ಕಾರವಾರ: ಮಹದಾಯಿ ವಿಚಾರದಲ್ಲಿ ಡಬಲ್ ಗೇಮ್ ಆಡ್ತಿರುವ ಗೋವಾ ಈಗ ಅಲ್ಲಿನ ಕನ್ನಡಿಗರಿಗೆ ಕಿರುಕುಳ ನೀಡುತ್ತಿದೆ. ವಾಸ್ಕೋದಾ ಬೈನಾ ಬೀಚ್‍ನಲ್ಲಿ 40 ವರ್ಷಗಳಿಂದ ನೆಲೆ ಕಂಡುಕೊಂಡಿದ್ದ ನೂರಾರು ಕನ್ನಡಿಗರ ಬದುಕು ಮತ್ತೆ ಬೀದಿಗೆ ಬಿದ್ದಿದೆ.
ಕನ್ನಡಿಗರ ಮನೆ ನೆಲಸಮಗೊಳಿಸಲು ಸಿಎಂ ಮನೋಹರ್ ಪರಿಕ್ಕರ್ ಆದೇಶ ಕೊಟ್ಟಿದ್ದು, ಅಧಿಕಾರಿಗಳು ಈಗ 55 ಕನ್ನಡಿಗರ ಮನೆಯನ್ನ ಧ್ವಂಸ ಮಾಡಿದ್ದಾರೆ.
Advertisement
ಮನೆಯನ್ನ ನೆಲಸಮ ಮಾಡದಂತೆ ಕನ್ನಡಿಗರು ಕಣ್ಣೀರಿಟ್ಟು ಅಂಗಲಾಚಿದರೂ ಅಧಿಕಾರಿಗಳು ದಯೆ ತೋರಿಲ್ಲ. ಹೀಗಾಗಿ ಬೈನಾ ಬೀಚ್‍ನ ಕನ್ನಡಿಗರು ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ.
Advertisement
2004ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ 380, ನಂತರ 2014ರಲ್ಲಿ 75 ಮನೆ ಹಾಗೂ 2015ರಲ್ಲಿ 102 ಮನೆಗಳನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಗೋವಾ ಸಿಎಂಗೆ ಪತ್ರ ಬರಿಯುತ್ತೇನೆ ಅಂತ ಹೇಳಿದ್ದಾರೆ.
Advertisement
ಬೆಳಗಾವಿಯಲ್ಲಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದರು. ದೆಹಲಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪರಿಕ್ಕರ್ ಗೆ ಪತ್ರ ಬರೆಯುತ್ತೇನೆ ಎಂದರು.
Advertisement
ಒಟ್ಟಿನಲ್ಲಿ ರಾಜ್ಯದ ನಾಯಕರೆಲ್ಲಾ ಪತ್ರ, ಪತ್ರ ಅಂತಿದ್ದಾರೆ ವಿನಃ ಯಾರೂ ನೆರವಿಗೆ ಬರ್ತಿಲ್ಲ ಎಂದು ಗೋವಾ ಕನ್ನಡಿಗರು ಗೋಳಾಡುತ್ತಿದ್ದಾರೆ.