ಬೆಂಗಳೂರು: ಮಧ್ಯರಾತ್ರಿ ಗಲಭೆ ನಿಯಂತ್ರಣಕ್ಕೆ ತರುವ ಸಲುವಾಗಿ ಪೊಲೀಸರು ನಡೆಸಿದ ಗೋಲಿಬಾರಿಗೆ ಮೂವರು ಬಲಿಯಾಗಿದ್ದಾರೆ. ಮೃತರನ್ನು ವಾಜಿದ್ ಖಾನ್, ಯಾಸೀನ್ ಖುರೇಷಿ ಮತ್ತು ಮೊಹ್ಮದ್ ಖಾನ್ ಎಂದು ಗುರುತಿಸಲಾಗಿದೆ.
ಮೃತರ ಕುಟುಂಬದವರು ಹೇಳುವ ಪ್ರಕಾರ, ಗಲಭೆಯಲ್ಲಿ ಪೊಲೀಸ್ ಗುಂಡಿಗೆ ಬಲಿಯಾದವರು ಅಮಾಯಕರು. ಎಸಿ ಫಿಟ್ಟಿಂಗ್ ಮಾಡ್ತಿದ್ದ ವಾಜೀದ್ ಖಾನ್, ಕೆಲಸ ಮುಗಿಸಿ ಮನೆಗೆ ಮರಳುವಾಗ ಪೊಲೀಸರು ಗುಂಡು ಹಾರಿಸಿದ್ದಾರೆ.
Advertisement
Advertisement
ಯಾಸಿನ್ ಪಾಶಾ ಮಟನ್ ಅಂಗಡಿ ಬಾಗಿಲು ಹಾಕಿಕೊಂಡು ಮರಳುವಾಗ ಪೊಲೀಸ್ ಗುಂಡಿಗೆ ಬಲಿ ಆಗಿದ್ದಾನೆ. ತಮ್ಮವರಿಗೂ ಗಲಭೆಗೂ ಸಂಬಂಧ ಇಲ್ಲ. ತಮ್ಮವರ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
Advertisement
ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಶವ ಹಸ್ತಾಂತರ ಮಾಡಲಾಯಿತು. ಬಿಗಿ ಭದ್ರತೆ ನಡುವೆ ನಂದಿದುರ್ಗ ಬಳಿಯ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಮಧ್ಯೆ, ಮೃತ ವಾಜಿದ್‍ಗೆ ಕೊರೋನಾ ಇದ್ದ ವಿಚಾರ ದೃಢವಾಗಿದ್ದು, ಆತನ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ.
Advertisement
ಯಾಸಿನ್ ಖುರೇಶಿ:
* ವಯಸ್ಸು – 19 ವರ್ಷ, ಡಿಜಿ ಹಳ್ಳಿ ನಿವಾಸಿ
* ಮಟನ್ ಅಂಗಡಿ ಮಾಲಿಕ
* ಗಲಭೆ ವೇಳೆ ಅಕ್ಕನ ಮನೆಗೆ ಊಟಕ್ಕೆ ಹೋಗ್ತಿದ್ದ ಎಂಬುದು ಕುಟುಂಬದವರ ಹೇಳಿಕೆ
* ಉದ್ರಿಕ್ತ ಗುಂಪಿನ ಮೇಲೆ ಗುಂಡು ಹಾರಿಸಿದಾಗ ಸಾವು
ವಾಜಿದ್ ಖಾನ್ :
* ವಯಸ್ಸು – 20 ವರ್ಷ, ಡಿಜಿ ಹಳ್ಳಿ ನಿವಾಸಿ
* ವೃತ್ತಿ – ಎಸಿ ರಿಪೇರಿ ಕೆಲಸ
* ಕುಟುಂಬದವರ ಪ್ರಕಾರ ಗಲಭೆ ವೇಳೆ ಶಿವಾಜಿನಗರದಿಂದ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದ
* ಗಲಭೆಕೋರರ ಮೇಲೆ ಗುಂಡು ಹಾರಿಸಿದಾಗ ಸಾವು
ಮೊಹ್ಮದ್ ಖಾನ್ :
* ವಯಸ್ಸು – 23 ವರ್ಷ, ಕೆಜಿ ಹಳ್ಳಿ ನಿವಾಸಿ
* ಪ್ಲಾಸ್ಟಿಕ್ ಆಯುವ ಕೆಲಸ ಮಾಡ್ತಿದ್ದ
* ಗಲಭೆ ವೇಳೆ ಕೆಜಿ ಹಳ್ಳಿ ಸ್ಟೇಷನ್ ಮುಂದಿದ್ದ