ಬೆಂಗಳೂರು: ಬ್ಯಾಂಕಿಂಗ್, ಸೆಕ್ಯುರಿಟೀಸ್ ಮತ್ತು ಹೂಡಿಕೆ ನಿರ್ವಹಣಾ ಸಂಸ್ಥೆ ಗೋಲ್ಡ್ ಮನ್ ಸ್ಯಾಕ್ಸ್ ನ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾಗಿ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆ ಮತ್ತು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 20 ಕೋಟಿ ರೂ. ಮೌಲ್ಯದ ವಿವಿಧ ವೈದ್ಯಕೀಯ ಸೌಕರ್ಯಗಳ ನೆರವು ನೀಡುವುದಾಗಿ ತಿಳಿಸಿದರು.
Advertisement
ಗೋಲ್ಡ್ ಮನ್ ಸ್ಯಾಕ್ಸ್ ವತಿಯಿಂದ ಬೆಂಗಳೂರಿನ 4 ಆಸ್ಪತ್ರೆಗಳಲ್ಲಿ ಒಟ್ಟು 250 ಆಧುನಿಕ ಸೌಕರ್ಯಗಳ ಹಾಸಿಗೆಗಳು, ಸೈಂಟ್ ಜಾನ್ಸ್ ಆಸ್ಪತ್ರೆಗೆ 50 ಐಟಿಯು ಹಾಸಿಗೆಗಳು, ಪ್ರಕ್ರಿಯಾ ಆಸ್ಪತ್ರೆಯಲ್ಲಿ 5 ಐಸಿಯು ಬೆಡ್ ಸೇರಿದಂತೆ ಕೋವಿಡ್ ಆರೈಕೆ ಕೇಂದ್ರಕ್ಕೆ 50 ಹಾಸಿಗೆಗಳು, ಹೆಚ್.ಎ.ಎಲ್ ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರದ ಕಾರ್ಯಗಳಿಗೆ ಪೂರಕವಾಗಿ 50 ಹಾಸಿಗೆಗಳು ಮತ್ತು ನಾರಾಯಣ ಹೆಲ್ತ್ ಆಸ್ಪತ್ರೆಗೆ 120 ಎಚ್‍ಡಿಯು ಹಾಸಿಗೆಗಳನ್ನು ನೀಡಲಾಗುತ್ತಿದೆ. ಸುಮಾರು 7 ಕೋಟಿ ರೂ. ವೆಚ್ಚದ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ರಾಜ್ಯಾದ್ಯಂತ ವಿತರಿಸುವುದಾಗಿ ಸಂಸ್ಥೆ ತಿಳಿಸಿದೆ.
Advertisement
Advertisement
ಗೋಲ್ಡ್ ಮನ್ ಸ್ಯಾಕ್ಸ್ ಸರ್ವೀಸಸ್ ಇಂಡಿಯಾದ ಮುಖ್ಯಸ್ಥ ಗುಂಜನ್ ಸಂತಾನಿ ಮತ್ತು ಮುಖ್ಯ ಆಡಳಿತಾಧಿಕಾರಿ ರವಿ ಕೃಷ್ಣನ್, ಮುಖ್ಯಮಂತ್ರಿಗಳ ಸಲಹೆಗಾರ ಪ್ರಶಾಂತ್ ಪ್ರಕಾಶ್ ಮತ್ತು ನೋಡಲ್ ಅಧಿಕಾರಿ ಮತ್ತು ಡಿಐಪಿಆರ್ ಆಯುಕ್ತ ಡಾ.ಪಿ.ಎಸ್. ಹರ್ಷ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.