ತಿರುವನಂತಪುರಂ: ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿರುವುದು ತಿಳಿದಿರುವ ವಿಚಾರ. ಶೀಘ್ರದಲ್ಲೇ ಈ ಜೋಡಿ ವಿವಾಹ ಸಹ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಈ ಜೋಡಿ ಒಟ್ಟಿಗೆ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ಕೇರಳದ ಅತೀ ದೊಡ್ಡ ಹಬ್ಬ ಓಣಂ. ಹೀಗಾಗಿ ಕೊರೊನಾ ನಡುವೆಯೂ ಪ್ರಪಂಚದಾದ್ಯಂತ ಮಲಯಾಳಿಗಳು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅದೇ ರೀತಿ ನಟಿ ನಯನತಾರಾ ತಮ್ಮ ಹುಟ್ಟೂರಿನಲ್ಲಿ ಓಣಂ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಗೆಳೆಯ ವಿಘ್ನೇಶ್ ಸಹ ಜೊತೆಯಲ್ಲಿ ಇದ್ದಿದ್ದು ಓಣಂ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ.
https://www.instagram.com/p/CEjZ16VB_q2/?igshid=3qzdep2f1uzt
ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ಜೊತೆ ತಮ್ಮ ಹುಟ್ಟೂರು ಕೊಚ್ಚಿಗೆ ಹೋಗಿದ್ದಾರೆ. ಅಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಹಬ್ಬದ ಜೊತೆಗೆ ಇಬ್ಬರು ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಪು ಧರಿಸಿರುವ ನಯನತಾರಾ ಮತ್ತು ವಿಘ್ನೇಶ್ ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರು ಇನ್‍ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಆ ಫೋಟೋಗಳಿಗೆ “ಖುಷಿಯಾಗಿರಲು ಕಾರಣಗಳನ್ನು ಕಂಡುಕೊಳ್ಳೋಣ. ಅವುಗಳನ್ನು ಎಲ್ಲರೊಂದಿಗೆ ಭರವಸೆಯಿಂದ ಹೆಚ್ಚಿಕೊಳ್ಳೋಣ. ಈ ಕೊರೊನಾ ಸಂದರ್ಭದಲ್ಲಿಯೂ ಮುಖದಲ್ಲಿ ಮಂದಹಾಸವನ್ನು ಆಹ್ವಾನಿಸುವ ಏಕೈಕ ಮಾರ್ಗವಾಗಿದೆ” ಎಂದು ವಿಘ್ನೇಶ್ ಬರೆದುಕೊಂಡಿದ್ದಾರೆ.
https://www.instagram.com/p/CEjRm3-Be7S/?igshid=13lry2wyew4uh
ಈ ಜೋಡಿಯ ಜೊತೆ ನಯನತಾರಾ ತಾಯಿ ಕೂಡ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಷನ್‍ಶಿಪ್‍ನಲ್ಲಿದ್ದು, ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವಾಗ ಮದುವೆಯಾಗುತ್ತದೆ ಎಂದು ಇಬ್ಬರೂ ಅಧಿಕೃತವಾಗಿ ಹೇಳಿಲ್ಲ.
https://www.instagram.com/p/CEjPqFDhqNn/?igshid=2hto1mjpkaey