_ ಬೆಟ್ಟಿಂಗ್‍ನಲ್ಲಿ ಭಾಗಿಯಾಗಿದ್ದ ಆರೋಪಿ
– ಸಂತ್ರಸ್ತೆ ಸ್ಟೇಜ್ ನರ್ತಕಿಯಾಗಿದ್ದಳು
ಮುಂಬೈ: ಗೆಳೆಯನೊಬ್ಬ ತನ್ನ ಗೆಳತಿಯ 60 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಕದ್ದೊಯ್ದ ಘಟನೆ ಮುಂಬೈನಲ್ಲಿ ನಡೆದಿದೆ.
ಆರೋಪಿ ಗೆಳೆಯನನ್ನು ಸಲ್ಮಾನ್ ಜುಬರ್(29)ರ ಎಂದು ಗುರುತಿಸಲಾಗಿದ್ದು, ಈತ ಬೆಟ್ಟಿಂಗ್‍ನಲ್ಲಿ ಭಾಗಿಯಾಗಿದ್ದನು. ಸಂತಸ್ತೆ ಸ್ಟೇಜ್‍ನಲ್ಲಿ ನರ್ತಕಿಯಾಗಿ ಕೆಲಸ ಮಾಡುತ್ತಿದ್ದಳು. ಇಬ್ಬರೂ ಮುಂಬೈನಲ್ಲಿ ವಾಸವಾಗಿದ್ದರು.
ಗೆಳತಿಯ ಬಳಿ ಸಲ್ಮಾನ್ ಜುಬರ್ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಬಳಿಕ ಆಕೆಯ ಮೇಲೆ ಅತ್ಯಾಚಾರವನ್ನು ಎಸಗಿದ್ದಾನೆ. ಯುವತಿ ಜೊತೆ ಅಪಾರವಾದ ನಂಬಿಕೆಯನ್ನು ಗಳಿಸಿಕೊಂಡು ಮನೆಯ ಬೀರುವಿನ ಬೀಗಗಳನ್ನು ಬದಲಾಯಿಸಿ ಆಭರಣಗಳನ್ನು ಕದ್ದಿದ್ದಾನೆ. ಈ ಸಂಬಂಧ ಗೆಳತಿ ಅಕ್ಟೋಬರ್ 10 ರಂದು ಗೆಳೆಯನ ವಿರುದ್ಧ ಕಳ್ಳತನ ಪ್ರಕರಣವನ್ನು ಮುಂಬೈ ಒಶಿವಾರ ಪೊಲೀಸರಲ್ಲಿ ದಾಖಲಿಸಿದ್ದಳು.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಸಲ್ಮಾನ್ ಜುಬರ್ ಜೈಪುರದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಮುಂಬೈನ ಒಶಿವಾರಾ ಪೊಲೀಸರು ತಿಳಿಸಿದ್ದಾರೆ.