ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಎನ್ ಸಿಪಿ ನಾಯಕ ಶರದ್ ಪವಾರ್ ಸಮರ್ಥಿಸಿಕೊಳ್ಳುವ ಭರದಲ್ಲಿ ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೀವ್ರ ಸಂಚಲನ ಮೂಡಿಸಿರುವ ಮುಂಬೈ ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಪತ್ರದ ವಿಚಾರಕ್ಕೆ ಇಂದು ಮಾಧ್ಯಮಗಳ ಜೊತೆ ಶರದ್ ಪವಾರ್ ಮಾತನಾಡಿದರು.
Advertisement
#WATCH: NCP chief Sharad Pawar replies to questions over BJP's Amit Malviya's tweet that Maharashtra Home Minister Anil Deshmukh was holding a press conference on Feb 15th, as opposed to the NCP chief's statement that he was admitted to hospital at the time. pic.twitter.com/7f4lYLIdaV
— ANI (@ANI) March 22, 2021
Advertisement
ಈ ವೇಳೆ ಪತ್ರದಲ್ಲಿರುವ ವಿಷಯ ಸತ್ಯಕ್ಕೆ ದೂರವಾಗಿದೆ. ಪರಮ್ ಬಿರ್ ಪತ್ರದಲ್ಲಿ ಉಲ್ಲೇಖಿಸಿರುವ ವಿಷಯವೇ ಪ್ರಶ್ನಾರ್ಥಕವಾಗಿದೆ. ಮುಂದೆ ಈ ಆರೋಪದ ಬಗ್ಗೆ ಸಮಗ್ರ ತನಿಖೆಯಾಗಲಿದೆ ಎಂದು ಹೇಳಿದರು.
Advertisement
Param Bir Singh reinstated Sachin Waze, says Sharad Pawar.
✓ Anil Deshmukh appointed Param Bir Singh as Commissioner
✓ Uddhav Thackeray appointed Anil Deshmukh as Home Minister
✓ Sharad Pawar made Udhhav Thackeray as Chief Minister
The POWER behind Sachin Waze is PAWAR !
— BJP Karnataka (@BJP4Karnataka) March 22, 2021
Advertisement
ಫೆಬ್ರವರಿ ಮಧ್ಯಭಾಗದಲ್ಲಿ ಅಂದರೆ ಫೆಬ್ರವರಿ 6ರಿಂದ 16ರ ಮಧ್ಯೆ ಅನಿಲ್ ದೇಶ್‌ಮುಖ್ ಅವರು ಕೆಲವು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪರಮ್ ಬಿರ್ ಸಿಂಗ್ ಪತ್ರದಲ್ಲಿ ಹೇಳಿದ್ದಾರೆ. ಆದರೆ ಆ ಸಮಯದಲ್ಲಿ ಅನಿಲ್ ದೇಶ್ ಮುಖ್ ಅವರು ಕೊರೊನಾ ಬಂದಿದ್ದರಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದಿದ್ದಾರೆ.
Sharad Pawar claims Anil Deshmukh was in hospital from 5-15 Feb and in quarantine from 16-27 Feb.
But Anil Deshmukh was holding a press conference on 15 Feb…
How lies fall flat! https://t.co/ceZGxFaIYz
— Amit Malviya (@amitmalviya) March 22, 2021
ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಬಿಜೆಪಿಯ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ಅದಕ್ಕೆಲ್ಲಾ ಪ್ರಾಮುಖ್ಯತೆ ನೀಡಬೇಕಾಗಿಲ್ಲ, ಅದು ಪ್ರಮುಖವಾಗುವುದೂ ಇಲ್ಲ, ಪತ್ರದಲ್ಲಿ ಮಾಡಿರುವ ಆರೋಪ ಸಮಯದಲ್ಲಿ ಅನಿಲ್ ದೇಶ್ ಮುಖ್ ಆಸ್ಪತ್ರೆಯಲ್ಲಿದ್ದರು ಎಂದರು.
Shri Sharad Pawar ji said, from 15th to 27th February HM Anil Deshmukh was in home quarantine.
But actually along with security guards & media he was seen taking press conference! https://t.co/r09U8MZW2m
— Devendra Fadnavis (@Dev_Fadnavis) March 22, 2021
ಶರದ್ ಪವಾರ್ ಈ ಹೇಳಿಕೆ ನೀಡುತ್ತಿದ್ದಂತೆ ವಿಡಿಯೋ ವೈರಲ್ ಆಗಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಶರದ್ ಪವಾರ್ ಅವರು ಹೇಳಿದಂತೆ ಅನಿಲ್ ದೇಶ್‌ಮುಖ್ ಫೆಬ್ರವರಿ 15ರಿಂದ 27ರವರೆಗೆ ಆಸ್ಪತ್ರೆಯಲ್ಲಿರಲಿಲ್ಲ. ಹೋಂ ಕ್ವಾರಂಟೈನ್ ನಲ್ಲಿದ್ದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ಅನಿಲ್ ದೇಶ್‌ಮುಖ್ ಮಾಡಿದ್ದ ವಿಡಿಯೋ ಟ್ವೀಟ್ ಅನ್ನು ರಿಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಏನಿದು ವಿವಾದ?
ಮಹಾರಾಷ್ಟ್ರದ ಗೃಹ ಸಚಿವರಾದ ಅನಿಲ್ ದೇಶ್‌ಮುಖ್ ಪ್ರತಿ ತಿಂಗಳು 100 ಕೋಟಿ ರು. ಹಫ್ತಾ ಕೇಳುತ್ತಾರೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ದೂರು ನೀಡಿದ್ದರು. ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ಇಟ್ಟ ಅಧಿಕಾರಿಯನ್ನು ಬಳಸಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
It seems Sharad Pawar ji is not briefed properly on Parambir Singh letter.
In this lefter only, the SMS evidence shows that the meeting date was mentioned as end of February.
Now who is diverting issue? pic.twitter.com/CTHzQ7meZO
— Devendra Fadnavis (@Dev_Fadnavis) March 22, 2021