ಲಾಕ್‍ಡೌನ್‍ನಲ್ಲಿ ಗೆಳತಿಯ ಭೇಟಿಗಾಗಿ ಮಿಡಿದ ಯುವಕನ ಹೃದಯ – ಪೊಲೀಸರಿಂದ ಸಿಕ್ತು ಭರ್ಜರಿ ಉತ್ತರ

Public TV
2 Min Read
mumbai police2

– ಪೊಲೀಸರ ಉತ್ತರಕ್ಕೆ ನೆಟ್ಟಿಗರು ಫಿದಾ

ಮುಂಬೈ: ಟ್ವಿಟ್ಟರ್ ಬಳಕೆದಾರರೊಬ್ಬರಿಗೆ ಹಾಸ್ಯದ ದಾಟಿಯಲ್ಲಿಯೇ ಪೊಲೀಸರು ಗಂಭೀರ ಸಂಗತಿಯನ್ನು ಯುವಕನ ಮನಮುಟ್ಟುವಂತೆ ಹೇಳಿದ್ದಾರೆ. ಈ ಉತ್ತರ ಈಗ ಎಲ್ಲರಿಗೂ ಇಷ್ಟವಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸದ್ಯ ಇಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಜೊತೆಗೆ, ನಗರ ಪೊಲೀಸರು ತುರ್ತು ಮತ್ತು ಅಗತ್ಯ ಸೇವೆಗಳ ವಾಹನಗಳ ಸಂಚಾರವನ್ನು ಸೀಮಿತಗೊಳಿಸುವ ಉದ್ದೇಶದಿಂದ ಕಲರ್ ಕೋಡೆಡ್ ಸ್ಟಿಕ್ಕರ್‌ಗಳನ್ನು ಹಾಕುವುದು ಕಡ್ಡಾಯಗೊಳಿಸಿದ್ದಾರೆ.

ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಆದರೆ ಕಲರ್ ಕೋಡೆಡ್ ಸ್ಟಿಕ್ಕರ್ ಬಗ್ಗೆ ಅಶ್ವಿನ್ ವಿನೋದ್ ಎಂಬ ಟ್ವಿಟ್ಟರ್ ಬಳಕೆದಾರರು ವಿಚಿತ್ರ ಪ್ರಶ್ನೆಯನ್ನು ಪೊಲೀಸರ ಮುಂದಿಟ್ಟಿದ್ದಾರೆ. ಈ ಪ್ರಶ್ನೆ ಮತ್ತು ಇದಕ್ಕೆ ಪೊಲೀಸರು ಕೊಟ್ಟ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಗೆಳತಿಯನ್ನು ಭೇಟಿ ಮಾಡಲು ಹೊರಗೆ ಹೋಗುವಾಗ ಯಾವ ಸ್ಟಿಕ್ಕರ್ ಬಳಸಬೇಕು…? ನಾನು ಅವಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಇದು ಟ್ವಿಟ್ಟರ್‍ನಲ್ಲಿ ಮುಂಬೈ ಪೊಲೀಸರಿಗೆ ಎದುರಾದ ಪ್ರಶ್ನೆ. ಈ ಪ್ರಶ್ನೆಗೆ ಕೋಪಗೊಳ್ಳದೆ ಪೊಲೀಸರು ಅತ್ಯಂತ ಶಾಂತವಾಗಿ ಮತ್ತು ಅಷ್ಟೇ ಹಾಸ್ಯಮಯವಾಗಿ ಅದ್ಭುತ ಉತ್ತರ ಕೊಟ್ಟಿದ್ದಾರೆ. ಸದ್ಯ ಈ ಉತ್ತರ ನೆಟ್ಟಿಗರ ಗಮನ ಸೆಳೆದಿದ್ದು, ಬಾರಿ ಮೆಚ್ಚಿಗೆ ವ್ಯಕ್ತವಾಗುತ್ತಿದೆ.

ಇದು ನಿಮಗೆ ಅತ್ಯಗತ್ಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ದುರದೃಷ್ಟವಶಾತ್ ಇದು ನಮ್ಮ ಅಗತ್ಯ ಅಥವಾ ತುರ್ತು ವಿಭಾಗಗಳ ಅಡಿಯಲ್ಲಿ ಬರುವುದಿಲ್ಲ. ದೂರವು ಹೃದಯವನ್ನು ಇನ್ನಷ್ಟು ಹತ್ತಿರ ಮಾಡಿಸುತ್ತದೆ ಮತ್ತು ಪ್ರಸ್ತುತ ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ. ನೀವು ಜೀವಮಾನವಿಡೀ ಒಟ್ಟಾಗಿ ಇರಬೇಕೆಂದು ನಾವು ಬಯಸುತ್ತೇವೆ. ಇದು ಕೇವಲ ಅಂತರ ಅಷ್ಟೇ ಎಂದು ಬರೆದಿರುವ ಪೊಲೀಸರು ಸ್ಟೇ ಹೋಮ್, ಸ್ಟೇ ಸೇಫ್ ಎಂದು ಹ್ಯಾಶ್‍ಟ್ಯಾಗ್‍ನಲ್ಲಿ ಉಲ್ಲೇಖಿಸಿದ್ದಾರೆ. ಪೋಲಿಸರ ಈ ಉತ್ರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *