– ಹೋಂ ಐಸೋಲೇಟ್ ಆಗಿರುವ ಡಿಸಿಎಂ
ಬಾಗಲಕೋಟೆ: ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಕೊರೊನಾದಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ತಮ್ಮೆಲ್ಲರ ಶುಭ ಹಾರೈಕೆ ಹಾಗೂ ಭಗವಂತನ ಕೃಪೆಯಿಂದ ನಾನೂ ಗುಣಮುಖವಾಗಿದ್ದೇನೆ. ನನಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಮಗಳ ರೂಪದಲ್ಲಿ ಹಾರೈಕೆ ಮಾಡಿದ ಸ್ಟಾಫ್ ನರ್ಸ್ ಗಳಿಗೆ ಅಭಾರಿಯಾಗಿದ್ದೇನೆ. ಶೀಘ್ರಗುಣಮುಖವಾಗುವಂತೆ ಶುಭ ಹಾರೈಸಿದ ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು.
1/2 pic.twitter.com/WJbaHXvb4X
— Govind M Karjol (@GovindKarjol) October 7, 2020
ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮೆಲ್ಲರ ಶುಭ ಹಾರೈಕೆ ಹಾಗೂ ಭಗವಂತನ ಕೃಪೆಯಿಂದ ನಾನು ಗುಣಮುಖವಾಗಿದ್ದೇನೆ. ನನಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಮಗಳ ರೂಪದಲ್ಲಿ ಆರೈಕೆ ಮಾಡಿದ ಸ್ಟಾಫ್ ನರ್ಸ್ ಗಳಿಗೆ ಅಭಾರಿಯಾಗಿದ್ದೇನೆ. ಶೀಘ್ರ ಗುಣಮುಖವಾಗುವಂತೆ ಶುಭ ಹಾರೈಸಿದ ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು. ವೈದ್ಯರ ಸಲಹೆಯ ಮೇರೆಗೆ ನಾನು ಹೋಮ್ ಕ್ವಾರಂಟೈನ್ ನಲ್ಲಿದ್ದು, ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ಎಂದಿನಂತೆ ನಿರ್ವಹಿಸುತ್ತಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ತಮ್ಮೆಲ್ಲರ ಶುಭ ಹಾರೈಕೆ ಹಾಗೂ ಭಗವಂತನ ಕೃಪೆಯಿಂದ ನಾನೂ ಗುಣಮುಖವಾಗಿದ್ದೇನೆ.
ವೈದ್ಯರ ಸಲಹೆಯ ಮೇರೆಗೆ ನಾನು ಹೋಂ ಕ್ವಾರಂಟೈನ್ ನಲ್ಲಿದ್ದು, ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ಎಂದಿನಂತೆ ನಿರ್ವಹಿಸುತ್ತಿದ್ದೇನೆ.
2/2 pic.twitter.com/3hBQZ7pnRe
— Govind M Karjol (@GovindKarjol) October 7, 2020
ಸೆಪ್ಟೆಂಬರ್ 22 ರಂದು ಕಾರಜೋಳ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಇದೀಗ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಹೋಂ ಐಸೋಲೇಟ್ ಆಗಿದ್ದಾರೆ. ಈ ಹಿನ್ನೆಲೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಚಿಕಿತ್ಸೆಯಿಂದಾಗಿ ಗುಣಮುಖರಾಗಿರುವುದಾ ತಿಳಿಸಿದ್ದಾರೆ. ಅಲ್ಲದೆ ಕಡತಗಳಿಗೆ ಸಹಿ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.