ಗೆಳೆಯನ ಜೊತೆಗಿನ ಸುಂದರ ಕ್ಷಣವನ್ನು ಬಿಚ್ಚಿಟ್ಟ ರಿಷಿ

Public TV
3 Min Read
rishi 2

ಬೆಂಗಳೂರು: ಚಂದನವನದ ಉದಯೋನ್ಮುಖ ನಟ ಸಂಚಾರಿ ವಿಜಯ್ ನಿಧರಾಗಿದ್ದರೂ ಅವರ ನೆನಪುಗಳು ಮಾತ್ರ ಇನ್ನೂ ಮಾಸಿಲ್ಲ. ಸದ್ಯ ಸ್ಯಾಂಡಲ್‍ವುಡ್ ನಟ ರಿಷಿ ತಮ್ಮ ಗೆಳೆಯ ವಿಜಯ್ ಜೊತೆ ಕಳೆದ ಒಂದು ಸುಂದರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

rishi 1 medium

ಬಾಲ್ಯದಿಂದಲೂ ರಂಗಭೂಮಿ ಕುರಿತಾಗಿ ಅಪಾರ ಆಸಕ್ತಿ ಹೊಂದಿದ್ದ ವಿಜಯ್ ಕುಮಾರ್‍ರವರು 10 ವರ್ಷಗಳ ಕಾಲ ಸಂಚಾರಿ ಥಿಯೇಟರ್‍ನಲ್ಲಿ ನಾಟಕಗಳನ್ನು ಮಾಡಿದ್ದರು. ಈ ಸಮಯದಲ್ಲಿ ನಟ ರಿಷಿ ಕೂಡ ಸಂಚಾರಿ ಥಿಯೇಟರ್ ನಲ್ಲಿ ನಟನಾಭ್ಯಾಸ ಮಾಡುತ್ತಿದ್ದರು. ಹೀಗೆ ರಿಷಿ ಹಾಗೂ ವಿಜಯ್ ನಾಟಕವೊಂದರಲ್ಲಿ ಅಭಿನಯಿಸುತ್ತಿದ್ದ ವೇಳೆ ವೇದಿಕೆ ಮೇಲೆ ಸಂಚಾರಿ ವಿಜಯ್ ಡೈಲಾಂಗ್‍ವೊಂದನ್ನು ಮರೆತಾಗ ಅದನ್ನು ಎಷ್ಟು ಚಾಣಕ್ಷತನದಿಂದ ನಿಭಾಯಿಸಿದರು ಎಂಬುವುದನ್ನು ರಿಷಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

SANCHARI VIJAY US medium

ವಿಜಯ್ ಒಬ್ಬ ಪ್ರತಿಭಾವಂತ ನಟ ಎಂಬುವುದು ನಮಗೆಲ್ಲರಿಗೂ ತಿಳಿದಿದೆ. ನಾವು 13 ಮಾರ್ಗೋಸಾ ಮಹಲ್ ನಾಟಕವನ್ನು ಒಟ್ಟಿಗೆ ವೇದಿಕೆ ಮೇಲೆ ನಟಿಸಿದ್ದೆವು. ಈ ವೇಳೆ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇದನ್ನೂ ಓದಿ: ಲಾಕ್‍ಡೌನ್ ಮೊದಲು ಮಾತನಾಡಿದ್ದೆ, ಈಗ ಆಘಾತಗೊಂಡಿದ್ದೇನೆ: ಸುದೀಪ್

rishi 3 medium

ವಿಜಯ್ ಒಮ್ಮೆ ವೇದಿಕೆ ಮೇಲೆ ಅಭಿನಯಿಸುವಾಗ ಡೈಲಾಗ್‍ನ ಸಾಲೊಂದನ್ನು ಮರೆತು ಹೋಗಿದ್ದರು. ಒಂದು ವೇದಿಕೆ ಮೇಲೆ ಡೈಲಾಗ್ ಮೆರೆತಾಗ ಅದರಿಂದ ಆಗುವ ಆಂತರಿಕ ಭಯ ಒಬ್ಬ ಕಲಾವಿದನಿಗೆ ಮಾತ್ರ ತಿಳಿದಿರುತ್ತದೆ. ಆದರೆ ವಿಜಯ್ ಭಯಗೊಳ್ಳವ ಬದಲಿಗೆ, ತಕ್ಷಣವೇ ದೈಹಿಕವಾಗಿ ಪ್ರತಿಕ್ರಿಯಿಸುವ ಮೂಲಕ ಪಾತ್ರವನ್ನು ನಿಭಾಯಿಸಿದರು. ಅವರ ಆ್ಯಕ್ಟಿಂಗ್ ಎಷ್ಟು ಅದ್ಭುತವಾಗಿತ್ತು ಅಂದರೆ ಒಂದು ನಿಮಿಷದವರೆಗೂ ಒಂದು ಪದವನ್ನು ಹೇಳದೇ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಅವರು ಹೇಳಿದ ಒಂದೇ ಒಂದು ಮಾತಿಗೆ ಪ್ರೇಕ್ಷಕರೇ ಅಚ್ಚರಿಗೊಂಡು ಚಪ್ಪಾಳೆ ತಟ್ಟಿದ್ದರು. ಅವರು ಡೈಲಾಗ್‍ನನ್ನು ಮರೆತಿರುವುದರ ಬಗ್ಗೆ ನಮಗೂ ಸುಳಿವು ನೀಡದೇ, ಡೈಲಾಗ್‍ನನ್ನು ಹೆಚ್ಚಾಗಿ ವೈಭವಿಕರಿಸದೇ ತಮ್ಮ ನಟನಕೌಶಲ್ಯದಿಂದ ಅಭಿನಯಿಸುವ ಮೂಲಕ ಚಪ್ಪಾಳೆಗಿಟ್ಟಿಕೊಂಡಿದ್ದರು. ಡೈಲಾಗ್ ಮರೆತ ವೇಳೆ ಅವರು ಆ ಪಾತ್ರವನ್ನು ಸುಧಾರಿಸಿದ ರೀತಿ ನನಗೆ ಇನ್ನೂ ಕೂಡ ನೆನಪಿದೆ. ಇದು ವೇದಿಕೆಯಲ್ಲಿ ನಡೆದ ಒಂದು ಅದ್ಭುತ ಕ್ಷಣವಾಗಿದೆ.

FotoJet 1 16 medium

ನಾನು ಅಂದು ವಿಜಯ್‍ರಿಂದ 2 ವಿಷಯಗಳನ್ನು ಕಲಿತುಕೊಂಡೆ. ಒಂದು ಯೋಜಿಸಿದ ಪ್ರಕಾರ ನಾಟಕಗಳು ಅಭಿನಯಿಸಲು ಆಗದೇ ಇದ್ದಾಗ, ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಸುಧಾರಿಸುವ ಮೂಲಕ ಅಭಿನಯಿಸಬೇಕು. ಮತ್ತೊಂದು ಸಹೋದ್ಯೋಗಿಗಳೊಂದಿಗೆ ಹಾಗೂ ಸಹ ನಟರೊಂದಿಗೆ ಪ್ರೀತಿ ಹಾಗೂ ಗೌರವದಿಂದಿ ನಡೆದುಕೊಳ್ಳಬೇಕು. ಬೇರೆಯವರಿಗೆ ನಾವು ಸಹಾಯ ಮಾಡಿದರೆ ನಮಗೆ ಯಾವುದೋ ರೀತಿ ಸಹಾಯ ದೊರೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ? 

rishi medium

ಪ್ರಸ್ತುತ ಯುವ ನಟರಲ್ಲಿ ಸಂಚಾರಿ ವಿಜಯ್ ಒಬ್ಬ ಶ್ರೇಷ್ಠ ಕಲಾವಿದರಾಗಿದ್ದು, ಅವರು ರಾಷ್ಟ್ರಪ್ರಶಸ್ತಿ ವಿಜೇತರಾದಾಗ ಇಡೀ ಕನ್ನಡ ಚಿತ್ರರಂಗ ಮತ್ತು ಫಿಲ್ಮ್ ಸಕ್ರ್ಯೂಟ್ ಭಾರಿ ಹೆಮ್ಮೆ ಪಟ್ಟಿತು. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ನಾವು ಯಾವಾಗಲೂ ಹೇಳುತ್ತಿರುತ್ತೇವೆ. ಆದರೆ ಅದು ಅರ್ಧದಲ್ಲಿಯೇ ವ್ಯರ್ಥವಾಗುತ್ತಿರುವುದನ್ನು ಇಂದಿಗೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.

sanchari vijay medium

ಈ ನಷ್ಟವನ್ನು ಭರಿಸಲು ಉತ್ತಮ ಮಾರ್ಗವೆಂದರೆ ಎಲ್ಲರೂ ವ್ಯಕ್ತಿಯನ್ನು ಪ್ರೀತಿಸೋಣ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರನ್ನು ಗೌರವಿಸೋಣ. ಸದ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಜನ್ರಿಗೆ ಒಳ್ಳೆದು ಮಾಡೋಕೆ ಕಾರ್ ಮಾರಲು ತಯಾರಾಗಿದ್ರು ವಿಜಯ್: ಜಗ್ಗೇಶ್

 

View this post on Instagram

 

A post shared by Rishi (@rishi_actor)

Share This Article