ಭೋಪಾಲ್: ಗೋಮೂತ್ರದ ಫಿನಾಯಿಲ್‌ನಿಂದ ಮಾತ್ರ ಸರ್ಕಾರಿ ಕಚೇರಿಗಳನ್ನು ಸ್ವಚ್ಛಗೊಳಿಸಬೇಕೆಂದು ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಮಧ್ಯಪ್ರದೇಶದ ಜನರಲ್ ಅಡ್‍ಮಿನಿಸ್ಟ್ರೇಶನ್ ಡಿಪಾರ್ಟ್‍ಮೆಂಟ್(ಜಿಎಡಿ)ಹೊರಡಿಸಿರುವ ಆದೇಶದ ಪ್ರಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವ ರಾಸಾಯನಿಕ ಮಿಶ್ರಿತ ಫಿನಾಯಿಲ್ ಬದಲು ಗೋಮೂತ್ರದಿಂದ ತಾಯಾರಿಸಿದ ಫಿನಾಯಿಲ್ ಬಳಕೆ ಮಾಡಬೇಕೆಂದು ತಿಳಿಸಿದೆ.
ನವೆಂಬರ್ ನಲ್ಲಿ ನಡೆದ ಕ್ಯಾಬಿನೆಟ್‍ನಲ್ಲಿ ಹಸುವಿನ ರಕ್ಷಣೆ ಮತ್ತು ಅದರ ಕುರಿತು ಪ್ರಚಾರಕ್ಕಾಗಿ ಈ ನಿರ್ಧಾರ ಮಾಡಲಾಗಿತ್ತು.
ಪಶುಸಂಗೋಪನಾ ಇಲಾಖೆ ಸಚಿವರಾಗಿರುವ ಪ್ರೇಮ್ ಸಿಂಗ್ ಪಟೇಲ್, ಮಧ್ಯಪ್ರದೇಶದಲ್ಲಿರುವ ಗೋವುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದಾಗಿ ಗೋಮೂತ್ರಗಳನ್ನು ಬಾಟಲ್‍ಗಳಲ್ಲಿ ಸಂಗ್ರಹ ಮಾಡಿ ಫ್ಯಾಕ್ಟರಿ ತೆರೆದು ಫಿನಾಯಿಲ್ ತಯಾರಿಸುವ ಪ್ರಮುಖ ಗುರಿ ಹೊಂದಿದ್ದೇವೆ ಎಂದು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಧ್ಯಪ್ರದೇಶ ಸರ್ಕಾರ ಕಳೆದ ವರ್ಷ 1,80,000 ಗೋವುಗಳಿಗೆ ಆಹಾರವನ್ನು ಒದಗಿಸುವ ಸಂಬಂಧ 11 ಕೋಟಿ ಸಾವಿರ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಅಲ್ಲದೇ ಪ್ರಥಮ ಹಸು ಅಭಯಾರಣ್ಯವನ್ನು 2017 ರಲ್ಲಿ ಮಧ್ಯಪ್ರದೇಶದ ಆಗರ್ ಮಾಲ್ವಾದಲ್ಲಿ ಸ್ಥಾಪಿಸಿದೆ.