– ನಾಲ್ವರಿಂದ ಆರಂಭವಾದ ವ್ಯವಹಾರದಲ್ಲಿಂದು 200 ಮಹಿಳೆಯರು
ದೆಹಲಿಯ ನಿವಾಸಿ 40 ವರ್ಷದ ದಿವ್ಯಾ ರಜಪೂತ್ ಗೆಳತಿಯರ ಜೊತೆಗೂಡಿ ಆರಂಭಿಸಿದ ಸ್ಟಾರ್ಟ್ ಅಪ್ ಯಶಸ್ವಿಯಾಗಿದ್ದು, ತಿಂಗಳಿಗೂ ಲಕ್ಷಕ್ಕೂ ಅಧಿಕ ವ್ಯವಹಾರ ನಡೆಸುತ್ತಿದ್ದಾರೆ. ಇದರ ಜೊತೆಗೆ 200ಕ್ಕೂ ಅಧಿಕ ಮಹಿಳೆಯರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಜನರಿಗೆ ಪ್ರತಿನಿತ್ಯ ಬಳಕೆಯ ವಸ್ತುಗಳನ್ನ ಆನ್‍ಲೈನ್ ಮೂಲಕ ದಿವ್ಯಾ ಮಾರಾಟ ಮಾಡುತ್ತಾರೆ. ತಿಂಗಳಿಗೆ 200ಕ್ಕೂ ಅಧಿಕ ಆರ್ಡರ್ ಪೂರೈಸುತ್ತಾರೆ. 20 ವರ್ಷಕ್ಕೂ ಅಧಿಕ ಕಾಲ ಶಿಕ್ಷಣ ಇಲಾಖೆಯಲ್ಲಿ ದಿವ್ಯಾ ಕೆಲಸ ಮಾಡಿದ್ದು, ದಿಢೀರ್ ಅಂತ ಗೆಳತಿಯರ ಸಹಾಯದಿಂದ ತಮ್ಮದೇ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ.
Advertisement
ನನ್ನ ಗೆಳತಿ ಕಾಕುಲ್ ರಿಜ್ವಿ ಮಾರ್ಕೆಟಿಂಗ್ ಕೆಲಸ ಮಾಡಿಕೊಂಡಿದ್ದರು. ಆದ್ರೆ ಕಾಕುಲ್ ಕ್ಯಾನ್ಸರ್ ಗೆ ತುತ್ತಾಗಿದ್ದರಿಂದ, ವೈದ್ಯರು ಆರ್ಗೆನಿಕ್ ಪ್ರೊಡೆಕ್ಟ್ ಬಳಸುವಂತೆ ಸಲಗೆ ನೀಡಿದ್ದರು. ಈ ಸಮಯದಲ್ಲಿ ಕಾಕುಲ್ ಮತ್ತು ನನಗೆ ಈ ರೀತಿಯ ಉತ್ಪನ್ನಗಳನ್ನ ಮಾರಾಟ ಏಕೆ ಮಾಡಬಾರದು ಅನ್ನೋ ಪ್ಲಾನ್ ಹೊಳೆಯಿತು. ನಾನು ಸಹ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಆರ್ಗೆನಿಕ್ ಪ್ರೊಡೆಕ್ಟ್ ಮಾರಾಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡೆ ಎಂದು ದಿವ್ಯಾ ಹೇಳುತ್ತಾರೆ.
Advertisement
Advertisement
ಆರಂಭದಲ್ಲಿ ದೊಡ್ಡ ಆಘಾತ: ಆರ್ಗೆನಿಕ್ ಪ್ರೊಡಕ್ಟ್ ಮಾರಾಟ ಆರಂಭಿಸಿದ ಕೆಲವೇ ದಿನಗಳಲ್ಲಿ ಕಾಕುಲ್ ರಿಜ್ವಿ ಸಾವನ್ನಪ್ಪುತ್ತಾರೆ. ಮಾರ್ಕೆಟಿಂಗ್ ಬಗ್ಗೆ ಹೆಚ್ಚಾಗಿ ತಿಳಿಯದ ದಿವ್ಯಾ ಅವರಿಗೆ ದೊಡ್ಡ ಆಘಾತ ಎದುರಾಗಿತ್ತು. ಆದ್ರೆ ಛಲ ಬಿಡದ ದಿವ್ಯಾ ಮತ್ತೆ ಬ್ಯುಸಿನೆಸ್ ಆರಂಭಿಸಿದ್ರು. ಈ ಕಠಿಣ ಸಮಯದಲ್ಲಿ ದಿವ್ಯಾ ಅವರ ಕೆಲಸಕ್ಕೆ ಪೂಜಾ ಅರೋರ, ಸುರಭಿ ಸಿನ್ಹಾ, ಆಸ್ಥಾ ಮತ್ತು ಕ್ರಿಸ್ಟಿನಾ ಗ್ರೋವರ್ ಸಾಥ್ ನೀಡಿ ಉದ್ಯಮ ಬೆಳವಣಿಗೆಗೆ ಸಹಾಯಕರಾದರು.
Advertisement
ಆರಂಭದಲ್ಲಿ ದಿವ್ಯಾ ಅವರು ಜನನಿಬಿಡ ಪ್ರದೇಶದಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸುತ್ತಿದ್ದರು. ಈ ಮೂಲಕ ಆರ್ಗೆನಿಕ್ ಪ್ರೊಡಕ್ಟ್ ಮಾರುತ್ತಿದ್ದರು. ಲಾಕ್‍ಡೌನ್ ಘೋಷಣೆಯಾದಾಗ ಮನೆಯಿಂದ ಹೊರ ಹೋಗುವ ಹಾಗಿರಲಿಲ್ಲ. ಮತ್ತೆ ದಿವ್ಯಾ ಅವರಿಗೆ ದೊಡ್ಡ ಸವಾಲು ಎದುರಾಯ್ತು. ಗೆಳತಿಯರ ಸಲಹೆ ಮೇರೆಗೆ ದಿವ್ಯಾ ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ತಮ್ಮದೇ ವೆಬ್‍ಸೈಟ್ ಲಾಂಚ್ ಮಾಡಿದರು. ವೆಬ್‍ಸೈಟ್ ನಲ್ಲಿ ಪ್ರತಿ ಉತ್ಪನ್ನಗಳ ಮಾಹಿತಿ, ಬಳಕೆ, ಲಾಭಗಳನ್ನ ವಿವರಿಸಲಾಗಿದೆ. ಅಂದಿನಿಂದ ದಿವ್ಯಾ ಅವರ ಬ್ಯುಸಿನೆಸ್ ಸಂಪೂರ್ಣ ಆನ್‍ಲೈನ್ ರೂಪಕ್ಕೆ ಬದಲಾಯ್ತು.
ಉತ್ಪನ್ನಗಳ ತಯಾರಿಕೆ ಹೇಗೆ?: ಉತ್ಪನ್ನಗಳ ತಯಾರಿಕೆಗೂ ಮುನ್ನ ಅದು ಇಕೋ ಪ್ರೆಂಡ್ಲಿ ಅನ್ನೋದನ್ನ ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರ 20 ರಿಂದ 25 ಮಹಿಳೆಯರ ತಂಡ ವಿವಿಧ ಉತ್ಪನ್ನಗಳನ್ನ ತಯಾರಿಸಲು ಮುಂದಾಗುತ್ತಾರೆ. ಕೆಲ ಆರ್ಗನಿಕ್ ವಸ್ತುಗಳನ್ನ ದಿವ್ಯಾ ಅವರು ಬೇರೆ ರೈತರಿಂದ ನೇರವಾಗಿ ಖರೀದಿಸುತ್ತಾರೆ. ಅಸ್ಸಾಂ, ಹಿಮಾಚಲ, ಮೇಘಾಲಯ ಸೇರಿದಂತೆ ಹಲವು ರಾಜ್ಯಗಳ ರೈತರೊಂದಿಗೆ ದಿವ್ಯಾ ಅವರ ಒಡೆತನದ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಮೇಘಾಲಯದಿಂದ ಅರಿಶಿನ, ನಾಗಾಲ್ಯಾಂಡ್ ನಿಂದ ಗಿಡ ಮೂಲಿಕೆಗಳನ್ನ ಖರೀದಿಸುತ್ತಾರೆ.
ಏನೆಲ್ಲ ಸಿಗುತ್ತೆ?: ದಿವ್ಯಾ ಅವರ ತಂಡ 100ಕ್ಕೂ ಉತ್ಪನ್ನಗಳನ್ನ ಉತ್ಪಾದಿಸಿ ಮಾರಾಟ ಮಾಡುತ್ತಾರೆ. ಇದರ ಜೊತೆಗೆ ಸ್ಟೆಶನರಿ ವಸ್ತುಗಳಾದ ಅಗ್ರಿ ವೆಸ್ಟ್ ಮಗ್, ಕ್ಯಾನ್‍ವಾಸ್ ಬ್ಯಾಗ್, ಹರ್ಬಲ್ ಪ್ರೊಡಕ್ಸ್, ಇಮ್ಯುನಿಟಿ ಬೂಸ್ಟರ್, ಕರಕುಶಲ ಸಾಮಾಗ್ರಿಗಳು, ವೆಲನೆಸ್ ಪ್ರೊಡಕ್ಟ್ ಸಹ ಮಾರಲಾಗುತ್ತದೆ. ಇನ್ನು ಹಬ್ಬ ಸೇರಿದಂತೆ ವಿಶೇಷ ದಿನಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನ ಸಹ ದಿವ್ಯಾ ಮಾರಾಟ ಮಾಡುತ್ತಾರೆ.
ಮುಂದಿನ ದಿನಗಳಲ್ಲಿ ಇದೇ ಪ್ಲಾಟ್‍ಫಾರಂನಲ್ಲಿ ಇನ್ನು ಅಧಿಕ ಬಗೆ ಬಗೆಯ ಉತ್ಪನ್ನಗಳ ಮಾರುವ ಗುರಿಯನ್ನ ಹೊಂದಿದ್ದೇವೆ. ನಮ್ಮ ಉತ್ಪನ್ನಗಳನ್ನ ಗ್ರಾಮೀಣ ಭಾಗದ ಜನ ಉಪಯೋಗಿಸುವಂತಾಗಬೇಕು. ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಸಿಗುತ್ತಿಲ್ಲ. ಹಾಗಾಗಿ ಇವುಗಳ ಮಾರಾಟ ಹೆಚ್ಚಿಸುವ ಮಾರ್ಗದಲ್ಲಿ ನಮ್ಮ ಚಿಂತನೆ ನಡೆದಿದೆ ಎಂದು ದಿವ್ಯಾ ಹೇಳಿದ್ದಾರೆ.