿದ್ರು. ಬಂಧಿತ ಆರೋಪಿಗಳಿಂದ ಸಂತ್ರಸ್ತೆಯ ಮಾಹಿತಿ ಪಡೆದು ಕೇರಳಕ್ಕೆ ಹೋಗಿದ್ದ ಒಂದು ಟೀಂ ಸಂತ್ರಸ್ತೆಯನ್ನ ಬೆಂಗಳೂರಿಗೆ ಕರೆ ತಂದಿದ್ದಾರೆ. ಆಕೆಯ ವಿಚಾರಣೆ ಬಳಿಕ ದುಷ್ಕೃತ್ಯದ ಬಗ್ಗೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬರೋ ಸಾಧ್ಯತೆ ಇದೆ.